ಬಸವಕಲ್ಯಾಣ ತಾಲೂಕಿನ ಹಾರಕೂಡದಲ್ಲಿ ಶ್ರೀ ಹಾರಕೂಡ ಕರಬಸಯ್ಯ ಸ್ವಾಮಿ ಸಾಂಸತಿಕ ಕಲಾ ಸಂಸ್ಥೆ ಸೋಮವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ್​ ಉದ್ಘಾಟಿಸಿದರು. ಶ್ರೀ ಡಾ.ಚನ್ನವಿರ ಶಿವಾಚಾರ್ಯ, ಮಲ್ಲಿನಾಥ ಹಿರೇಮಠ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ರೇವಣಸಿದ್ದ ಹೂಗಾರ ಇತರರಿದ್ದರು. 
ರಾಜ್ಯ

ಕಲೆ, ಸಂಸ್ಕೃತಿ ದೇಶದ ಆತ್ಮವಿದ್ದಂತೆ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ್​ ಅಭಿಪ್ರಾಯ
  • ಹಾರಕೂಡದಲ್ಲಿ ಕರಬಸಯ್ಯ ಸ್ವಾಮಿ ಕಲಾ ಪ್ರಶಸ್ತಿ ಪ್ರದಾನ
ಬಸವಕಲ್ಯಾಣ: ಕಲೆ, ಸಂಸ್ಕೃತಿ ಹಾಗೂ ಗುರು ಪರಂಪರೆ ನಮ್ಮ ದೇಶದ ಆತ್ಮವಿದ್ದಂತೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೇಶ ಗುತ್ತೇದಾರ್​ ಹೇಳಿದರು.
ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಶ್ರೀ ಹಾರಕೂಡ ಕರಬಸಯ್ಯ ಸ್ವಾಮಿ ಸಾಂಸ್ಕೃತಿಕ ಕಲಾ ಸಂಸ್ಥೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಎಷ್ಟೇ ದೊಡ್ಡ ಪದವಿ, ಸಂಪತ್ತು ಗಳಿಸಿದರೂ ಇನ್ನೊಬ್ಬರನ್ನು ಗೌರವಿಸುವ, ಪ್ರೀತಿಸುವ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ತರ್ಕದ ಮಾತಿಗಿಂತ ವಾಸ್ತವ ಮತ್ತು ಅನುಭವ ದೊಡ್ಡದಾಗಿರುತ್ತದೆ. ಹಾರಕೂಡದ ಪೂಜ್ಯರು ಸಮಾಜಕ್ಕೆ ಸತ್ಯ ಶುದ್ಧ ಬದುಕು ಕಟ್ಟಿಕೊಳ್ಳುವ ಧರ್ಮದ ಸಾರಾಮೃತ ನೀಡುವಂಥವರಾಗಿದ್ದಾರೆ ಎಂದರು.
ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಮಲ್ಲಿನಾಥ ಹಿರೇಮಠ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಆನಂದರಾವ ಝಳಕೆ, ಪಂಡಿತರಾವ ದೇಗಾಂವ, ವಿಜಯಕುಮಾರ ಸಂಗೋಳಗಿ, ಸೂರ್ಯಕಾಂತ ಸಂಗೋಳಗಿ, ಶೇಖ ಮಾಸ್ಟರ್​ ಕಲಬುರಗಿ, ರೇವಣಸಿದ್ದ ಹೂಗಾರ ಇತರರಿದ್ದರು. ಶಿವಲಿಂಗಯ್ಯ ಚಿಣಮಗೇರಾ ನಿರೂಪಣೆ ಮಾಡಿದರು. ಪೂಜಾ ಗೊಬ್ಬೂರ ಪ್ರಾರ್ಥನಾ ಗೀತೆ ಹಾಡಿದರು.
ಸಂಜನಾ ಕೌಶಿಕ್​, ಕಾರ್ತಿಕಯ್ಯ ಗವಾಯಿ, ಶಿವಲಿಂಗಯ್ಯ ಗವಾಯಿ, ಮೃತ್ಯುಂಜಯ ಹಿರೇಮಠ, ಸಿದ್ದಣ್ಣ ಹೂಗಾರ ದೇಸಾಯಿಕಲ್ಲೂರ, ಜಗದೀಶ ಹೂಗಾರ, ಕಲ್ಮೇಶ ಹೂಗಾರ, ಮನೋಹರ ವಿಶ್ವಕರ್ಮ, ಕಾರ್ತಿಕ್​ ಸ್ವಾಮಿ ಯಲದಗುಂಡಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.

ಇಬ್ಬರು ಸಂಗೀತಗಾರರಿಗೆ ಪುರಸ್ಕಾರ

ಶ್ರೀ ಹಾರಕೂಡ ಕರಬಸಯ್ಯ ಸ್ವಾಮಿ ಹೆಸರಿನ ಕಲಾ ಪ್ರಶಸ್ತಿಯನ್ನು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಪಂ.ವೀರಭದ್ರಯ್ಯ ಹಿರೇಮಠ ಮೈಸೂರು ಹಾಗೂ ಬಸವರಾಜ ಭಂಟನೂರ ಕೆಂಭಾವಿ ಅವರಿಗೆ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಪ್ರದಾನ ಮಾಡಿ ಆಶೀರ್ವದಿಸಿದರು.