Arrest of man who assaulted a woman
ಪಾವಗಡ: ಪಟ್ಟಣದ ಶನಿಮಹಾತ್ಮ ಗುಡಿಯ ಬಳಿ ಜು.3 ರಂದು ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬುಧವಾರ ಪಟ್ಟಣದ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಮಡಕಶಿರ ತಾಲೂಕಿನ ಗೊಲ್ಲಪಲ್ಲಿಯ ನಿವಾಸಿ ಮಂಜುನಾಥ್ (35) ಬಂಧಿತ. ಮಂಜುನಾಥ್ ಗಾರೆ ಕೆಲಸ ಮಾಡುತ್ತಿದ್ದು, ಬುಧವಾರ ಪಾವಗಡ ಬಸ್ ನಿಲ್ದಾಣದ ಬಳಿ ಸ್ಥಳ ಮಹಜರು ನಡೆಸಲಾಯಿತು. ವೃತ್ತ ನಿರೀಕ್ಷಕ ಸುರೇಶ್ ನೇತೃತ್ವದ ತಂಡದ ಎಸ್ಐ ಸುಧೀರ್, ಸುನಿಲ್, ಎಎಸ್ಐ ತಿಮ್ಮರಾಜು ಹಾಗೂ ಸಿಬ್ಬಂದಿ ಗೋಪಿ, ಶಿವಶಂಕರ್, ಸಂಪತ್, ದೀಪಕ್, ಮಾರುತಿ ಹಾಗೂ ಮಾಂತೇಶ್ ಅಪರಾಧಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.