- * ಫಲಪುಷ್ಪ ಪ್ರದರ್ಶನ ಆ. 6 ರಿಂದ 17ರವರೆಗೆ ಆಯೋಜನೆ
ಬೆಂಗಳೂರು: ಸ್ವಾತಂತ್ರೋತ್ಸವ ಅಂಗವಾಗಿ ಲಾಲ್‌ಬಾಗ್ ಸಸ್ಯಶಾಸೀಯ ತೋಟದಲ್ಲಿ ಈ ಬಾರಿ ಗಂಗ ಸಾಮ್ರಾಜ್ಯ ವೈಭವ - ಕರ್ನಾಟಕದ ಮೊಟ್ಟ ಮೊದಲ ರಾಜವಂಶ’ ಎಂಬ ವಿಷಯಾಧಾರಿತ 220ನೇ ಫಲಪುಷ್ಪ ಪ್ರದರ್ಶನ ಆ. 6 ರಿಂದ 17ರವರೆಗೆ ಆಯೋಜನೆಗೊಂಡಿದೆ.
ಫಲಪುಷ್ಪ ಪ್ರದರ್ಶನದ ಪ್ರಯುಕ್ತ ತೋಟಗಾರಿಕೆ ಇಲಾಖೆಯು ಮನೆ, ಕಛೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯ ಉದ್ಯಾನವನಗಳು, ತೋಟಗಳು, ತಾರಸಿ ಅಥವಾ ಕೈ ತೋಟಗಳು, ತರಕಾರಿ ಮತ್ತು ಔಷಧಿ ಗಿಡಗಳು, ಕುಂಡದಲ್ಲಿ ಬೆಳೆದ ಗಿಡಗಳು ಹಾಗೂ ಇಕೆಬಾನ, ಜಾನ್ರೂ, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಏರ್ಪಡಿಸಿದೆ. ಈ ಸಂಬಂಧ ಸರ್ಕಾರಿ ಮತ್ತು ಖಾಸಗಿ ಅಲಂಕಾರಿಕ ತೋಟಗಾರಿಕಾ ಸಾರ್ವಜನಿಕರು ಹಾಗೂ ಆಸಕ್ತ ಸಂಸ್ಥೆಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಾಗೂ ಇಲಾಖಾ ಮಳಿಗೆಗಳ ಹಂಚಿಕೆಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತರು ಹಾಗೂ ಪ್ರದರ್ಶಕರು ನಿಗದಿತ ಕಛೇರಿಗಳಿಂದ ಅಥವಾ ವೆಬ್‌ಸೈಟ್ https://horticulturedir.karnataka.gov.in ನಲ್ಲೂ ಅರ್ಜಿಗಳನ್ನು ಪಡೆದು ಸ್ಪರ್ಧೆಗಳಿಗೆ ಅರ್ಜಿ ಸಲ್ಲಿಸಲು ಆ. 4 ಕೊನೆಯ ದಿನ. ಮಳಿಗೆಗಳ ಹಂಚಿಕೆಗೆ ಜು. 31ರೊಳಗೆ ಅರ್ಜಿ ಸಲ್ಲಿಸಬೇಕು. ವಿಳಾಸ: ತೋಟಗಾರಿಕೆ ಅಪರ ನಿರ್ದೇಶಕರು (ಯೋಜನೆ), ಲಾಲ್‌ಬಾಗ್, ಬೆಂಗಳೂರು.