ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ 
ರಾಜ್ಯ

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಪಿಜಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

ಪ್ರಮುಖ ಮುಖ್ಯಾಂಶಗಳು

  • ಎರಡು ವರ್ಷಗಳ ಎಂ.ಎಸ್ಸಿ ಅರ್ಥಶಾಸ್ತ್ರ, ಹಣಕಾಸು ಅರ್ಥಶಾಸ್ತ್ರ, ಅಭಿವೃದ್ಧಿ ಅರ್ಥಶಾಸ್ತ್ರ, ಡೇಟಾ ಅನಾಲಿಟಿಕ್ಸ್, ಸಾರ್ವಜನಿಕ ನೀತಿ ಮತ್ತು ಎಂ.ಎ ಅರ್ಥಶಾಸ್ತ್ರ ಕೋರ್ಸುಗಳಿಗೆ ಅರ್ಜಿ
  • ಕೋರ್ಸುಗಳಿಗೆ ಅರ್ಜಿ ಸಲ್ಲಿಸಲು ಜೂ.15ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
  • ವಿವಿ ನಡೆಸಿದ ಪಿಜಿ ಕೋರ್ಸುಗಳ ಪ್ರವೇಶ ಪರೀಕ್ಷೆಗೆ (ಸಿಯುಇಟಿ-ಪಿಜಿ) ಹಾಜರಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಬೆಂಗಳೂರು: ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯವು (ಬೇಸ್) 2026-27ನೇ ಸಾಲಿನಲ್ಲಿ ಆರು ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಎರಡು ವರ್ಷಗಳ ಎಂ.ಎಸ್ಸಿ ಅರ್ಥಶಾಸ್ತ್ರ, ಹಣಕಾಸು ಅರ್ಥಶಾಸ್ತ್ರ, ಅಭಿವೃದ್ಧಿ ಅರ್ಥಶಾಸ್ತ್ರ, ಡೇಟಾ ಅನಾಲಿಟಿಕ್ಸ್, ಸಾರ್ವಜನಿಕ ನೀತಿ ಮತ್ತು ಎಂ.ಎ ಅರ್ಥಶಾಸ್ತ್ರ ಕೋರ್ಸುಗಳಿಗೆ ಅರ್ಜಿ ಸಲ್ಲಿಸಲು ಜೂ.15ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ವಿವಿ ನಡೆಸಿದ ಪಿಜಿ ಕೋರ್ಸುಗಳ ಪ್ರವೇಶ ಪರೀಕ್ಷೆಗೆ (ಸಿಯುಇಟಿ-ಪಿಜಿ) ಹಾಜರಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ http://base.ac.in ವೆಬ್‌ಸೈಟ್ ವೀಕ್ಷಿಸಬಹುದು ಎಂದು ಕುಲಸಚಿವೆ ಮಮತಾದೇವಿ ಜಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.