ಆರ್ಟ್ ಆಫ್ ಗಿವಿಂಗ್ ವಾರ್ಷಿಕೋತ್ಸವದ ಅಂಗವಾಗಿ ಪೌರಕಾರ್ಮಿಕರಿಗೆ ಸೀರ ಮತ್ತು ಹಣ್ಣು ವಿತರಿಸಲಾಯಿತು. ಸಂಸ್ಥೆಯ ಮಮತಾ ಎನ್.ಸ್ವಾಮಿ, ಅನಿತಾ ಗುರುಪ್ರಸಾದ್, ಆರ್‌ಡಿಪಿಆರ್ ಜಂಟಿ ಕಾರ್ಯದರ್ಶಿ ಜಯಲಕ್ಷ್ಮಿ ಉಪಸ್ಥಿತರಿದ್ದರು.  
ರಾಜ್ಯ

ಆರ್ಟ್ ಆಫ್ ಗಿವಿಂಗ್ ವಾರ್ಷಿಕೋತ್ಸವ; ಪೌರಕಾರ್ಮಿಕರಿಗೆ ಉಡುಗೊರೆ

ಪ್ರಮುಖ ಮುಖ್ಯಾಂಶಗಳು

  • ಆರ್ಟ್ ಆಫ್ ಗಿವಿಂಗ್ ವಾರ್ಷಿಕೋತ್ಸವ; ಪೌರಕಾರ್ಮಿಕರಿಗೆ ಉಡುಗೊರೆ
  • ಇಂಡಿಯನ್ ಹೈಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿತರಣೆ
  • ಶೇರ್ ಟು ಶೈನ್ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮ ಆಯೋಜನೆ

ಬೆಂಗಳೂರು: ಆರ್ಟ್ಆಫ್ ಗಿವಿಂಗ್‌ನ 13ನೇವಾರ್ಷಿಕೋತ್ಸವ ಭಾನುವಾರ (ಮೇ17) ನಡೆಯಲಿದ್ದುಆ ಹಿನ್ನೆಲೆಯಲ್ಲಿ ಶುಕ್ರವಾರಬಸವೇಶ್ವರ ನಗರದ ಇಂಡಿಯನ್ಹೈಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರು,ಆಯಾಗಳು ಮತ್ತುಬಡಮಹಿಳೆಯರಿಗೆ ಸೀರೆ ಮತ್ತುಹಣ್ಣನ್ನು ವಿತರಿಸಲಾಯಿತು.

ಶೇರ್ಟು ಶೈನ್ ಎಂಬ ಘೋಷ ವಾಕ್ಯದಡಿಹಮ್ಮಿಕೊಂಡಿರುವ ವಾರ್ಷಿಕೋತ್ಸವದಲ್ಲಿಆರ್ಟ್ ಆಫ್ ಗಿವಿಂಗ್ ಸ್ವಯಂಸೇವಕರು,ಶಾಲೆ ಎದುರಿನರಸ್ತೆಯನ್ನು ಪ್ರತಿದಿನ ಕಸ ಹೊಡೆದುಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆವಿವಿಧ ಉಡುಗೊರೆ ಹಂಚುವ ಮೂಲಕಸಂತಸಪಟ್ಟರು.

ಕಾರ್ಯಕ್ರಮದಲ್ಲಿಉಪಸ್ಥಿತರಿದ್ದ ಶಾಲೆಯ ಕಾರ್ಯದರ್ಶಿಗಳಾದಎಚ್.ಎಂ.ಸೌಭಾಗ್ಯಲಕ್ಷ್ಮಿಮಾತನಾಡಿ, ಆರ್ಟ್ಆಫ್ ಗಿವಿಂಗ್ ಒಂದು ವಿಶಿಷ್ಟಪರಿಕಲ್ಪನೆ ಹೊಂದಿರುವ ಸಂಸ್ಥೆ.ತನ್ನ ವಾರ್ಷಿಕೋತ್ಸವದಸಂದರ್ಭದಲ್ಲಿ ಬಡ ಮಹಿಳೆಯರನ್ನು,ಪೌರ ಕಾರ್ಮಿಕರನ್ನುಗುರುತಿಸಿ ಅವರ ಖುಷಿಯನ್ನುಹೆಚ್ಚಿಸಿದೆ.ಉಡುಗೊರೆಸ್ವೀಕರಿಸಿದ ಪೌರಕಾರ್ಮಿಕರುಪರಿಸರದ ಸ್ವಚ್ಛತೆಗಾಗಿ ಕೆಲಸಮಾಡುವ ತಮ್ಮನ್ನು ಗುರುತಿಸಿದ್ದಕ್ಕೆಧನ್ಯವಾದ ಹೇಳಿದರು.

ಇದೇವೇಳೆ ಕಾರ್ಯಕ್ರಮದಲ್ಲಿ ನೀರಿನಬಳಕೆ, ಕುಡಿಯುವನೀರಿನ ಮಹತ್ವ ಕುರಿತು ಅರಿವುಮೂಡಿಸಲಾಯಿತು.

ಕಾರ್ಯಕ್ರಮದಲ್ಲಿಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಇಲಾಖೆಯ ಜಂಟಿಕಾರ್ಯದರ್ಶಿ ಜಯಲಕ್ಷ್ಮಿ,ಆರ್ಟ್ ಆಫ್ಗಿವಿಂಗ್‌ನ ಮಮತಾ ಎನ್.ಸ್ವಾಮಿ,ಅನಿತಾ ಗುರುಪ್ರಸಾದ್ಪಾಲ್ಗೊಂಡಿದ್ದರು.