ಸೂಲಿಬೆಲೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಯುವ ಸೌರಭ ಕಾರ್ಯಕ್ರಮವನ್ನು ಕಾಲೇಜು ಸಮಿತಿ ಉಪಾಧ್ಯಕ್ಷ ಬಿ.ಎನ್​.ಗೋಪಾಲಗೌಡ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಸಹಾಯಕ ನಿರ್ದೇಶಕಿ ಕಲ್ಪನಾ, ಜೇನುಗೂಡು ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್​ ಇತರರು ಇದ್ದರು. 
ರಾಜ್ಯ

ನೆಲದ ಪರಂಪರೆ ಪಸರಿಸುವ ರಾಯಭಾರಿಗಳಾಗಿ / SULIBELE

ಸೂಲಿಬೆಲೆ : ಇತ್ತೀಚೆಗೆ ದೃಶ್ಯ ಮಾಧ್ಯಮದ ಹಾವಳಿಯಿಂದ ಯುವ ಸಮೂಹ ಸಾಂಸತಿಕ ಕ್ಷೇತ್ರದಿಂದ ವಿಮುಖರಾಗುತ್ತಿರುವುದು ವಿಷಾದನೀಯ ಎಂದು ಸೂಲಿಬೆಲೆ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್​.ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸತಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸೂಲಿಬೆಲೆ ಸ್ವತಂತ್ರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯುವ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡು&ನುಡಿ ಸಂಸತಿಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ರವಾನಿಸುವ ರಾಯಭಾರಿಗಳಾಗಬೇಕು. ಕನ್ನಡವನ್ನು ಪಸರಿಸುವ ಕಾರ್ಯವಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಕನ್ನಡಿಗರ ಸ್ವಾಭಿಮಾನ ಪ್ರತಿಕವಾದ ಕನ್ನಡ ಭಾಷೆಯನ್ನು ಉತ್ತುಂಗದಲ್ಲಿ ಮುನ್ನೆಡೆಸುವ ಕೆಲಸ ಯುವಕರಿಂದ ಮಾತ್ರ ಸಾಧ್ಯ. ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಮಣ್ಣಿನ ಸಂಸತಿ, ಕಲೆ, ನಾಡು, ನುಡಿಯ ಚರಿತ್ರೆಯನ್ನು ಎಲ್ಲೆಡೆ ಪಸರಿಸಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಕಲ್ಪನಾ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಯುವ ಕಲಾವಿದರನ್ನು ಇಲಾಖೆಯಲ್ಲಿ ನೋಂದಣಿ ಮಾಡಿಸಿ ಅವರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ನಿರ್ಮಾಣಕ್ಕೆ ಇಲಾಖೆ ಬದ್ಧವಾಗಿದೆ. ಸಮೂಹನೃತ್ಯ, ಸುಗಮಸಂಗೀತ, ಜನಪದಗೀತೆ, ನಗಾರಿ ವಾದನ, ತಮಟೆವಾದನ, ನಾಟಕಗಳ ಮೂಲಕ ಯುವಕರ ಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುವುದು ಎಂದರು.
ಪಿಯು ಕಾಲೇಜು ಪ್ರಾಂಶುಪಾಲ ಮಂಜುನಾಥ್​, ಮುರಾರ್ಜಿ ದೇಸಾಯಿ ಪ್ರಾಂಶುಪಾಲ ವೆಂಕಟೇಶ್​, ಪಿಡಿಒ ಮಂಜುನಾಥ್​, ಕಲಾವಿದ ಸೀನಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಿಯಾವುಲ್ಲಾ, ಪ್ರಶಾಂತ್​, ಜೇನುಗೂಡು ಟ್ರಸ್ಟ್​ ನಿರ್ದೇಶಕ ಸೈಯದ್​ ಮಹಬೂಬ್​, ನಯಾಜಖಾನ್​, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್​, ಗ್ರಾಪಂ ಸದಸ್ಯರಾದ ಶಬ್ಬಿರ್​, ಖಾಜಾ, ಕೃಷ್ಣಪ್ಪ, ನಾರಾಯಣಪ್ಪ, ರಾಜೇಶ್ವರಿ ಶಿವಣ್ಣ, ಶಿವರುದ್ರಪ್ಪ, ಉಪನ್ಯಾಸಕ ಕುಮಾರ್​, ಕನ್ನಡ ಮತ್ತು ಸಂಸತಿ ಇಲಾಖೆ ರವಿಕುಮಾರ್​, ರಾಜೇಶ್​ ಇತರರು ಇದ್ದರು.

ಯುವಕರಲ್ಲಿನ ಕಲಾ ಪ್ರತಿಭೆ ಹಾಗೂ ಕೌಶಲವನ್ನು ಹೊರ ಹಾಕಲು ಯುವಸೌರಭ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ.

— > ಬೆಟ್ಟಹಳ್ಳಿ ಗೋಪಿನಾಥ್​ ಪ್ರಧಾನ ಕಾರ್ಯದರ್ಶಿ, ಜೇನುಗೂಡು ಟ್ರಸ್ಟ್​