Assault in land dispute 
ರಾಜ್ಯ

ಜಮೀನು ವಿಚಾರದ ಜಗಳಲ್ಲಿ ಹಲ್ಲೆ

ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿ ಶಾಮರಾವ್​ ಹೊಸಪೇಟೆ ಗ್ರಾಮದಲ್ಲಿ ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿ ಹಲ್ಲೆ ಮಾಡಿರುವ ಪ್ರಕರಣ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಗ್ರಾಮದಲ್ಲಿನ 20 ಗುಂಟೆ ಜಮೀನಿನಲ್ಲಿ ರೇಷ್ಮೆ ಮತ್ತು ಸೀಮೆ ಹುಲ್ಲನ್ನು ಬೆಳೆದಿರುವ ಜಾಗದಲ್ಲಿ ಅಕ್ರಮವಾಗಿ ಗ್ರಾಮದ ನಾರಾಯಣಸ್ವಾಮಿ ಮುತ್ತು ಕುಟುಂಬದವರು ಪೈಪ್​ ಹಾಕುತ್ತಿದ್ದು, ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ಶಿವಶಂಕರ್​ ದೂರು ನೀಡಿದ್ದಾರೆ.