- ಮಿಕ್ಕುಳಿದ ವೃಂದದ 1,421 ಹಾಗೂ ಸ್ಥಳೀಯ ವೃಂದದ 179 ಹುದ್ದೆಗಳಿಗೆ ಪ್ರತ್ಯೇಕವಾದ ಅರ್ಜಿ
- ಸೆ.6ರಂದು ಪ್ರತ್ಯೇಕವಾಗಿಯೇ ಲಿಖಿತ ಪರೀಕ್ಷೆ ನಡೆಸಲಾಗುವುದು
- ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಶೇಡ್ ಮಾಡುವುದು ಕಡ್ಡಾಯ. ಒಂದು ವೇಳೆ ಐದನೇ ವೃತ್ತವನ್ನು ಶೇಡ್ ಮಾಡದೇ ಇದ್ದಲ್ಲಿ ಪ್ರತಿ ಪ್ರಶ್ನೆಗೆ 0.25 ಅಂಕ ಕಡಿತ
ಬೆಂಗಳೂರು:: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1,600 ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ ಡಿಎಆರ್) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜು.22 ಕೊನೆಯ ದಿನವಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಮಿಕ್ಕುಳಿದ ವೃಂದದ 1,421 ಹಾಗೂ ಸ್ಥಳೀಯ ವೃಂದದ 179 ಹುದ್ದೆಗಳಿಗೆ ಪ್ರತ್ಯೇಕವಾದ ಅರ್ಜಿ ಆಹ್ವಾನಿಸಲಾಗಿದೆ. ಸೆ.6ರಂದು ಪ್ರತ್ಯೇಕವಾಗಿಯೇ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಶೇಡ್ ಮಾಡುವುದು ಕಡ್ಡಾಯ. ಇದಕ್ಕೆ ಹೆಚ್ಚುವರಿಯಾಗಿ ಐದು ನಿಮಿಷ ಸಮಯ ನೀಡಲಾಗುತ್ತದೆ. ಒಂದು ವೇಳೆ ಐದನೇ ವೃತ್ತವನ್ನು ಶೇಡ್ ಮಾಡದೇ ಇದ್ದಲ್ಲಿ ಪ್ರತಿ ಪ್ರಶ್ನೆಗೆ 0.25 ಅಂಕ ಕಡಿತಗೊಳಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.