ಯಾದಗಿರಿ ನಗರದ ಕನಕ ವೃತ್ತದಲ್ಲಿನ ಸಾರ್ವಜನಿಕ ಉದ್ಯಾನವನಕ್ಕೆ ಮಂಗಳವಾರ ಬೆಳಗ್ಗೆ ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ ಭೇಟಿ ನೀಡಿ ಜಿಮ್ ಮಾಡುವ ಮೂಲಕ ಆಟಿಕೆ ಸಾಮಾನು ಪರಿಶೀಲಿಸಿದರು. ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ಎಇಇ ವಿಶ್ವನಾಥ ಪಾಟೀಲ್ ಇತರರಿದ್ದರು.
- ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಹೇಳಿಕೆ
- ಯಾದಗಿರಿ ಸಾರ್ವಜನಿಕ ಉದ್ಯಾನವನಕ್ಕೆ ಭೇಟಿ
ನಗರಸಭೆಗೆ ಸಂಬಧಿಸಿದ ನಗರದ ಎಲ್ಲೆಡೆ ಇರುವ ಆಸ್ತಿಗಳ ಪರಿಶೀಲನೆ ಮಾಡಿ, ಅವುಗಳಿಗೆ ಸೂಕ್ತ ಬೇಲಿ ಹಾಕಿಸಿ ಸಂಬAಧಪಟ್ಟ ವಿವರಗಳನ್ನು ಅಲ್ಲಿ ಬರೆಯಿಸಿ ನಾಮಫಲಕ ಹಾಕುವ ಮೂಲಕ ಸರ್ಕಾರ ಆಸ್ತಿ ರಕ್ಷಣೆಗೆ ಮಾಡಲಾಗುವುದು ಎಂದು ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ ಹೇಳಿದರು.
ನಗರದ ವಿವಿಧ ವಾರ್ಡ್ಗಳಿಗೆ ಮಂಗಳವಾರ ಭೇಟಿ ನೀಡಿದ ನಂತರ ತಮ್ಮ ಕಚೇರಿಯಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ನಗರದ ವಿವಿಧೆಡೆ ಸರ್ಕಾರದ ಆಸ್ತಿ ಸಾಕಷ್ಟಿದೆ. ಆದರೆ ಎಲ್ಲಿ, ಯಾವ ಸರ್ವೇ ನಂ.ನಲ್ಲಿ ಎಷ್ಟು ಎಕರೆ ಭೂಮಿ ಇದೆ ಎಂಬ ಮಾಹಿತಿ ಬಗ್ಗೆ ಸಧ್ಯಕ್ಕೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಈ ಕೂಡಲೇ ಸರ್ವೇ ಮಾಡಿಸಲಾಗುವುದು ಎಂದರು.
ಸರ್ಕಾರದ ಆಸ್ತಿ ಅತಿಕ್ರಮಣ ಆಗಬಾರದು ಮತ್ತು ಆ ಸ್ಥಳದಲ್ಲಿ ಅವಶ್ಯಕತೆ ಇರುವುದನ್ನು ಮಾಡಿಸಿ ಅದರಿಂದ ನಗರಸಭೆಗೆ ಆದಾಯ ಬರುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ನಗರಸಭೆ ತೆರಿಗೆ ಸೇರಿ ವಿವಿಧ ಮೂಲಗಳಿಂದ ಬರಬೇಕಾದ ತೆರಿಗೆ ಸಕಾಲಕ್ಕೆ ಬರದೆ ಇರುವುದರಿಂದ ನಿಗದಿತ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಮಾಡಲು ತೊಡಕಾಗುತ್ತಿದೆ ಎಂದು ಅವರು ತಿಳಿಸಿದರು.
ನಗರದ ಸೂಕ್ತ ಸ್ಥಳದಲ್ಲಿ `ಡಿ'ಮಾರ್ಟ್ ನಂತರ ಶಾಂಪಿಗ್ ಮಹಲ್ ಬಂದರೆ ಅದರಿಂದ ತಿಂಗಳಿಗೆ ಲಕ್ಷಾಂತರ ರೂ.ಬಾಡಿಗೆ ಬರುತ್ತದೆ. ಆ ಹಣದಲ್ಲಿ ಬೇರೆ, ಬೇರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ `ಡಿ' ಮಾರ್ಟ್ನೊಂದಿಗೆ ಮಾತಾಡಲಾಗುವುದು ಎಂದರು.
ನಗರದಲ್ಲಿನ ಸಾರ್ವಜನಿಕ ಉದ್ಯಾನಗಳು ಸ್ವಚ್ಛವಾಗಿಡುವುದರೊಂದಿಗೆ ಅಲ್ಲಿ ಕಮಾನು ನಿರ್ಮಿಸಲು ಉದ್ದೇಶಿಸಲಾಗಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಟಿ ನೀಡಬೇಕು. ಈ ಸ್ಥಳಗಳು ಶಾಂತಿ, ನೆಮ್ಮದಿಯ ತಾಣವಾಗಬೇಕೆಂಬ ಉದ್ದೇಶ ನಮ್ಮದಾಗಿದೆ.| ರಾಹುಲ್ ಪಾಂಡ್ವೆ ಡಿಸಿ ಯಾದಗಿರಿ
ಜಿಪಂ ಪ್ರಭಾರಿ ಸಿಇಒ ಆಗಿ ಪಾಂಡ್ವೆ
ಇಲ್ಲಿನ ಜಿಲ್ಲಾ ಪಂಚಾಯಿತಿ ಪ್ರಭಾರಿ ಸಿಇಒ ಆಗಿ ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ ಅವರು ಮಂಗಳವಾರ ಸಂಜೆ ಅಽಕಾರಿ ಸ್ವೀಕರಿಸಿದರು. ಕಳೆದ ಆ.೧೩ರಂದು ಜಿಪಂ ಸಿಇಒ ಲವೀಶ್ ಒರ್ಡಿಯಾ ಅವರ ವರ್ಗವಾಗಿತ್ತು. ಈವರೆಗೂ ಹೊಸ ಸಿಇಒ ಯಾರೂ ನಿಯೋಜನೆಯಾಗದ ಕಾರಣ ಕೊನೆಗೆ ತಾತ್ಕಾಲಿಕವಾಗಿ ಡಿಸಿ ಅವರಿಗೆ ಸರ್ಕಾರ ಪ್ರಭಾರಿ ಸಿಇಒ ಆಗಿ ಅಽಕಾರ ಸ್ವೀಕರಿಸಲು ಆದೇಶ ಮಾಡಿದ್ದರಿಂದ ಮಂಗಳವಾರ ಅಽಕಾರ ಸ್ವೀಕರಿಸಿದರು.