ಹುಲಸೂರಿನ ಹರ-ಹರ ಮಹಾದೇವ ದೇವಸ್ಥಾನಕ್ಕೆ ಕುಡಿಯುವ ನೀರು ಹಾಗೂ ವಿದ್ಯುತ್ ದೀಪ ಅಳವಡಿಸಲು ಒತ್ತಾಯಿಸಿ ದೇವಸ್ಥಾನ ಪಂಚ್ ಕಮಿಟಿ ಪದಾಧಿಕಾರಿಗಳು ಮಂಗಳವಾರ ಗ್ರಾಪಂ ಕಾರ್ಯದರ್ಶಿ ಶುಭಂಗೆ ಮನವಿ ಪತ್ರ ಸಲ್ಲಿಸಿದರು. ಅರ್ಚಕ ಸಂಗಮೇಶ ಸ್ವಾಮಿ, ಕಮಿಟಿ ಅಧ್ಯಕ್ಷೆ ಚಂದ್ರಕಲಾ ತೋಗಖೇಡೆ, ಸುನಂದಾ ಮಾನಕರೆ,ಹರುಬಾಯಿ ಜಾನಬಾ, ಸುನೀತಾ ವಾಗದಾಳೆ, ಶುಭಾಂಗಿ ಮಾನಕರೆ, ಶಶಿಕಲಾ ಇತರರಿದ್ದರು.
ಹುಲಸೂರು: ಪಟ್ಟಣದ ಹಾಲಹಳ್ಳಿ ರಸ್ತೆಯ ದಸರಾ ಮೈದಾನದಲ್ಲಿರುವ ಪುರಾತನ ಹರ-ಹರ ಮಹಾದೇವ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೇವಸ್ಥಾನದ ಪರಿಸರದಲ್ಲಿ ಬೆಳಕಿನ ವ್ಯವಸ್ಥೆಗಾಗಿ ವಿದ್ಯುತ್ ದೀಪ ಅಳವಡಿಸಿಕೊಡಬೇಕು ಎಂದು ದೇವಸ್ಥಾನ ಪಂಚ ಕಮಿಟಿ ಪದಾಧಿಕಾರಿಗಳು ಮಂಗಳವಾರ ಗ್ರಾಪಂಗೆ ತೆರಳಿ ಕಾರ್ಯದರ್ಶಿ ಶುಭಂ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ದೇವಸ್ಥಾನದಲ್ಲಿ ಪ್ರತಿ ವರ್ಷ ಶ್ರವಣ ಮಾಸದ ಒಂದು ತಿಂಗಳು ಹಾಗೂ ಪ್ರತಿ ಸೋಮವಾರ ಭಜನಾ ಕಾರ್ಯಕ್ರಮ ನಡೆಯುತ್ತದೆ. ಪರಿಸರದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ವಿಷ ಜಂತುಗಳು ಓಡಾಡುತ್ತಿದ್ದು, ಭಯದಲ್ಲಿ ಭಜನೆ ಮಾಡುತ್ತಿದ್ದು, ದೇವಸ್ಥಾನಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೆ ಬರುವ ಭಕ್ತಾದಿಗಳಿಗೆ ಸೌಲಭ್ಯವಾಗುತ್ತದೆ. ನಮ್ಮ ಸಮಸ್ಯೆಗೆ ಸ್ಥಳಿಯ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಕಾರ್ಯದರ್ಶಿ ಶುಭಂ ಸ್ವೀಕರಿಸಿ ನಿಮ್ಮ ಸಮಸ್ಯೆಗೆ ಸ್ಪಂದಿಸು ಭರವಸೆ ನೀಡಿದರು. ಅರ್ಚಕ ಸಂಗಮೇಶ ಸ್ವಾಮಿ, ದೇವಸ್ಥಾನ ಪಂಚ್ ಕಮಿಟಿ ಅಧ್ಯಕ್ಷೆ ಚಂದ್ರಕಲಾ ತೋಗಖೇಡೆ, ಪ್ರಮುಖರಾದ ಪಂಡಿತ ಮೇತ್ರೆ, ಸುನಂದಾ ಮಾನಕರೆ, ಹರುಬಾಯಿ ಜಾನಬಾ, ಸುನೀತಾ ವಾಗದಾಳೆ, ಶುಭಾಂಗಿ ಮಾನಕರೆ , ಸುನೀತಾ ಗಾಯಕವಾಡ, ಶಶಿಕಲಾ ಪವನಕುಮಾರ, ಅನಿತಾ ಬಾಚಿಪಳೆ, ಭಾರತಬಾಯಿ ಮೇತ್ರೆ ಇತರರಿದ್ದರು.