ಕರ್ನಾಟಕ ಲೋಕಸೇವಾ ಆಯೋಗ  
ರಾಜ್ಯ

ಲೆಕ್ಕಪತ್ರ ಇಲಾಖೆಯ 68 ಹುದ್ದೆ ಭರ್ತಿಗೆ ಅರ್ಜಿ

ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರು 15 (ಗ್ರೂಪ್ ಎ) ಹುದ್ದೆಗಳು ಹಾಗೂ ರಾಜ್ಯ ಲೆಕ್ಕಪರಿಶೋಧನಾಧಿಕಾರಿ 53 (ಗ್ರೂಪ್ ಬಿ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಗಸ್ಟ್ 28ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಸೆ.26 ಕೊನೆಯ ದಿನವಾಗಿದೆ. ಪೂರ್ವಭಾವಿ ಪರೀಕ್ಷಾ ತಾತ್ಕಾಲಿಕ ದಿನಾಂಕ ನ.29 ಎಂದು ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ.