ಕನಕಗಿರಿಯಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ 3ನೇ ಬ್ಯಾಚ್‌ಗೆ ಸ್ಥಳೀಯ ಅರ್ಹ ಯುವಕರು ಅರ್ಜಿ ಸಲ್ಲಿಸುವಂತೆ ಶುಕ್ರವಾರ ಜಾಗೃತಿ ಜಾಥಾ ನಡೆಸಲಾಯಿತು. ಕ್ಯಾಪ್ಟನ್ ಪುಂಡಪ್ಪ ಅಡವಳ್ಳಿ, ಮೇಲ್ವಿಚಾರಕ ಮಲ್ಲಯ್ಯ ಗೋಮರ್ಸಿ ಇತರರಿದ್ದರು. 
ರಾಜ್ಯ

ಸೇನಾ ಆಯ್ಕೆ ಪೂರ್ವ ತರಬೇತಿಗೆ ಅರ್ಜಿ

ಕನಕಗಿರಿ: ಪಾಂಡುರಂಗ ದೇವಸ್ಥಾನದ ಸಮುದಾಯ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ 3ನೇ ಬ್ಯಾಚ್‌ಗೆ ಸ್ಥಳೀಯ ಅರ್ಹ ಯುವಕರು ಅರ್ಜಿ ಸಲ್ಲಿಸುವಂತೆ ಶುಕ್ರವಾರ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. 
ಮುಂದಿನ 4 ತಿಂಗಳು ತರಬೇತಿ ನಡೆಯಲಿದ್ದು, ಅರ್ಜಿ ಸಲ್ಲಿಕೆಗೆ ಜು.5 ಕೊನೆಯ ದಿನವಾಗಿದೆ. ಮೇಲ್ವಿಚಾರಕ ಮಲ್ಲಯ್ಯ ಗೋಮರ್ಸಿ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಕರಪತ್ರಗಳನ್ನು ಹಂಚಿ ಅರಿವು ಮೂಡಿಸಲಾಯಿತು.
ಮುಖ್ಯ ತರಬೇತುದಾರ ಕ್ಯಾಪ್ಟನ್ ಪುಂಡಪ್ಪ ಅಡವಳ್ಳಿ, ತರಬೇತುದಾರ ರವಿ ದೇಸಾಯಿ, ರವಿ ತಾಳಿ, ತರಬೇತಿ ಶಿಕ್ಷಕ ವೆಂಕಟೇಶ್ ಬಿಳಗುಡ್ಡೆ ಇತರರಿದ್ದರು.