ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಿದ ಹಿನ್ನೆಲೆಯಲ್ಲಿ ಮಾನ್ವಿಯ ಕಂದಾಯ ಕಚೇರಿಯಲ್ಲಿ ಬುಧವಾರ ಉಪ ತಹಸೀಲ್ದಾರ್ ವಿರುಪಣ್ಣ ಅವರನ್ನು ಸಾಮಾಜಿಕ ಕಾರ್ಯಕರ್ತರಾದ ಸುರೇಶ ಕಾತರಕಿ, ಸೂಗಪ್ಪಗೌಡ ಹರವಿ ಇತರರು ಸನ್ಮಾನಿಸಿದರು.  
ರಾಜ್ಯ

ಅರ್ಜಿ ವಿಲೇವಾರಿ, ಮಾನ್ವಿ ನಾಡಕಚೇರಿ ದ್ವಿತೀಯ

ನರೇಶ್ ಕುಮಾರ್
ಮಾನ್ವಿ: ಅಟಲ್‌ಜೀ ಜನಸ್ನೇಹಿ ಕೇಂದ್ರ ಯೋಜನೆ ಅಡಿ ವಿವಿಧ ಪ್ರಮಾಣ ಪತ್ರಗಳ ಅರ್ಜಿ ವಿಲೇವಾರಿಯಲ್ಲಿ ಪಟ್ಟಣದ ನಾಡ ಕಚೇರಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದ್ದು, ಕಂದಾಯ ಇಲಾಖೆಯ ಆಯುಕ್ತ ಸಿ.ಎನ್.ಮೀನಾ ನಾಗರಾಜ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ನಾಡ ಕಚೇರಿಯಲ್ಲಿ ಡಿಸೆಂಬರ್‌ನಲ್ಲಿ ಸ್ವೀಕೃತವಾದ 1615 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ.100 ರಷ್ಟು ವಿಲೇವಾರಿ ಮಾಡಿ, 10 ಸಿಗ್ಮಾ ಮೌಲ್ಯವನ್ನು ಪಡೆದು 12.50 ವಿಲೇವಾರಿ ಸೂಚ್ಯಂಕದ ಪ್ರಕಾರ ನಾಡ ಕಚೇರಿಯಲ್ಲಿ 13.50 ಪಟ್ಟು ನಿಗದಿತ ಅವಧಿಗಿಂತ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ 
ನಾಡ ಕಚೇರಿಯು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ಶ್ಲಾಘನೀಯವೆಂದು ಉಪತಹಸೀಲ್ದಾರ್ ವಿರುಪಣ್ಣ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಮುಂದಿನ ದಿನಗಳಲ್ಲಿಯೂ ನಾಡ ಕಚೇರಿಯಿಂದ ಇದೇ ರೀತಿ ಸಹಕಾರ ಹಾಗೂ ಕಾರ್ಯಕ್ಷಮತೆಯನ್ನು ನಿರೀಕ್ಷಿಸುವುದಾಗಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.