ಚಿತ್ರ ೧೦ ಕೆ.ಎಲ್.ಆರ್. ೦೬ : ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ಕೋಲಾರ ಜಿಲ್ಲೆಯ ರೈತರು ಮುಖಂಡರ ಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್, ವಿಧಾನಪರಿಷತ್ತು ಮಾಜಿ ಸದಸ್ಯ ಮೋಹನ್‌ಕೊಂಡಜ್ಜಿ, ಹಿರಿಯ ಹೈಕೋರ್ಟ್ ವಕೀಲ ಶಿವಪ್ರಸಾದ್ ಮುಂತಾದವರು ಭಾಗವಹಿಸಿರುವುದು.  
ರಾಜ್ಯ

ಅರಣ್ಯ ಮತ್ತು ರೈತರ ಮಧ್ಯೆ ಸಂಘರ್ಷ

ವಿಜಯವಾಣಿ ಸುದ್ದಿಜಾಲ ಕೋಲಾರ
ಭೂಮಿಯ ಒಡೆತನ ರಾಜ್ಯ ಸರ್ಕಾರಕ್ಕೆ ಸೇರಿದ್ದು, ಕಾಲದಿಂದ ಕಾಲಕ್ಕೆ ವಿವೇಚನಾ ದೃಷ್ಟಿಯಿಂದ ಭೂಮಿಯನ್ನು ರೈತರಿಗೆ ಮತ್ತು ಇತರೆ ಅಭಿವೃದ್ದಿಯ ಭಾಗವಾಗಿ ಹಂಚಿಕೆ ಮಾಡಲಾಗುತ್ತಿದೆ. ಹಂಚಿಕೆಯಲ್ಲಿ ಅರಣ್ಯದವರು ಒಬ್ಬರಾಗಿರುತ್ತಾರೆ. ಅರಣ್ಯ ಇಲಾಖೆಗೆ ಹಂಚಿಕೆಯಾದ ಭೂಮಿ ನೂರಾರು ವರ್ಷಗಳ ಕಾಲ ಏಕೆ ಮ್ಯೂಟೇಷನ್ ಆಗಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನಿಸಿದರು.
ಅರಣ್ಯ ಇಲಾಖೆ ಮತ್ತು ರೈತರ ಮಧ್ಯೆ ಇತ್ತೀಚೆಗೆ ಸಂಘರ್ಷ ಹೆಚ್ಚಾಗಿದ್ದು, ಶುಕ್ರವಾರ ರಾತ್ರಿ ಬೆಂಗಳೂರಿನ ಶಾಸಕರ ಕೊಠಡಿಗಳ ಸಭಾಂಗಣದಲ್ಲಿ ಅರಣ್ಯ ಇಲಾಖೆ ಕಿರುಕುಳಕ್ಕೆ ಒಳಗಾಗಿರುವ ರೈತರು, ರೈತ ಹೋರಾಟಗಾರರು, ಬುದ್ಧಿಜೀವಿಗಳು, ವಕೀಲರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಅರಣ್ಯ ಇಲಾಖೆಗೆ ಹಂಚಿಕೆಯಾದ ಭೂಮಿಗೆ ಮೊದಲು ನೋಟಿಫಿಕೇಷನ್ ಆದ ನಂತರ ಅದರಲ್ಲಿ ಎಷ್ಟು ಸರ್ವೇ ನಂಬರ್‌ಗಳು, ಭೂಮಿಯ ವಿಸ್ತೀರ್ಣ, ಅದದರಲ್ಲಿ ಇರುವ ಬೆಳೆ, ಫಲಾನುಭವಿಗಳ ಸಂಖ್ಯೆ ಈ ಎಲ್ಲಾ ವಿವರಗಳಿಗಾಗಿ ಫಾರೆಸ್ಟ್ ಸೆಟ್ಲ್ಮೆಂಟ್ ಅಧಿಕಾರಿಯನ್ನು ನೇಮಕ ಮಾಡಿ ಅವರ ಶಿಫಾರಸ್ಸಿನ ಮೇರೆಗೆ ಬಿ ಮತ್ತು ಸಿ ಸೆಟ್ಸ್ಮೆಂಟ್ ಆಗಬೇಕಾಗಿತ್ತು.
ನೂರಾರು ವರ್ಷಗಳು ಕಳೆದರೂ ಈ ಪ್ರಕ್ರಿಯೆಗಳನ್ನು ನಿರ್ಲಕ್ಷಿಸುತ್ತಾ ಅರಣ್ಯ ಇಲಾಖೆಯವರು ಕಂದಾಯ ಮತ್ತು ಅರಣ್ಯ ಇಲಾಖೆಯ ಮೂಲ ನಕಾಶೆಗಳನ್ನು ಬದಿಗಿಟ್ಟು ವರ್ಕ್ಪ್ಲಾನ್ ನಕಾಶೆಗಳ ಆಧಾರದಲ್ಲಿ ರೈತೆರನ್ನು ಒಕ್ಕಲೆಬ್ಬಿಸುವುದನ್ನು ನೋಡಿಕೊಳ್ಳಿ. ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು.
ಸ್ವಾತಂತ್ರ‍್ಯ ಮೊದಲು ಭೂಮಿ ಹಂಚಿಕೆ, ಸ್ವಾತಂತ್ರ‍್ಯ ನಂತರ ಭೂ ಮಂಜೂರಾತಿ ಮೂಲಕ ರೈತರಿಗೆ ಭೂಮಿ ಸಿಕ್ಕಿದೆ. ೧೯೭೨ರ ತನಕ ಲ್ಯಾಂಡ್ ಗ್ರಾಂಡ್ ಕಮಿಟಿ ಗಳು ಕಾನೂನು ಬದ್ಧವಾಗಿರಲಿಲ್ಲ. ೧೯೭೪ರ ಭೂ ಸುಧಾರಣೆ ಕಾಯ್ದೆ ಪರಿಣಾಮಕಾರಿಯಾದ ತೀರ್ಮಾನಗಳು ಯಾರು ಭೂಮಿಯ ಉಳುಮೆ ಮಾಡುತ್ತಾರೋ ಅವರಿಗೆ ಭೂಮಿಯ ಒಡೆತನ ಸಿಕ್ಕಿತು.
ಅರಣ್ಯ ಇಲಾಖೆಯವರು ತಮ್ಮಗಿರುವ ಭೂಮಿಯಲ್ಲಿ ಗಿಡ ನೆಟ್ಟು ಅದನ್ನು ಬೆಳೆಸಿ ಪರಿಸರ ಸಂರಕ್ಷಿಸುವ ಕೆಲಸ ಬಿಟ್ಟು ಸರ್ವೆ ಮತ್ತು ರೆವಿನ್ಯೂ ಇಲಾಖೆಯ ಕೆಲಸಗಳನ್ನು ಇವರೇ ಕೈಗೆತ್ತಿಕೊಂಡಿದ್ದಾರೆ. ಶಾಸನಬದ್ಧವಾಗಿ ಭೂಮಿ ಮಂಜೂರು ಮಾಡಿದ ಅಧಿಕಾರಿಗಳು ರೈತರಿಗೆ ರಕ್ಷಣೆ ನೀಡಬೇಕಾಗಿತ್ತು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಕಂದಾಯ ಮತ್ತು ಪೊಲೀಸ್ ನವರು ಅರಣ್ಯ ಇಲಾಖೆಯವರ ನೆರವಿಗೆ ನಿಂತಿರುವುದು ದುರ್ದೈವದ ಸಂಗತಿ ಆಗಿದೆ ಎಂದರು.
ಅರಣ್ಯ ಇಲಾಖೆಯ ಮುಂದೆ ನಾವು ಭಿಕ್ಷೆ ಬೇಡಬೇಕಾಗಿಲ್ಲ. ರೈತರು ಭಿಕ್ಷಕರಲ್ಲ. ನಾವು ಹೋರಾಟ ಮಾಡಬೇಕು. ವ್ಯವಸ್ಥೆ ಹಾಳಾಗಿದ್ದು, ನಾವುಗಳು ರಾಜಕೀಯ ಭ್ರಮೆಯಿಂದ ಹೊರಬರಬೇಕು. ಸುಧಾರಣಾ ಮತ್ತು ಆಡಳಿತ ಇಲಾಖೆ ಕಾಡಿನ ರಕ್ಷಣೆ ಹೆಸರಿನಲ್ಲಿ ರೈತರಿಗೆ ತೊಂದರೆ ಕೊಡುವುದು ಕೈಬಿಡಬೇಕೆಂದು ಹೇಳಿದರು.
ಬಾಕ್ಸ್
೧೯೧೦ ರಿಂದ ೧೯೩೧_ ೩೫- ೩೬- ೩೭ -ಹೀಗೆ ೧೯೪೪ರ ವರೆಗೆ ಸ್ವಾತಂತ್ರ ಪೂರ್ವದಲ್ಲಿ ಮೈಸೂರ್ ಸರ್ಕಾರ ನೋಟಿಫಿಕೇಶನ್ ಮಾಡಿರುವ ಭೂಮಿಗಳು ನಮ್ಮದೊಂದು ಅರಣ್ಯ ಇಲಾಖೆಯವರು ಅತಿಕ್ರಮಣ ಮಾಡುತ್ತಿರುವುದರಿಂದ ಶ್ರೀನಿವಾಸಪುರ ಒಂದೇ ತಾಲೂಕಿನಲ್ಲಿ ೪೧,೫೨೮ ಎಕರೆ ಭೂಮಿ ಸೇರಿಕೊಂಡAತೆ ಕೋಲಾರ ಜಿಲ್ಲೆ ಮತ್ತು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಲಕ್ಷಾಂತರ ಎಕರೆ ಭೂಮಿ ರೈತರ ಕೈ ತಪ್ಪಿದೆ ನೂರಾರು ವರ್ಷಗಳಿಂದ ನಾವು ಭೂಮಿಯಲ್ಲಿ ಅಭಿವೃದ್ಧಿ ಮಾಡಿದ ಮರಗಳು, ಕೊಳವೆ ಬಾವಿಗಳು, ಆಹಾರ ಸಂಸ್ಕರಣ ಘಟಕಗಳು ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ನಾವುಗಳು ಯಾರು ಒತ್ತುವರಿದಾರರು ಅಕ್ರಮಣಕಾರರು ಆಗಿರುವುದಿಲ್ಲ ಸರ್ಕಾರದಿಂದ ಕಾನೂನು ಬದ್ಧವಾಗಿ ಉಳಿಮೆ ಮಾಡುತ್ತಿದ್ದ ಭೂಮಿಗೆ ಹಕ್ಕುಗಳನ್ನು ಪಡೆದಿರುವವರಾಗಿದ್ದು ನಮ್ಮ ರಕ್ಷಣೆಗೆ ನಾವೇ ಒಗ್ಗಟ್ಟಿನ ಹೋರಾಟಗಳನ್ನು ನಡೆಸೋಣ ಎಂದು ಸಭೆಯಲ್ಲಿ ಚರ್ಚಿಸಿದ ಮುಖಂಡರು ಮುಂದಿನ ಸಭೆಯ ದಿನಾಂಕವನ್ನು ಜ.೧೮ ರಂದು ಮತ್ತಷ್ಟು ಭೂಮಿ ಕಳೆದುಕೊಂಡ ಮತ್ತು ರೈತ ಮುಖಂಡರು ಸೇರಿ ಮುಂದಿನ ಹೋರಾಟಗಳ ರೂಪುರೇಷೆಗಳನ್ನು ಮಾಡಲು ತೀಮಾನಿಸಲಾಯಿತು.
ಸಭೆಯಲ್ಲಿ ಮುಳಬಾಗಿಲಿನ ಎಂ ಗೋಪಾಲ್, ಶ್ರೀ ರಾಮ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋಹನ್ ಕೊಂಡಜ್ಜಿ, ಹೈಕೋರ್ಟ್ ಹಿರಿಯ ವಕೀಲ ಶಿವಪ್ರಸಾದ್, ಪಾಪೇಗೌಡ, ರೈತ ಸಂಘದ ಮುಖಂಡರುಗಳಾದ ಪಿ. ಆರ್. ಸೂರ್ಯನಾರಾಯಣ, ಟಿಎಂ ವೆಂಕಟೇಶ್, ಪಾಪಕೋಟೆ ನವೀನ್ ಕುಮಾರ್, ಶೀಲಿಂಗೆರೆ ಶ್ರೀನಿವಾಸನ್, ಹರಟಿ ಪ್ರಕಾಶ್, ಆನಂದ್, ಕೇತಗಾನಹಳ್ಳಿ ನಾಗರಾಜ್, ಗೋಪಾಲಕೃಷ್ಣ, ಬಿಎಮ್ ಪ್ರಕಾಶ್, ಸಿ. ಮನಿ ವೆಂಕಟಪ್ಪ, ದರ್ಶನ್, ಆನೇಕಲ್ ನ ಮುನಿರಾಜು, ಶ್ರೀನಿವಾಸಪುರ ಮುಳಬಾಗಿಲು ಮತ್ತು ಕೋಲಾರ ತಾಲೂಕಿನ ರೈತರು ದೊಡ್ಡ ಪ್ರಮಾಣದಲ್ಲಿ ಈ ಚರ್ಚೆಯಲ್ಲಿ ಭಾಗವಹಿಸಿದ್ದರು.