ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಎರಡು ಜೀಬ್ರಾಗಳು ಮರಿಗಳಿಗೆ ಜನ್ಮನಿಡಿರುವುದು.
ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ಎರಡು ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿದ್ದು, ಪ್ರಾಣಿ ಪ್ರಿಯರಲ್ಲಿ ಹರ್ಷ ಮೂಡಿದೆ. ಜೈವಿಕ ಉದ್ಯಾನವನದಲ್ಲಿರುವ ಕೋಕಿಲ ಹೆಸರಿನ ಜೀಬ್ರಾ ಒಂದು ಹೆಣ್ಣು ಮರಿಗೆ ಹಾಗೂ ಕಾವೇರಿ ಹೆಸರಿನ ಜೀಬ್ರಾ ಮತ್ತೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ.
ಈ ಹೊಸ ಮರಿಗಳ ಜನನದೊಂದಿಗೆ ಉದ್ಯಾನವನದಲ್ಲಿನ ಜೀಬ್ರಾಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಇರುವ ಜೀಬ್ರಾಗಳಲ್ಲಿ ಹೆಣ್ಣು ಜೀಬ್ರಾಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ಮಾತನಾಡಿ, ಹೊಸ ಮರಿಗಳ ಆಗಮನದಿಂದ ಉದ್ಯಾನವನದ ಆಕರ್ಷಣೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಪ್ರಾಣಿ ವಿನಿಮಯ ಯೋಜನೆ ಮೂಲಕ ಇನ್ನಷ್ಟು ವೈವಿಧ್ಯಮಯ ಪ್ರಾಣಿಗಳನ್ನು ತರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಜೀಬ್ರಾ ಇರುವ ಆವರಣದಲ್ಲಿ ಬಿಸಿಲಜಳ ಹೆಚ್ಚಾಗುತ್ತಿರುವುದರಿಂದ ಸ್ಪ್ರಿಂಕ್ಲರ್ ಮೂಲಕ ನೀರು ಬಿಡಲಾಗುತ್ತಿದೆ. ಇದರ ಜತೆಗೆ ಮರಿಗಳ ರಕ್ಷಣೆ, ಅವುಗಳ ಆರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸಿದೆ.