Arrest of two auto drivers who were gambling
ಚಿಂತಾಮಣಿ: ನಗರದ ಬೆಂಗಳೂರು ವೃತ್ತದ ಬಳಿ ಜೂಜು ಅಂಕಿಗಳನ್ನು ಬರೆಯುತ್ತಿದ್ದ ಆಟೋ ಚಾಲಕ, ಹೂವಿನ ಪೇಟೆ ನಿವಾಸಿ ಮೊಹಮದ್ ಹಾರೂನ್ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೂ.8ರಂದು ಜೂಜಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ನಗರ ಠಾಣೆ ಇನ್ಸ್ಪೆಕ್ಟರ್ ಸೂಚನೆಯಂತೆ ಎಚ್.ಸಿ.ವೆಂಕಟರವಣ, ಪಿ.ಸಿ.ಲೋಕೇಶ ದಾಳಿ ನಡೆಸಿದ್ದಾಗ ಮೊಹಮದ್ ಹಾರೂನ್ 1 ರೂ.ಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಪ್ರೇರೇಪಿಸುತ್ತಾ ಮಟ್ಕಾ ಅಂಕಿ ಬರೆಯುತ್ತಿರುವುದು ಕಂಡುಬಂದಿದೆ. ಮಟ್ಕಾ ಕಟ್ಟುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದಾರೆ. ಮೊಹಮದ್ ಹಾರೂನ್ನನ್ನು ಪೊಲೀಸರು ಬಂಧಿಸಿ, 390 ರೂ. ನಗದು ವಶಪಡಿಸಿಕೊಂಡು, ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
275 ರೂ. ನಗದು ಜಪ್ತಿ: ನಗರದ ಮೆಹಬೂಬ್ ನಗರ ವೃತ್ತದ ಬಳಿ ಮಟ್ಕಾ ನಡೆಸುತ್ತಿದ್ದ ಹೈದರಾಲಿ ನಗರದ ನಿವಾಸಿ, ಆಟೋ ಚಾಲಕ ಮಹಬೂಬ್ ಪಾಷಾನನ್ನು (50) ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, 275 ರೂ. ನಗದು ಜಪ್ತಿ ಮಾಡಿದ್ದಾರೆ. ಚಿಂತಾಮಣಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.