ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ವೀರಪ್ಪನ್ ದೊಡ್ಡಿ ಗ್ರಾಮದಲ್ಲಿ ಮಹಿಳೆಯರು ಶಾಸಕ ಎಂ.ಆರ್ ಮಂಜುನಾಥ್ ಅವರಲ್ಲಿ ಮನವಿ ಮಾಡಿದರು. ಮಣಿ, ಭಾಗ್ಯರಾಜ್, ವಿಜಯಕುಮಾರ್ ಇತರರು ಇದ್ದರು.  
ರಾಜ್ಯ

ನೀರಿನ ಸಮಸ್ಯೆ ಬಹರಿಸಲು ಶಾಸಕರಿಗೆ ಮನವಿ

ವಸಂತಕುಮಾರ್ ಬಿ
ಹನೂರು: ಗ್ರಾಮಗಳಲ್ಲಿ ತಲೆದೂರಿರುವ ಕುಡಿವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರು ಭಾನುವಾರ ಶಾಸಕ ಎಂ.ಆರ್.ಮಂಜುನಾಥ್ ಅವರಲ್ಲಿ ಮನವಿ ಮಾಡಿದರು. 

ಬಿದರಹಳ್ಳಿ ಸಮೀಪದ ವೀರಪ್ಪನ್ ದೊಡ್ಡಿಗೆ ಆಗಮಿಸಿದ್ದ ವೇಳೆ ಮಹಿಳೆಯರು ಶಾಸಕರನ್ನು ಭೇಟಿಯಾಗಿ ಮಾತನಾಡಿ, ಈ ಭಾಗದ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಇದರಿಂದ ಬಿಂದಿಗೆ ನೀರಿಗೂ ತುಂಬ ಕಷ್ಟ ಪಡಬೇಕಿದೆ. ಆದ್ದರಿಂದ  ಈ ಬಗ್ಗೆ ಗಮನಹರಿಸಿ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಈ ಬಾರಿ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. 

ಮಾರ್ಟಳ್ಳಿ ಭಾಗದಲ್ಲಿ ತಲೆದೂರಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಸೂಚಿಸಲಾಗಿದೆ. ಇನ್ನು ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಡಿ ಕಾಮಗಾರಿಯಾಗದ ಸಂಬಂಧ ಅಗತ್ಯ ಕ್ರಮವಹಿಸಲಾಗಿದೆ. ಹಾಗಾಗಿ ಮುಂದಿನ ಮೇ ತಿಂಗಳೊಳಗೆ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು. 
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮಣಿ, ಮುಖಂಡರಾದ ಮಹದೇವ, ಭಾಗ್ಯರಾಜ್, ಪೌಲ್‌ರಾಜ್, ಬಾಲಯ್ಯ, ಮಾದಯ್ಯ, ವಿಜಯಕುಮಾರ್, ರಾಜುನಾಯ್ಡು, ಮೂರ್ತಿ ಇತರರು ಇದ್ದರು.