ಎಪಿಎಂಸಿಗಳಲ್ಲಿ ಸಿಬ್ಬಂದಿ ಬರ
- ಬೆಳಗಾವಿ ಎಪಿಎಂಸಿಗೆ ಸಿಬ್ಬಂದಿ ಬರ
- ದನಗಳ ಮಾರಾಟಕ್ಕೆ ಸಿಮಿತವಾದ ಮಾರುಕಟ್ಟೆ
- ಶೇ.೭೦ ರಷ್ಟು ಹುದ್ದೆ ಖಾಲಿ
ಎಪಿಎಂಸಿಗಳಿಗೆ ಸಿಬ್ಬಂದಿ ಬರ!
| ಬೆಳಗಾವಿಗೆ ಉಪನಿರ್ದೇಶಕರೇ ಇಲ್ಲ
| ದನಗಳ ಮಾರಾಟಕ್ಕೆ ಸೀಮಿತವಾದ ಮಾರುಕಟ್ಟೆ
ಕೃಷಿ ಉತ್ಪನ್ನಗಳಿಗೆ ಯೋಗ್ಯ ಮತ್ತು ಸ್ಪರ್ಧಾತ್ಮಕ ಬೆಲೆ ದೊರೆಕಿಸಲು ರೂಪ ತಾಳಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಶೇ.70ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ರೈತರಿಗೆ ಅನನುಕೂಲ ಆಗುವುದಷ್ಟೇ ಅಲ್ಲದೆ, ಸೌಲಭ್ಯಗಳೂ ಸಿಗುತ್ತಿಲ್ಲ.
ಬೆಳಗಾವಿ ಕೃಷಿ ಮಾರಾಟ ಇಲಾಖೆಯಲ್ಲಿ ಉಪನಿರ್ದೇಶಕರ ಹುದ್ದೆಯೇ ಖಾಲಿ ಬಿದ್ದಿದೆ. ಇದರಿಂದ ಮಂಜೂರಾದ 4 ಹುದ್ದೆಗಳಲ್ಲಿ 3 ಹುದ್ದೆಗಳು ಖಾಲಿ ಇವೆ. ಬೆಳಗಾವಿ ಎಪಿಎಂಸಿಯಲ್ಲೂ ಕಾರ್ಯದರ್ಶಿ ಹುದ್ದೆ ಖಾಲಿ ಇದ್ದು, 38 ಹುದ್ದೆಗಳಲ್ಲಿ 29 ಖಾಲಿ ಉಳಿದಿವೆ.
ಅದೇ ರೀತಿಯಾಗಿ ಬೈಲಹೊಂಗಲ ಎಪಿಎಂಸಿಯಲ್ಲಿ ೩೩ರಲ್ಲಿ ೨೫ , ಸವದತ್ತಿ ಎಪಿಎಂಸಿಯಲ್ಲಿ ೨೩ರಲ್ಲಿ ೧೫ , ಗೋಕಾಕ ಎಪಿಎಂಸಿ ೨೬ರ ರಲ್ಲಿ ೧೮ , ರಾಮದುರ್ಗ ಎಪಿಎಂಸಿ ೧೫ರಲ್ಲಿ ೧೨ , ಸಂಕೇಶ್ವರ ಎಪಿಎಂಸಿ ೧೧ರಲ್ಲಿ ೮ , ಅಥಣಿ ಎಪಿಎಂಸಿ ೧೬ರಲ್ಲಿ ೧೩ , ನಿಪ್ಪಾಣಿ ಎಪಿಎಂಸಿ ೯ರಲ್ಲಿ ೭ , ಕುಡಚಿ ೮ರ ಮೇಲಕ್ಕೆ ೬ , ನಂದಗಡದಲ್ಲಿ ೯ ಮೇಲಕ್ಕೆ ೭ ಹುದ್ದೆಗಳಿವೆ.
ಬೆಳಗಾವಿ ಮಾರುಕಟ್ಟೆ ಅಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಲ್ಲಿ 16ರಲ್ಲಿ 10 ಹುದ್ದೆ, ಮಾರುಕಟ್ಟೆ ಅಭಿವೃದ್ಧಿ ಯೋಜನೆ ಸಹಾಯಕ ಕಾರ್ಯವಾಹಕ ಅಭಿಯಂತರ ಕಚೇರಿಯಲ್ಲಿ 11ರಲ್ಲಿ 7 ಹುದ್ದೆಗಳು ಖಾಲಿ ಇವೆ. ಒಟ್ಟು ೨೩೭ ಹುದ್ದೆಗಳ ಮೇಲಿನ ಕೇವಲ ೭೧ ಭರ್ತಿ ಇವೆ. ಇನ್ನೂ 166 ಹುದ್ದೆಗಳು ಭರ್ತಿಯಾಗಬೇಕಿದೆ.
ಇನ್ನೂ ಎಪಿಎಂಸಿಗಳಲ್ಲಿ ಸಿಪಾಯಿ, ಕಡಿವಾಣತಾಗಾರ, ವರ್ಗೀಕರಣಕಾರರು, ಮೇಲ್ವಿಚಾರಕರ ಹುದ್ದೆಗಳು ೨೦೦೫ ರಿಂದ ಖಾಲಿ ಉಳಿದಿವೆ. ಇದರಿಂದ ಎಪಿಎಂಸಿಗಳಲ್ಲಿ ರೈತರ ಸಮಸ್ಯೆ, ರೈತರ ಬಗ್ಗೆ ವಿಚಾರಣೆ ನಡೆಸುವವರೇ ಇಲ್ಲ. ಸಿಬ್ಬಂದಿ ಇಲ್ಲದೆ ಎಪಿಎಂಸಿ ಕಚೇರಿಗಳು ಬಳಲುತ್ತಿವೆ.
ಜಿಲ್ಲೆಯಲ್ಲಿ 10 ಎಪಿಎಂಸಿಗಳು ಹಾಗೂ ಕೃಷಿ ಉತ್ಪನ್ನ ಇಲಾಖೆಗಳಲ್ಲಿ ಸರ್ಕಾರ ಮಂಜೂರ ಮಾಡಿರುವ ಶೇ.30ರಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಪರಿಣಾಮ ಕಾರ್ಯವೈಖರಿ ಹಿನ್ನಡೆಯಾಗುತ್ತಿದೆ. ಜತೆಗೆ, ಎಪಿಎಂಸಿಗಳು ದನಗಳ ಮಾರಾಟಕ್ಕೆ ಮಾತ್ರ ಸೀಮಿತವಾದಂತಾಗಿವೆ.
ಬೆಳಗಾವಿ ಎಪಿಎಂಸಿಗಳಿಗೆ ವಿಜಯಪುರ, ಬಾಗಲಕೋಟೆ ಹಾಗೂ ಮಹಾರಾಷ್ಟದಿಂದಲೂ ಈರುಳ್ಳಿ, ಸಿಹಿ ಗೆಣಸು ಸೇರಿದಂತೆ ಹತ್ತಾರು ಕೃಷಿ ಉತ್ಪನ್ನಗಳು ಬರುತ್ತವೆ. ಆದರೆ ಸೂಕ್ತ ಸಿಬ್ಬಂದಿ ಇಲ್ಲದೆ ರೈತರಿಗೆ ಸರಿಯಾದ ಸೇವೆ ನೀಡುವಲ್ಲಿ ಹಿಂದೆ ಬೀಳುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ನಿವೃತ್ತಿ, ಪದೋನ್ನತಿ, ಮರಣ, ವರ್ಗಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ಖಾಲಿಯಾದ ಹುದ್ದೆಗಳನ್ನು ಭರ್ತಿ ಮಾಡಲು ಹೋಗುವುದಿಲ್ಲ. ಜೊತೆಗೆ, ಮಾರುಕಟ್ಟೆ ಅಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಲ್ಲಿನ ರೇಖಾ ಚಿತ್ರಕಾರರು (ಟ್ರೇಸರ್), ನೀಲಿನಕ್ಷೆಗಾರರು (ಬ್ಲೂ ಪ್ರಿಂರ್ಸ್) ಹುದ್ದೆಗಳನ್ನು ಮಂಜೂರಾದಾಗಿನಿಂದ ಭರ್ತಿ ಮಾಡಿರುವುದು ವಿಪರ್ಯಾಸ. ಜೊತೆಗೆ, ಇದು ಸರ್ಕಾರದ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ.
ಜಿಲ್ಲೆಯ ಎಪಿಎಂಸಿಗಳಲ್ಲಿ ಸಿಬ್ಬಂದಿ ಕೊರತೆಯ ಕೊರತೆಯಿದೆ. ಸರ್ಕಾರ ಕೂಡಲೇ ಸಿಬ್ಬಂದಿ ನೇಮಕಕ್ಕೆ ಮುಂದಾಗುವ ಮೂಲಕ ಎಪಿಎಂಸಿಗಳಿಗೆ ಜೀವ ತುಂಬಬೇಕು.
| ತ್ಯಾಗರಾಜ ಕದಂ ರಾಜ್ಯ ರೈತ ಸಂಘದ ವಕ್ತಾರ