ಪೊಲೀಸ್ ಕಾನ್ಸ್‌ಟೇಬಲ್  
ರಾಜ್ಯ

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭ: ಅರ್ಜಿ ಸಲ್ಲಿಕೆ ಲಿಂಕ್‌ಗೆ ಕ್ಲಿಕ್ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಎಸ್ಸಿ-ಎ, ಎಸ್ಸಿ-ಬಿ ಮತ್ತು ಎಸ್ಸಿ-ಸಿ ಜಾತಿ ಪ್ರಮಾಣ ಪತ್ರಗಳ BÃ…w ಸಂಖ್ಯೆ ನಮೂದಿಸುವುದು ಕಡ್ಡಾಯ
  • ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗ್ರಾಮೀಣ ಕೋಟಾ ಕ್ಲೇಮ್ ಮಾಡಬಯಸಿದರೆ ಕಡ್ಡಾಯವಾಗಿ ನಾನ್ ಕ್ರಿಮಿ ಲೇಯರ್ ಪ್ರಮಾಣಪತ್ರವನ್ನು ಹೊಂದಿರಬೇಕು
  • ಒಟ್ಟು ಹುದ್ದೆಗಳಲ್ಲಿ 596 ಹುದ್ದೆಗಳು ಕಲ್ಯಾಣ ಕರ್ನಾಟಕ ಮತ್ತು ಇತರೆ ಜಿಲ್ಲೆಗಳ 3,395 ಹುದ್ದೆಗಳು ಸೇರಿ ಒಟ್ಟು 3,991 ಹುದ್ದೆಗಳನ್ನು ಭರ್ತಿ
ಬೆಂಗಳೂರು: ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ಭರ್ತಿಗೆ ಜೂ.10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಆ ವೇಳೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳಮೀಸಲಾತಿ ಪ್ರಕಾರ ತಮಗೆ ಅನ್ವಯವಾಗುವ ಎಸ್ಸಿ-ಎ, ಎಸ್ಸಿ-ಬಿ ಮತ್ತು ಎಸ್ಸಿ-ಸಿ ಜಾತಿ ಪ್ರಮಾಣ ಪತ್ರಗಳ BÃ…w ಸಂಖ್ಯೆ ನಮೂದಿಸುವುದು ಕಡ್ಡಾಯಗೊಳಿಸಲಾಗಿದೆ.
ಇದಲ್ಲದೆ, ಗ್ರಾಮೀಣ, ಕನ್ನಡ ಮಾಧ್ಯಮ ವ್ಯಾಸಂಗ ಇತ್ಯಾದಿ ಕ್ಲೇಮ್ ಮಾಡುವವರು ಅಗತ್ಯ ನಮೂನೆಗಳಲ್ಲಿ ಪ್ರಮಾಣ ಪತ್ರಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗ್ರಾಮೀಣ ಕೋಟಾ ಕ್ಲೇಮ್ ಮಾಡಬಯಸಿದರೆ ಕಡ್ಡಾಯವಾಗಿ ನಾನ್ ಕ್ರಿಮಿ ಲೇಯರ್ ಪ್ರಮಾಣಪತ್ರವನ್ನು ಹೊಂದಿರಬೇಕು. ಇದಲ್ಲದೆ, ಅರ್ಜಿ ಜತೆ ಅಪ್‌ಲೋಡ್ ಮಾಡುವ ಚಿತ್ರ ಮತ್ತು ಸಹಿ 50 ಕೆಬಿ ಒಳಗಿರಬೇಕು.
ಒಟ್ಟು ಹುದ್ದೆಗಳಲ್ಲಿ 596 ಹುದ್ದೆಗಳು ಕಲ್ಯಾಣ ಕರ್ನಾಟಕ ಮತ್ತು ಇತರೆ ಜಿಲ್ಲೆಗಳ 3,395 ಹುದ್ದೆಗಳು ಸೇರಿ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನವಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ https://cetonline.karnataka.gov.in/kea/indexnew ಮಾಡಬಹುದು.