ರಾಮಪ್ಪ 
ರಾಜ್ಯ

ಭೋವಿ ಸಮಾಜದ ಅನುದಾನ ಬಳಸಲು ಶಾಸಕರಿಗೆ ಮನವಿ

ರಾಯಚೂರು ಭೋವಿ ಅಭಿವೃದ್ಧಿ ನಿಗಮದಿಂದ ಲಭ್ಯವಿರುವ ಅನುದಾನ ಬಳಕೆಗೆ ವಿಶೇಷ ಒತ್ತು ನೀಡಿ ಸಕಾಲದಲ್ಲಿ ಯೋಜನೆಗಳ ಫಲಾನುಭವಿಗಲ ಆಯ್ಕೆಯನ್ನು ಅಂತಿಮಗೊಳಿಸುವಂತೆ ಕ್ಷೇತ್ರಗಳ ಶಾಸಕರಿಗೆ ಮನವಿ ಮಾಡಲಾಗಿದೆಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಹೇಳಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕಳೆದ ಐದು ವರ್ಷದಲ್ಲಿ ರಾಯಚೂರು ಜಿಲ್ಲೆಯಿ 120 ಫಲಾನುಭವಿಗಳಿಗೆ 30 ಲಕ್ಷ ರೂ. ಖರ್ಚು ಮಾಡಲಾಗಿದೆ. 12 ವೈಯಕ್ತಿಕ ಹಾಗೂ 12 ಸ್ವ ಸಹಾಯ ಗುಂಪುಗಳಿಗೆ ಗಂಗಾ ಕಲ್ಯಾಣ ಯೋಜನೆ ಬಳಕೆ ಅವಕಾಶ ನೀಡಲಾಗಿದೆ. ಭೂ ಒಡೆತನ ಯೋಜನೆಯಡಿ ಜಿಲ್ಲೆಯಲ್ಲಿ 436 ಫಲಾನುಭವಿಗಳಿಗೆ 4.80 ಕೋಟಿ ರೂ. ಖರ್ಚು ಮಾಡಲಾಗಿದೆ. ಭೂಮಿ ಬೆಲೆ ಏರಿಕೆಯಾಗಿದ್ದರಿಂದ ಭೂ ಹಂಚಿಕೆ ಮಾಡಲು ಸಮಸ್ಯೆಯಾಗುತ್ತಿದೆ ಎಂದರು.
ನಿಗಮಗಳಿಗೆ ಅನುದಾನ ಹೆಚ್ಚಳ ಹಾಗೂ ನಿಗಮದ ಅಧ್ಯಕ್ಷ ವಿವೇಚನಾ ನಿಧಿ ಹೆಚ್ಚಿಸುವ ಕುರಿತು ಎಲ್ಲಾ ನಿಗಮಗಳ ಅಧ್ಯಕ್ಷರ ನಿಯೋಗ ಸಿಎಂ ಭೇಟಿ ಮಾಡಲು ನಿರ್ಧರಿಸಲಾಗಿದೆ. ಶಾಸಕರು,ಸಚಿವರು ಶಿಫಾರಸ್ಸಿನ ಮೇರೆಗ ಯೋಜನೆ ರೂಪಿಸಲಾಗುತ್ತಿದೆ. ಸಕಾಲಕೆ ಅನುದಾನ ಬಳಕೆ ಸಾಧ್ಯವಾಗುತ್ತಿಲ್ಲ. ಈ ಕುರಿತು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಭೋವಿ ವಡ್ಡರ ಸಮಾಜ ಜಿಲ್ಲಾಧ್ಯಕ್ಷ ನಾರಾಯಣ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಭೀಮರಾಯ, ಯಲ್ಲಪ್ಪ ಇದ್ದರು.