ನೆಲಮಂಗಲ ನಗರಸಭೆ ಕಚೇರಿಯಲ್ಲಿ ನಗರಸಭೆಗೆ ಸರ್ಕಾರದಿಂದ ನೂತನ ಹೆಚ್ಚುವರಿ ಸದಸ್ಯರಾಗಿ ನೇಮಕಗೊಂಡಿರುವ ನಾಲ್ಕು ಸದಸ್ಯರನ್ನು ನಗರಸಭೆ ಅಧ್ಯಕ್ಷ ಎನ್.ಗಣೇಶ್ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಉಪಾಧ್ಯಕ್ಷ ಆನಂದ್, ಪೌರಾಯುಕ್ತ ಗಂಗಾಧರ್, ಗ್ರಾಪಂ ಮಾಜಿ ಸದಸ್ಯ ಕೆಂಪರಾಜು, ಮುಖಂಡ ಕೆ.ಕೃಷ್ಣಪ್ಪ, ಬೈಲಮೂರ್ತಿ, ನರಸಿಂಹಮೂರ್ತಿ, ರವೀಂದ್ರ, ಮೂರ್ತಿ, ರಾಜಣ್ಣ ಇದ್ದರು.
ನೆಲಮಂಗಲ : ನಗರಸಭೆಗೆ ನಾಲ್ಕು ಮಂದಿಯನ್ನು ಹೆಚ್ಚುವರಿ ಸದಸ್ಯರಾಗಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕಳೆದ 2019 ಡಿ.26ರಂದು ನೆಲಮಂಗಲ ಪುರಸಭೆಗೆ ಹೊಂದಿಕೊಂಡಿದ್ದ ಅರಿಶಿಣಕುಂಟೆ, ವಾಜರಹಳ್ಳಿ, ವಿಶ್ವೇಶ್ವರಪುರ ಹಾಗೂ ಬಸವನಹಳ್ಳಿ 4 ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಂಡ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಪುರಸಭೆ ಸದಸ್ಯರನ್ನೇ ನಗರಸಭೆ ಸದಸ್ಯರನ್ನಾಗಿ ಮುಂದುವರಿಸಿದ್ದು ವಿಲೀನಗೊಂಡ 4 ಗ್ರಾಪಂಗಳಿಗೆ ಕರ್ನಾಟಕ ಪೌರಸಭೆಗಳ ಅಧಿನಿಯಮದಡಿ ಕಳೆದ 2020 ನ.9ರಂದು ಅಂದಿನಬಿಜೆಪಿ ಸರ್ಕಾರ 4 ಮಂದಿ ಹೆಚ್ಚುವರಿ ಸದಸ್ಯರನ್ನು ನೇಮಕ ಮಾಡಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರಸಭೆಗೆ ಸೇರ್ಪಡೆಗೊಂಡ ಗ್ರಾಪಂ ಪ್ರದೇಶಗಳಿಗೆ ಕರ್ನಾಟಕ ಪೌರಸಭೆ ಕಾಯ್ದೆಯಡಿ ಈಗಿರುವ ನಾಮನಿರ್ದೇಶಿತ ಸದಸ್ಯರಿಗೆ ಬದಲಾಗಿ ಹೊಸದಾಗಿ 04 ಹೆಚ್ಚುವರಿ ಸದಸ್ಯರನ್ನು ನಾಮನಿರ್ದೇಶನ ಮಾಡಲು ಗ್ರಾಮಾಂತರ ಅಪರ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅಪರ ಜಿಲ್ಲಾಧಿಕಾರಿಯವರ ಮೂಲಕ ಸಲ್ಲಿಸಿರುವ ವರದಿಯಲ್ಲಿ ಪ್ರಸ್ತುತ ನಾಮ ನಿರ್ದೇಶನ ಮಾಡಲು ಪ್ರಸ್ತಾಪಿಸಿರುವ 4 ಅಭ್ಯರ್ಥಿಗಳ ಹೆಸರು ಸೂಚಿಸಿ ಅಪರ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.ಅದರಂತೆ 2020 ನ.11ರಂದು ನಗರಸಭೆಗೆ ವಾಜರಹಳ್ಳಿ, ಅರಶಿಣಕುಂಟೆ, ಬಸವನಹಳ್ಳಿ ಮತ್ತು ವಿಶ್ವೇಶ್ವರಪುರ ಗ್ರಾಪಂ ಪ್ರದೇಶಗಳಿಂದ ಪ್ರತಿನಿಧಿಸಲು ಹೆಚ್ಚುವರಿ ಸದಸ್ಯರ ಅವಧಿಯನ್ನು ಮೊಟಕುಗೊಳಿಸಿ ನಗರಸಭೆಗೆ ಕರ್ನಾಟಕ ಪೌರಸಭೆ ಕಾಯ್ದೆಯಡಿ ಹೊಸದಾಗಿ 4 ಮಂದಿ ಹೆಚ್ಚುವರಿ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹೆಚ್ಚುವರಿ ಸದಸ್ಯರಾಗಿ ಆಯ್ಕೆ ಮಾಡಿ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ನೂತನ ಹೆಚ್ಚುವರಿ ಸದಸ್ಯರ ಆಯ್ಕೆ : ವಾಜರಹಳ್ಳಿ ಗ್ರಾಪಂ ಭಕ್ತನಪಾಳ್ಯ ಮುನಿರಾಜು, ಅರಿಶಿಣಕುಂಟೆ ಪಂಚಾಯಿತಿ ಲಕ್ಷಿ$್ಮನಾರಾಯಣ್, ಬಸವನಹಳ್ಳಿ ಪಂಚಾಯಿತಿ ನರಸಿಂಹಮೂರ್ತಿ, ವಿಶ್ವೇಶ್ವರಪುರ ಪಂಚಾಯಿತಿ ರಂಗಸ್ವಾಮಿ ಅವರನ್ನು ಹೆಚ್ಚುವರಿ ಸದಸ್ಯರಾಗಿ ಸರ್ಕಾರ ನೇಮಕ ಮಾಡಿದೆ.