Arrested for extorting Rs 15 lakh on the pretext of buying a car
ಗೌರಿಬಿದನೂರು: ಕಾರು ಕೊಡಿಸುವ ನೆಪದಲ್ಲಿ 15ಲಕ್ಷ ರೂಪಾಯಿ ರೂಪಾಯಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಿಯ ವಿನಾಯಕ ನಗರ ಬಡಾವಣೆ ನಿವಾಸಿ ಯಶ್ವಂತ್ (25), ಬೆಂಗಳೂರಿನ ರಾಜಾಜಿನಗರದ ದರ್ಶನ್(23), ಭರತ್(23), ರಾಮನಗರ ಜಿಲ್ಲೆಯ ಕೇತೋಹಳ್ಳಿಯ ವಿಷಕಂಠ ಮೂರ್ತಿ(40) ಬಂಧಿತರಾಗಿದ್ದು, 7.5 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವೇನು?: ವಿನಾಯಕ ನಗರ ಬಡಾವಣೆಯ ಶಿವಶಂಕರ ಆರಾಧ್ಯ ಪಕ್ಕದ ಮನೆಯ ಯಶ್ವಂತ್ ಇಬ್ಬರೂ ಸಂಬಂಧಿಕರು. ಇಬ್ಬರೂ ಸೇರಿ ಕಾರುಗಳನ್ನು ತಂದು ಬೆಂಗಳೂರಿನ ಖಾಸಗಿ ಕಂಪನಿಗಳಿಗೆ ಬಾಡಿಗೆ ಬಿಟ್ಟರೆ ಒಳ್ಳೆಯ ಸಂಪಾದನೆ ಬರುತ್ತದೆ. ನಾನು ಕೂಡ ಒಂದು ಕಾರನ್ನು ಕಂಪನಿಗೆ ಬಿಟ್ಟಿದ್ದೇನೆ. ತಿಂಗಳಿಗೆ 45 ಸಾವಿರ ರೂ. ಬಾಡಿಗೆ ಬರುತ್ತಿದೆ ಎಂದು ಯಶ್ವಂತ್ ಹೇಳಿದ್ದಾನೆ. ಶಿವಶಂಕರ ಆರಾಧ್ಯ 2 ಕಾರು ಖರೀದಿಗೆ 15ಲಕ್ಷ ರೂ. ಹೊಂದಿಸಿಕೊಂಡು ಎರಡು ಬ್ಯಾಗ್ಗಳಲ್ಲಿ ತುಂಬಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಸಿದ್ಧರಾಗಿದ್ದು, ಮನೆ ಬಳಿ ಕಾರಿನ ಕಡೆಗೆ ತೆರಳುತ್ತಿದ್ದಾಗ ಆರೋಪಿಗಳು ಶಿವಶಂಕರ್ ಮುಖಕ್ಕೆ ಕಾರದ ಪುಡಿ ಎರಚಿ ಹಣದ ಬ್ಯಾಗ್ ಕಸಿಯಲು ಪ್ರಯತ್ನಿಸಿದ್ದಾರೆ. ಬ್ಯಾಗ್ ಬಿಡದ ಕಾರಣ ಮಚ್ಚು ತೋರಿಸಿ ಕೆಳಕ್ಕೆ ಕೆಡವಿ 7.5 ಲಕ್ಷ ರೂಪಾಯಿ ಇದ್ದ ಒಂದು ಬ್ಯಾಗ್ ತೆಗೆದುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದರು. ತಕ್ಷಣ ಶಿವಶಂಕರ್ ಆರಾಧ್ಯ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ನಗರ ಠಾಣೆ ಎಸ್ಐ ಲಲಿತಮ್ಮ, ವಿ.ವರಲಕ್ಷಿ$್ಮ ಮತ್ತು ಸಿಬ್ಬಂದಿ ನಗರದಲ್ಲಿದ್ದ ಯಶ್ವಂತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣದಾಸೆಗೆ ಸ್ನೇಹಿತರೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ವಶಕ್ಕೆ ಪಡೆದು 7.5 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ.
ಎಸ್ಪಿ ಕುಶಾಲ್ ಚೌಕ್ಸೆ ಮಾರ್ಗದರ್ಶನದಲ್ಲಿ ಸಿಪಿಐಗಳಾದ ವಿ.ಅಂಜನ್ ಕುಮಾರ್, ಮುನಿಕೃಷ್ಣ, ಎಸ್ಐಗಳಾದ ಲಲಿತಮ್ಮ, ವಿ.ವರಲಕ್ಷಿ$್ಮ ಮತ್ತು ಸಿಬ್ಬಂದಿ ಕೃಷ್ಣಪ್ಪ, ಮಾಲತೇಶ್, ಮಂಜುನಾಥ, ಶ್ರೀಕಾಂತ್, ಹನುಮಂತರಾಯಪ್ಪ ಅನಿತಮ್ಮ, ಸುಬ್ರಮಣಿ, ಕುಮಾರನಾಯಕ್ ಒಳಗೊಂಡ ತಂಡ 3 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.