ಕಲಬುರಗಿ ಶರಣಬಸವ ವಿವಿಯಲ್ಲಿ ಸ್ಥಾಪಿಸಿರುವ ಡಾ.ಶರಣಬಸವಪ್ಪ ಅಪ್ಪಾಜಿ ಸಂಶೋಧನಾ, ನಾವೀನ್ಯತೆ ಮತ್ತು ಉದ್ಯಮಶೀಲತಾ ಕೇಂದ್ರಕ್ಕೆ ಶ್ರೀ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿ ಮಂಗಳವಾರ ಚಾಲನೆ ನೀಡಿದರು. ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಬಸವರಾಜ ದೇಶಮುಖ, ಡಾ.ಅನಿಲಕುಮಾರ ಬಿಡವೆ, ಡಾ.ಲಕ್ಷ್ಮೀ ಪಾಟೀಲ್​ ಮಾಕಾ ಇತರರಿದ್ದರು. 
ರಾಜ್ಯ

ಶಿಕ್ಷಣದ ಸಬಲೀಕರಣಕ್ಕೆ ಅಪ್ಪಾಜಿ ಕೊಡುಗೆ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿ ಬಣ್ಣನೆ
  • ಶರಣಬಸವ ವಿವಿಯಲ್ಲಿ ಸಂಶೋಧನಾ ಕೇಂದ್ರಕ್ಕೆ ಚಾಲನೆ
ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣದ ಸಬಲೀಕರಣಕ್ಕೆ ಪೂಜ್ಯ ಡಾ.ಶರಣಬಸಪ್ಪ ಅಪ್ಪ ಕೊಡುಗೆ ಅನನ್ಯವಾಗಿದೆ ಎಂದು ಮುಗುಳಖೋಡ- ಜಿಡಗಾ ಮಠದ ಪೀಠಾಧಿಪತಿ ಶ್ರೀ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿ ಬಣ್ಣಿಸಿದರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಿರುವ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಸಂಶೋಧನಾ, ನಾವೀನ್ಯತೆ ಮತ್ತು ಉದ್ಯಮಶೀಲತಾ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಸೌಲಭ್ಯಗಳು ವಿವಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಿವೆ ಎಂದರು.
ಸಂಶೋಧನಾ ಉತಷ್ಟತಾ ಕೇಂದ್ರಕ್ಕೆ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಲಿಂ. ಡಾ.ಶರಣಬಸವಪ್ಪ ಅಪ್ಪ ಹೆಸರಿಟ್ಟಿರುವುದು ಅತ್ಯಂತ ಸೂಕ್ತ. ಅವರ ಪ್ರಯತ್ನಗಳಿಲ್ಲದಿದ್ದರೆ ಈ ಪ್ರದೇಶ ಇಂದಿಗೂ ಶೈಕ್ಷಣಿಕವಾಗಿ ಹಿಂದುಳಿಯುತ್ತಿತ್ತು ಎಂದ ಅವರು, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾದ 12ನೇ ಶತಮಾನದ ಸಮಾಜ ಸುಧಾರಕ ಮಹಾತ್ಮ ಬಸವೇಶ್ವರರ ಅಶ್ವಾರೂಢ ಪ್ರತಿಮೆ ನವದೆಹಲಿ ಸಂಸತ್​ ಭವನ ಆವರಣದಲ್ಲಿ ಸ್ಥಾಪಿಸಿರುವುದು. ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರು, ಶರಣಬಸವ ವಿವಿ ಕುಲಾಧಿಪತಿ ಮಾತೋಶ್ರೀ ಡಾ.ದಾಾಯಿಣಿ ಅಪ್ಪ ನಾಯಕತ್ವವನ್ನು ಶ್ಲಾಸಿದರು.
ಅಧ್ಯಕ್ಷತೆ ವಹಿಸಿದ್ದ ಮಾತೋಶ್ರೀ ಡಾ.ದಾಾಯಿಣಿ ಅಪ್ಪ ಮಾತನಾಡಿ, ಶರಣಬಸವ ವಿವಿಯಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಪೂಜ್ಯ ಡಾ.ಅಪ್ಪಾಜಿ ಅತ್ಯಂತ ಮಹತ್ವ ನೀಡುತ್ತಿದ್ದರು. ಜ್ಞಾನ ಜತೆ ಕೌಶಲ ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಶೋಧನಾ ಚಟುವಟಿಕೆ ಕೈಗೊಳ್ಳುವಂತೆ ಸದಾ ಪ್ರೋತ್ಸಾಹಿಸುತ್ತಿದ್ದರು. ವಿವಿಯಲ್ಲಿ ಇಂದು ಉದ್ಘಾಟಿಸಿದ ಸಂಶೋಧನಾ ಉತಷ್ಟತಾ ಕೇಂದ್ರ ಡಾ.ಅಪ್ಪಾಜಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ವಿದ್ಯಾರ್ಥಿ ಮತ್ತು ಶಿಕ್ಷಕರು ಸದುಪಯೋಗ ಮಾಡಿಕೊಂಡು ವಿಶ್ವಮಟ್ಟದ ಸಂಶೋಧನೆ ಕೈಗೊಳ್ಳಬೇಕು. ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಗಿನ್ನೆಸ್​ ದಾಖಲೆ ಸೇರಿ ವಿಶ್ವಮಟ್ಟದ ಸಂಸ್ಥೆಗಳಿಂದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಶ್ರಮಿಸಿ ತಮ್ಮೊಂದಿಗೆ ವಿವಿಗೂ ಕೀರ್ತಿ ತರಬೇಕು ಎಂದು ಆಶಿಸಿದರು.
ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ, ಕುಲಸಚಿವರಾದ ಡಾ.ಲಕ್ಷಿ$್ಮ ಪಾಟೀಲ ಮಾಕಾ, ಡಾ.ಎಸ್​.ಎಚ್​. ಹೊನ್ನಳ್ಳಿ, ಡೀನ್​ ಡಾ.ಶಿವಕುಮಾರ ಜವಳಗಿ, ನಿರ್ದೇಶಕ ಪ್ರೊ.ವಿ.ಡಿ. ಮೈತ್ರಿ, ಸಂಶೋಧನಾ ಡೀನ್​ ಡಾ.ಸುಜಾತಾ ಮಲ್ಲಾಪುರ, ಡಾ.ಮಲ್ಲಿಕಾರ್ಜುನ ದೇಶಮುಖ ಇತರರಿದ್ದರು. ಶರಣಬಸವ ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಸ್ವಾಗತಿಸಿದರು. ಪ್ರೊ.ನಿರುಪಮಾ ವಂದಿಸಿದರು.
"

ಈ ಭಾಗದ ಶೈಕ್ಷಣಿಕ ಸಬಲೀಕರಣಕ್ಕಾಗಿ ಪೂಜ್ಯ ಡಾ.ಅಪ್ಪಾಜಿ ಕಂಡಿದ್ದ ಕನಸು ಸಾಕಾರಗೊಳಿಸುವ, ಶೈಕ್ಷಣಿಕ ಸೌಲಭ್ಯ ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಮಾತೋಶ್ರೀ ಹೆಗಲಿಗೇರಿದೆ. ಸಮರ್ಥವಾಗಿ ನಿಭಾಯಿಸುತ್ತಾರೆಂಬ ವಿಶ್ವಾಸವೂ ಇದೆ.