Arrest of person who stole borewell cable
ಮುಳಬಾಗಿಲು: ಪದಕಾಷ್ಟಿ ಗ್ರಾಮದಲ್ಲಿ ಬೋರ್ವೇಲ್ಗೆ ಅಳವಡಿಸಿದ್ದ ಕೇಬಲ್ ವೈರ್ ಕಳವು ಮಾಡಿದ್ದ ಅಂಬೇಡ್ಕರ್ ನಗರದ ಚಂದ್ರಮಣಿ ಅಲಿಯಾಸ್ ಮಣಿಯನ್ನು (41) ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜು.26ರಂದು ಜಮೀನುದಾರ ಗೋಪಿನಾಥ್ ಅವರು ತೋಟದಲ್ಲಿದ್ದ ಸುಮಾರು 250ಮೀ ಉದ್ದದ ಕೇಬಲ್ ವೈರ್ ಕಳವಾಗಿರುವ ಬಗ್ಗೆ ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.