ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸುವಂತೆ ಹುಣಸಗಿ ತಾಲೂಕಿನ ರೈತ ಸಂಪರ್ಕ ಕೇಂದ್ರದಿAದ ಕಚಕನೂರು, ಕಾಮನಟಗಿ, ಬನ್ನೆಟ್ಟಿ, ತಳ್ಳಳಿ(ಕೆ), ಬಾಚಿಮಟ್ಟಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಯಿತು. ಕೃಷಿ ಅಽಕಾರಿ ಸಿದ್ಧಾರ್ಥ ಪಾಟೀಲ್ ಹಾಗೂ ರೈತರು ಇದ್ದರು. 
ರಾಜ್ಯ

ಆರ್ಥಿಕ ಭದ್ರತೆಗೆ ಬೆಳೆ ವಿಮೆ ಮಾಡಿಸಿ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಅಽಕಾರಿ ಸಿದ್ಧಾರ್ಥ ಪಾಟೀಲ್ ಸಲಹೆ
  • ರೈತ ಸಂಪರ್ಕ ಕೇಂದ್ರದಿAದ ಜಾಗೃತಿ
ಹುಣಸಗಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇತರೆ ಬೆಳೆ ಹಾನಿಯಿಂದಾಗುವ ನಷ್ಟದ ರಕ್ಷಣೆಗಾಗಿ ಪ್ರಧಾನಮಂತ್ರಿ -Àಸಲ್ ಭೀಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ ವಿಮೆ ನೋಂದಣಿ ಆರಂಭವಾಗಿದ್ದು, ರೈತರು ಕಡ್ಡಾಯವಾಗಿ ಈ ವಿಮೆ ಮಾಡಿಕೊಳ್ಳಬೇಕು ಎಂದು ಕೃಷಿ ಅಽಕಾರಿ ಸಿದ್ಧಾರ್ಥ ಪಾಟೀಲ್ ಹೇಳಿದರು.
ತಾಲೂಕಿನ ರೈತ ಸಂಪರ್ಕ ಕೇಂದ್ರ ಹಾಗೂ ಕಚಕನೂರು, ಕಾಮನಟಗಿ, ಬನ್ನೆಟ್ಟಿ, ಕೆ.ತಳ್ಳಳಿ, ಬಾಚಿಮಟ್ಟಿ ಗ್ರಾಮಗಳಲ್ಲಿ ಜಾಗೃತಿ ಆಂದೋಲನ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ದು, ಹೆಸರು, ತೊಗರಿ, ಸೂರ್ಯಕಾಂತಿ, ಹತ್ತಿ, ಸಜ್ಜೆ ಹಾಗೂ ಭತ್ತ ಸೇರಿ ಪ್ರಮುಖ ಬೆಳೆಗಳಿಗೆ ವಿಮಾ ಮೊತ್ತ ಹಾಗೂ ರೈತರ ವಿಮಾ ಕಂತು ನಿಗದಿಪಡಿಸಲಾಗಿದೆ.
ಉದ್ದು ಮತ್ತು ಹೆಸರಿಗೆ ಜು.೧೫, ತೊಗರಿ, ಸೂರ್ಯಕಾಂತಿ, ಹತ್ತಿ ಹಾಗೂ ಸಜ್ಜೆ ಬೆಳೆಗಳಿಗೆ ಜು.೩೧, ಮತ್ತು ಭತ್ತ ಹಾಗೂ ಮಧ್ಯಮ ಅವಽಯ ತೊಗರಿಗೆ ಆ.೧೪ರವರೆಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ರೈತರು ತಮ್ಮ ಬೆಳೆಗಳಿಗೆ ನಿಗದಿತ ಕಂತು ಪಾವತಿಸಿ ವಿಮಾ ಸೌಲಭ್ಯ ಪಡೆಯಬಹುದು. ಬೆಳೆ ವಿಮೆ ಮಾಡಿಸಿಕೊಳ್ಳಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಪಹಣಿ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರ, ಸಿಎಸ್‌ಸಿ ಕೇಂದ್ರ ಹಾಗೂ ಸಂಬAಽತ ಬ್ಯಾಂಕ್‌ಗಳಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಬಹುದು ಎಂದು ಅವರು ತಿಳಿಸಿದರು. ಈ ವೇಳೆ ರೈತರು ಭಾಗವಹಿಸಿದ್ದರು.