Appointment to the Implementation Committee of Guarantee Schemes 
ರಾಜ್ಯ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ನೇಮಕ

ತುರುವೇಕೆರೆ : ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಗುಡ್ಡೇನಹಳ್ಳಿಯ ಪ್ರಸನ್ನ ಕುವಾರ್ ಅವರನ್ನು ಪುನರ್ ನೇಮಕ ವಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿ ಆರಂಭವಾದ ದಿನದಿಂದ ಪ್ರಸನ್ನ ಕುವಾರ್ ಅವರು ತಾಲೂಕು ಅಧ್ಯಕ್ಷರಾಗಿದ್ದರು. ಕಳೆದ ಎರಡ್ಮೂರು ತಿಂಗಳ ಹಿಂದೆ ಪ್ರಸನ್ನ ಕುವಾರ್ ಅವರನ್ನು ಕೈಬಿಟ್ಟು ತುಮಕೂರಿನ ಲಕ್ಷ್ಮೀಕಾಂತ್ ಎಂಬುವವರ ನೇಮಕ ವಾಡಲಾಗಿತ್ತು.
ಈಗ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನ ಮೇರೆಗೆ ಸಮಿತಿಯನ್ನು ಪುನರ್ರಚನೆ ವಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈ ಆದೇಶದನ್ವಯ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಪ್ರಸನ್ನಕುವಾರ್ ಅವರನ್ನು ನೇಮಕ ವಾಡಲಾಗಿದೆ.
ನೂತನ ಪದಾಧಿಕಾರಿಗಳನ್ನಾಗಿ ಅಪ್ಪಸಂದ್ರ ದೇವರಾಜ್, ದೇವೇಗೌಡ ಬಡಾವಣೆಯ ಕೃಷ್ಣಪ್ಪ, ಗುಡ್ಡೇನಹಳ್ಳಿ ಗವಿರಂಗಪ್ಪ, ಸಂಪಿಗೆ ಹೊಸಳ್ಳಿ ಲಕ್ಷ್ಮೀದೇವಮ್ಮ, ತುರುವೇಕೆರೆಯ ಸವಿತಾ ರೇವಣ್ಣ, ಟಿ.ಎನ್.ಕೀರ್ತಿರಾಜ್, ಎಂ.ಬೇವಿನಹಳ್ಳಿ ಬಸವರಾಜು, ಕೋಳಾಲ ಶಿವರಾಜು, ವಾವಿನಕೆರೆ ತ್ರಿಜಯ್, ಮಲ್ಲೇನಹಳ್ಳಿ ನಾರಾಯಣಗೌಡ, ಕಣಕೂರಿನ ಜವರೇಗೌಡ, ಅಕ್ಕಳ ಸಂದ್ರ ಎ.ಎಂ.ಪ್ರಕಾಶ್, ಚಾಕುವಳ್ಳಿ ಪುರುಷೋತ್ತಮ್, ಇಂದಿರಾನಗರ ಅಫ್ಜಲ್ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ನೇಮಿಸಿ ಆದೇಶಿಸಲಾಗಿದೆ.