ಕಲಬುರಗಿಯ ರೋಟರಿ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಗುಲ್ಬರ್ಗ ದಣದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಡಾ.ಗೌತಮ ಜಹಾಗೀರದಾರ್, ಆಶಿಶ್ ತುಶೆ, ರವಿಶಂಕರ ಜಮದರಖಾನಿ, ಮಣಿಲಾಲ್ ಶಾ, ಮಾಣಿಕ ಪವಾರ್, ಡಾ.ಸುಧಾ ಹಾಲಕಾಯಿ ಇತರರಿದ್ದರು.
- ರೋಟರಿ ಕ್ಲಬ್ ಆಫ್ ಗುಲ್ಬರ್ಗ ದಕ್ಷಿಣ ಘಟಕದ ಪದಾಧಿಕಾರಿಗಳ ಪದಗ್ರಹಣ
ಕಲಬುರಗಿ: ರೋಟರಿ ಕ್ಲಬ್ ಆಫ್ ಗುಲ್ಬರ್ಗ ದಕ್ಷಿಣದ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಪಾಲ್ ಹ್ಯಾರಿಸ್ ಆಡಿಟೋರಿಯಂನಲ್ಲಿ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.
ಅಧ್ಯಕ್ಷ ಆರ್.ಟಿ.ಎನ್. ಆಶಿಶ್ ತುಶೆ ಹಾಗೂ ಕಾರ್ಯದರ್ಶಿಯಾಗಿ ಆರ್.ಟಿ.ಎನ್. ರವಿಶಂಕರ ಜಮದರಖಾನಿ ಅಧಿಕಾರ ಸ್ವೀಕರಿಸಿದರು. ನಿವೃತ್ತ ವೈದ್ಯ ಹಾಗೂ ರೋಟರಿ ಸಂಸ್ಥೆ ಹಿರಿಯ ಮುಖಂಡ ಡಾ.ಗೌತಮ್ ಜಹಗೀರದಾರ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಆಶಿಶ್ ತುಶೆ (ಅಧ್ಯಕ್ಷ), ದಿನೇಶ್ ಆಣಕಲ್ (ಅಧ್ಯಕ್ಷ ಚುನಾಯಿತ), ಪ್ರವಿಣ್ ಕುಲಕರ್ಣಿ (ತಕ್ಷಣದ ಮಾಜಿ ಅಧ್ಯಕ್ಷ), ರವಿಶಂಕರ ಜಮದರಖಾನಿ (ಕಾರ್ಯದರ್ಶಿ), ಡಾ. ಸಂಗಮೇಶ ಹಟ್ಟಿ (ಜಂಟಿ ಕಾರ್ಯದರ್ಶಿ), ಸಿಎ ಉಮೇಶ ರಂಸರ್ಜೆ (ಖಜಾಂಚಿ), ಗಿರಿಧರ್ ಮುಕ್ಕ (ಕ್ಲಬ್ ಮಾರ್ಗದರ್ಶಕ), ಮಹಾದೇವ ಖೇಣಿ (ಕ್ಲಬ್ ಸಲಹೆಗಾರ), ಶಿವಕುಮಾರ್ ಕಲ್ಯಾಣಿ (ಕ್ಲಬ್ ತರಬೇತುದಾರ), ಮಂಜುನಾಥ ದೇಶಮುಖ (ಸಾರ್ಜೆಂಟ್ ಅಟ್ ಆಮ್ಸ್ರ್), ಸಿಎ ಮಾಣಿಕ್ ಮಂದಕನಳ್ಳಿ (ಕ್ಲಬ್ ಆಡಳಿತ), ಪ್ರಜೋತ್ ಕದಮ್ (ಸದಸ್ಯತ್ವ ಅಭಿವೃದ್ಧಿ), ಶಿವರಾಜ ಇಂಗಿನಶೆಟ್ಟಿ (ರೋಟರಿ ಫೌಂಡೇಷನ್), ಶರಣಬಸಪ್ಪ ಚಿಂಚನಸೂರ (ಸೇವಾ ಯೋಜನೆ), ರಾಹುಲ್ ಟೆಂಗಳಿ (ಸಾರ್ವಜನಿಕ ಚಿತ್ರಣ), ಡಾ.ಉಮಾಕಾಂತ ರಾಜಗಿರಿ (ಪಲ್ಸ್ ಪೋಲಿಯೀ), ಮಂಜುನಾಥ ವಸದ್ (ಯುವ ಸೇವೆ), ಮಹೇಶ್ ಆರ್.ಮಠ (ವೃತ್ತಿಪರ ಸೇವೆ), ಸಂತೋಷ್ ನಂದ್ಯಾಳ (ಸಾಕ್ಷರತೆ), ಪ್ರಫುಲ್ ನಮೋಶಿ (ಅನುದಾನ ಮತ್ತು ಯೋಜನೆ), ಗಣೇಶ್ ನಿಗ್ಗುಡಗಿ (ಸೆವೆನ್ ಏರಿಯಾ ಆಫ್ ಫೋಕಸ್), ಜಗದೀಶ ಗಾಜರೆ (ವೆಬ್ ಮತ್ತು ಸಂವಹನ), ಸಂತೋಷ್ ಮಾಳಿ (ಕ್ಲಬ್ ಬುಲೆಟಿನ್) ಅಧಿಕಾರ ವಹಿಸಿಕೊಂಡರು.
ಜಿಲ್ಲಾ ಮಾಜಿ ಗವರ್ನರ್ಗಳಾದ ಸಿಎ ಮಣಿಲಾಲ್ ಶಾ, ಮಾಣಿಕ್ ಪವಾರ್, ವಲಯ-11ರ ಸಹಾಯಕ ಗವರ್ನರ್ ಡಾ. ಸುಧಾ ಹಾಲಕಾಯಿ ಇತರರಿದ್ದರು. ಮಾಣಿಕ್ ಮಂದಕನಳ್ಳಿ ನಿರೂಪಣೆ ಮಾಡಿದರು. ದಿನೇಶ್ ಅಣಕಲ್ ಸ್ವಾಗತಿಸಿದರು. ರವಿಶಂಕರ ಜಮದರಖಾನಿ ವಂದಿಸಿದರು.