ಅರುಣೋದಯ ಕೇಸರಿ ಎನ್​ಕ್ಲೇವ್ 
ರಾಜ್ಯ

ಪ್ರಕೃತಿ ಮಡಿಲಲ್ಲಿ ಅರುಣೋದಯ ಕೇಸರಿ ಎನ್​ಕ್ಲೇವ್! ಗ್ರಾಹಕರಿಗೆ ಲಾಂಚಿಂಗ್ ವಿಶೇಷ ಉಡುಗೊರೆ; ಬಂಡವಾಳ ಹೂಡಿಕೆಗೆ ಸೂಕ್ತ ತಾಣ!

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ರಾಮನಗರ ಸಮೀಪ ಕೆ-ಸ್ಕೆ್ವೕರ್ ಮತ್ತು ಸ್ಮಾರ್ಟ್ ಸಿಟಿ (ಶ್ರೀ ತಿರುಮಲ ಪ್ರಾಜೆಕ್ಟ್) ವತಿಯಿಂದ ‘ಅರುಣೋದಯ ಕೇಸರಿ ಎನ್​ಕ್ಲೇವ್’ ಬಡಾವಣೆಯನ್ನು ಅಭಿವೃದ್ಧಿಪಡಿಸಿದ್ದು, ಸೈಟ್​ಗಳ ಬುಕ್ಕಿಂಗ್ ಶುರುವಾಗಿದ್ದು, ಬಂಡವಾಳ ಹೂಡುವವರಿಗೆ ಸೂಕ್ತ ತಾಣವಾಗಿದೆ. ಶನಿವಾರ (ಅ.31) ಮತ್ತು ಭಾನುವಾರ (ನ.1) ಲಾಂಚಿಂಗ್ ಇದೆ. ಸಂಸ್ಥೆ ಸ್ಥಾಪನೆಯಾಗಿ 12ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಇದರ ಪ್ರಯುಕ್ತ ನಿವೇಶನ ಖರೀದಿದಾರರಿಗೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದೆ. ಇದರಿಂದ ಗ್ರಾಹಕರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನಿವೇಶನ ಲಭ್ಯವಿದ್ದು, ಬಂಡವಾಳ ಹೂಡಲು ಸುವರ್ಣ ಅವಕಾಶ. ಬಿಎಂಆರ್​ಡಿಎ, ರೇರಾ ಅನುಮೋದಿತ ಯೋಜನೆಯಾಗಿರುವುದರಿಂದ ಬ್ಯಾಂಕ್​ಗಳಿಂದಲೂ ಸಾಲ ಸೌಲಭ್ಯ ದೊರೆಯಲಿದೆ. ಇದರಿಂದಾಗಿ ಗ್ರಾಹಕರು ಬುಕ್ಕಿಂಗ್ ಮಾಡಿಕೊಳ್ಳಲು ಸೂಕ್ತ ಸ್ಥಳವಾಗಿದೆ.

ಭವಿಷ್ಯದ ಅಸ್ತಿಗಾಗಿ ಬಂಡವಾಳ ಹೂಡಿ: ಪ್ರಮುಖ ವಸತಿ ನಿವೇಶನಗಳ ಯೋಜನೆಯು ಪ್ರಕೃತಿ ಮಡಿಲಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿಮಾಣಗೊಂಡಿದೆ. ಬೆಂಗಳೂರá--ಮೈಸೂರು ಎಕ್ಸ್​ಪ್ರೆಸ್​ವೇ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರೋಡ್​ಗೆ ಹತ್ತಿರದಲ್ಲಿದೆ. ರೈಲ್ವೆ ನಿಲ್ದಾಣ, ಜಿಲ್ಲಾಡಳಿತ ಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಶಾಪಿಂಗ್ ಮಾಲ್​ಗಳು ಬಡಾವಣೆ ಸಮೀಪದಲ್ಲಿವೆ.

12ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಕೊಡುಗೆ

ಈಗಾಗಲೇ ಉದ್ಘಾಟನೆಗೊಂಡಿರುವ ಬಡಾವಣೆಯಲ್ಲಿ ನಿವೇಶನಗಳ ಮಾರಾಟ ಶುರುವಾಗಿದ್ದು, ಶನಿವಾರ ಮತ್ತು ಭಾನುವಾರವೂ ಪ್ರಿಲಾಂಚಿಂಗ್ ರಿಯಾಯಿತಿ ಲಭ್ಯವಿದೆ. ಕೆ-ಸ್ಕೆ್ವೕರ್ ಮತ್ತು ಸ್ಮಾರ್ಟ್ ಸಿಟಿ (ಶ್ರೀ ತಿರುಮಲ ಪ್ರಾಜೆಕ್ಟ್) ಸಂಸ್ಥೆಯ 12ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ರಿಯಾಯಿತಿ ಜತೆಗೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದೆ. ಈ ಭಾಗದಲ್ಲಿ ಪ್ರಸ್ತುತ ಇರುವ ಮಾರುಕಟ್ಟೆ ದರಕ್ಕಿಂತ ವಿಶೇಷ ಕೊಡುಗೆಯಾಗಿ 3,199 ರೂ. ಉದ್ಘಾಟನಾ ದರವನ್ನಾಗಿ ನಿಗದಿಪಡಿಸಿದೆ. ವಾರ್ಷಿಕೊತ್ಸವದ ಪ್ರಯುಕ್ತ ನಿವೇಶನದ ದರದ ಮೇಲೆ ಚ.ಅಡಿಗೆ 50 ರೂ. ವಿನಾಯಿತಿ ನೀಡಲಾಗಿದೆ. ಜತೆಗೆ ಸ್ಪಿನ್ ಫಾರ್ಚೂನ್​ನಲ್ಲಿ ಬೈಕ್, ವಿದೇಶಿ ಪ್ರವಾಸ, ಗೃಹೋಪಯೋಗಿ ವಸ್ತು, ನಗದು, ಉಡುಗೊರೆ ಸಿಗಲಿದೆ. ಸ್ಪಿನ್ ಫಾರ್ಚೂನ್​ನಲ್ಲಿ ಒಲಿದ ವಸ್ತು ಬೇಡವೆನಿಸಿದರೆ, ಆ ಅದೃಷ್ಟಶಾಲಿ ನಿವೇಶನದ ದರದ ಮೇಲೆ ಮತ್ತಷ್ಟು ರಿಯಾಯಿತಿ ಪಡೆಯಬಹುದು.

ಸುಸಜ್ಜಿತ ಸೌಲಭ್ಯಗಳು

ಓಪನ್ ಸ್ಪೇಸ್, ವಿಶಾಲವಾದ ಸುಸಜ್ಜಿತ ರಸ್ತೆಗಳು, ಭೂಗರ್ಭ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಪೈಪ್​ಲೈನ್, ಒಳಚರಂಡಿ ವ್ಯವಸ್ಥೆ, ಒಳಚರಂಡಿ ಸಂಸ್ಕರಣಾ ಘಟಕ, ಬೀದಿದೀಪಗಳು, ಮರ-ಗಿಡಗಳು, ಈಜುಕೊಳ, ಜಾಗಿಂಗ್ ಟ್ರ್ಯಾಕ್, ಪಾರ್ಕ್, ಮಕ್ಕಳ ಆಟದ ಮೈದಾನ, ಹೊರಾಂಗಣ ಆಟದ ಮೈದಾನ ಸೇರಿ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಜೀವನಶೈಲಿಗೆ ಹೊಸ ಮೆರುಗು ತರುವ ರೀತಿ ‘ಅರುಣೋದಯ ಕೇಸರಿ ಎನ್​ಕ್ಲೇವ್‘ ಬಡಾವಣೆ ತಲೆಯೆತ್ತಿದೆ.