ದೇವನಹಳ್ಳಿ ತಾಲೂಕಿನ ಕುಂದಾಣ ಕೃಪಾಪೋಷಿತ ನಾಟಕ ಮಂಡಳಿಯ ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಮಾಜಿ ತಾಲೂಕು ಕಾರ್ಯಾಧ್ಯಕ್ಷ ಲಕ್ಷ$್ಮಣ್,ಡೇರಿ ಮಾಜಿ ಅಧ್ಯಕ್ಷ ಮುನೇಗೌಡ ಇತರರು ಇದ್ದರು.
ಕುಂದಾಣ: ಡಿಜಿಟಲ್ ಯುಗ ಬೆಳೆದಂತೆಲ್ಲ ನಮ್ಮ ಕಲೆ, ಸಾಹಿತ್ಯ, ಸಂಸತಿ ಕಣ್ಮರೆ ಆಗುತ್ತಿದೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ದೇವನಹಳ್ಳಿ ತಾಲೂಕು ಕುಂದಾಣ ಕೃಪಾಪೋಷಿತ ನಾಟಕ ಮಂಡಳಿಯಿಂದ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಣದಲ್ಲಿ ಅತಿ ಹೆಚ್ಚು ರಂಗಭೂಮಿ ಕಲಾವಿದರಿದ್ದು, ಪೌರಾಣಿಕ ನಾಟಕಗಳಲ್ಲಿ ಹೆಚ್ಚಾಗಿ ಅಭಿನಯಿಸುವಂತಾಗಲಿ ಎಂದು ಹೇಳಿದರು.
ಕುಂದಾಣ ಕೊಪ್ಪಲಿನಲ್ಲಿ ವರ್ಷಗಳಿಂದ ಪೌರಾಣಿಕ ನಾಟಕಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಯುವಕರು ಈ ಗ್ರಾಮದಲ್ಲಿ ನಾಟಕಗಳ ರಂಗಭೂಮಿಯಲ್ಲಿ ಅಭಿನಯಿಸುತ್ತಿರುವುದು ಎಂದರು. ಮುಖಂಡರಾದ ಕಿಶೋರ್, ಟಿ.ರವಿ, ಕುಂದಾಣ ಗ್ರಾಪಂ ಮಾಜಿ ವಿಜಯ ಬಿವಿ.ಸ್ವಾಮಿ, ಸದಸ್ಯರಾದ ಕೆ.ವಿ.ಸ್ವಾಮಿ, ಕ್ಯಾತೇಗೌಡ, ರಂಗಭೂಮಿ ಕಲಾವಿದರಾದ ಮುನಿಕೃಷ್ಣಪ್ಪ, ಆನಂದ್ ಅಮರ್, ಪುನೀತ್, ದುದ್ದನಹಳ್ಳಿ ಗ್ರಾಮಸ್ಥರಾದ ರಮೇಶ್, ಅನೀಲ್ ಇರತರರು ಇದ್ದರು.