Assam Election Results 2026
- ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಸಜ್ಜಾದ ಬಿಜೆಪಿ ಮೈತ್ರಿಕೂಟ.
- 126 ಕ್ಷೇತ್ರಗಳ ಪೈಕಿ 101ರಲ್ಲಿ ಮುನ್ನಡೆ ಸಾಧಿಸಿ ವಿಪಕ್ಷಗಳನ್ನು ಧೂಳೀಪಟ ಮಾಡಿದ ಕೇಸರಿ ಪಡೆ.
- ಸೋಶಿಯಲ್ ಮೀಡಿಯಾದಲ್ಲಿ ಮೋದಿ ಅವರ ಎಐ ವಿಡಿಯೋ ಮೂಲಕ ಸಂಭ್ರಮ ಹಂಚಿಕೊಂಡ ಬಿಜೆಪಿ.
Assam Election Results 2026:
ಅಸ್ಸಾಂ ವಿದಾನಸಭೆ ಚುನಾವಣೆಯಲ್ಲಿ ಚಹಾ ನಾಡಿನ ಜನರು ಬಿಜೆಪಿಯನ್ನು ನೆಚ್ಚಿಕೊಂಡಿದ್ದಾರೆ. ಹ್ಯಾಟ್ರಿಕ್ ಗೆಲುವಿನತ್ತ ಬಿಜೆಪಿ ಸಾಗಿದ್ದು, ಈ ಮಧ್ಯೆ ಬಿಜೆಪಿಯು ಎಕ್ಸ್ನಲ್ಲಿ ಪ್ರಧಾನಿ ಮೋದಿಯವರ ಶಿವನ ಅವತಾರದ ಎಐ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ
ಏಪ್ರಿಲ್9 ರಂದು ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ಲಗುಬಗೆಯಿಂದ ನಡೆಯುತ್ತಿದ್ದು, ಮಧ್ಯಾಹ್ನ 3ರವೇಳೆಗೆ ಬರೋಬ್ಬರಿ 99 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಕೇವಲ 23 ಸ್ಥಾನಗಳ ಮುನ್ನಡೆ ಕಾಯ್ದುಕೊಂಡು, ಗೆಲ್ಲುವ ನಿರೀಕ್ಷೆಯನ್ನು ಕಳೆದುಕೊಂಡಿದೆ.
ವರ್ಷಗಳ ಹಿಂದೆ ಕಾಂಗ್ರೆಸ್ ಸುದೀರ್ಘ ಕಾಲ ಅಸ್ಸಾಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಅದೇ ಸಂಭ್ರಮ ಮರುಕಳಿಸುವ ಸಂಭ್ರಮದಲ್ಲಿದ್ದ ನಾಯಕರಿಗೆ ಕಹಿ ಸುದ್ದಿ ಸಿಕ್ಕಿದೆ. ತರುಣ್ ಗೊಗೋಯ್ ಅವರು ಸಿಎಂ ಆಗಿದ್ದಾಗ ಅವರ ಜೊತೆ ಬೆಂಬಲ ಕೊಡುತ್ತ ನಿಂತಿದ್ದು, ಹಿಮಂತ ಬಿಸ್ವಾ ಶರ್ಮಾ ಅವರು, ಅಂದು ಕಾಗ್ರೆಸ್ಗೆ ಬಳಸಿದ್ದ ವಿಜಯದ ಹಾದಿಯನ್ನೇ ಈ ಬಾರಿಯೂ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅಸ್ಸಾಂನ ಪ್ರತಿ ಜಿಲ್ಲೆಯ ಬಿಜಪಿ ಕಚೇರಿಗಳ ಮುಂದೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.ಸದ್ಯ ಅಸ್ಸಾಂ ಬಿಜೆಪಿ ಘಟಕದ ಸಂಭ್ರಮ ಮುಗಿಲು ಮುಟ್ಟಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರ ಎಐ ಜನರೇಟೆಡ್ ವಿಡಿಯೋವೊಂದು ಭಾರಿ ವೈರಲ್ ಆಗಿದೆ.
ಎಕ್ಸ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕೈಯಲ್ಲಿ ಢಮರುಗವುಳ್ಳ ತ್ರಿಶೂಲ ಹಿಡಿದು, ಆಕಾಶದತ್ತ ತೋರುತ್ತಾರೆ. ಆಗ ಸಿಡಿಲೊಡೆದು ಶಿವನು ಪ್ರತ್ಯಕ್ಷನಾಗುತ್ತಾನೆ. ಪ್ರಧಾನಿಯವರು ಈ ಹಿಂದೆ ಕಾಶಿಗೆ ಭೇಟಿ ನೀಡಿದ್ದ ಸಂದರ್ಭದ ದೃಶ್ಯಗಳನ್ನು ಎಐ ಮೂಲಕ ಎಡಿಟ್ ಮಾಡಿ ಸಿದ್ಧಪಡಿಸಲಾದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ, (ಏಜನ್ಸೀಸ್).