Arrest of a person selling illicit liquor 
ರಾಜ್ಯ

ಅಕ್ರಮ ಮದ್ಯ ಮಾರುತ್ತಿದ್ದವನ ಬಂಧನ

ಚಿಂತಾಮಣಿ: ತಾಲೂಕಿನ ಹೀರೇಕಟ್ಟಿಗೇನಹಳ್ಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲೇ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟು, ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದ ಗ್ರಾಮದ ರಮೇಶ್​ (56)ನನ್ನು ಪೋಲಿಸರು ಬಂಧಿಸಿದ್ದಾರೆ.

ಇನ್​ಸ್ಪೆಕ್ಟರ್​ ಶಿವರಾಜ್​ ನೇತೃತ್ವದಲ್ಲಿ ಎಎಸ್​ಐ ವೀರೇಗೌಡ ಗಸ್ತು ತಿರುಗುತ್ತಿದ್ದಾಗ ಹೀರೇಕಟ್ಟಿಗೇನಹಳ್ಳಿಯಲ್ಲಿ ಅಂಗಡಿ ಮುಂಭಾಗದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದಕ್ಕೆ ಬಂಧಿಸಲಾಗಿದೆ.
ವಿಚಾರಣೆ ವೇಳೆ ಯಾವುದೇ ಪರವಾನಗಿ ಇಲ್ಲದೆ ಮದ್ಯ ಸರಬರಾಜು ಮಾಡುತ್ತಿರುವುದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.