ಶನಿವಾರಸಂತೆ ಸಮೀಪದ ಸ್ಥಳೀಯ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಡಿ.ಬಿ.ಧರ್ಮಪ್ಪ ಮಾತನಾಡಿದರು. ಕುಮಾರ್ ನಾಯಕ, ಎಸ್.ಸಿ.ಶರತ್‌ಶೇಖರ್, ಪರಮೇಶ್, ಮಹಾಂತಪ್ಪ, ದೀಪಕ್, ಬಿ.ಎಸ್.ಮಂಜುನಾಥ್, ದೇವಾಂಬಿಕ ಮಹೇಶ್, ಎಸ್.ಜಿ.ರವಿಕುಮಾರ್ ಇತರರಿದ್ದರು. 
ರಾಜ್ಯ

ಎಪಿಸಿಎಂಎಸ್‌ಗೆ 22 ಲಕ್ಷ ರೂ. ನಿವ್ವಳ ಲಾಭ

ಪ್ರಮುಖ ಮುಖ್ಯಾಂಶಗಳು

  • ಶನಿವಾರಸಂತೆ ಎಪಿಸಿಎಂಎಸ್
  • ಅಧ್ಯಕ್ಷ ಡಿ.ಬಿ.ಧರ್ಮಪ್ಪ
ಶನಿವಾರಸಂತೆ: ಸದಸ್ಯರ ಸಲಹೆ ಸಹಕಾರ ಸಂಘದ ಅಭಿವೃದ್ಧಿಗೆ ಪೂರಕವಾಗಿದ್ದು, ಪ್ರಸ್ತುತ 22 ಲಕ್ಷ ರೂಪಾಯಿಗೂ ಅಧಿಕ ನಿವ್ವಳ ಲಾಭಗಳಿಸಲು ಸಾಧ್ಯವಾಗಿದೆ ಎಂದು ಶನಿವಾರಸಂತೆ ಎಪಿಸಿಎಂಎಸ್ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಅಭಿಪ್ರಾಯಪಟ್ಟರು.
ಸ್ಥಳೀಯ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸಂಘದ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಬಗ್ಗೆ ಆಡಳಿತ ಮಂಡಳಿಯ ಯೋಜನೆ ರೂಪಿಸಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ.ಶಿವರಾಜ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 10,47,42,142 ರೂ. ಗೊಬ್ಬರ ಮಾರಾಟ, ಕ್ರಿಮಿನಾಶಕ ಮಾರಾಟ ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು ನಡೆಸುವ ಮೂಲಕ 22,55, 400 ರೂ. ನಿವ್ವಳ ಲಾಭಗಳಿಸಿದೆ ಎಂದರು
ಮಹಾಸಭೆಯಲ್ಲಿ ಸಂಘದ ಪ್ರಗತಿ ಕುರಿತು ಸಹಕಾರಿ ಪ್ರಮುಖರಾದ ಉಮಾಶಂಕರ್, ಸುಬ್ಬಪ್ಪ, ಮೋಹನ್, ಎಸ್.ಪಿ.ರಾಜು, ಜಿ.ಎಂ.ಕಾಂತರಾಜ್ ಸಹಕಾರಿ ಸದಸ್ಯರ ಪರವಾಗಿ ಚರ್ಚಿಸಿದರು.
ಮಹಾಸಭೆಯಲ್ಲಿ ಸಂಘದಿಂದ 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಸಂಘದ ಉಪಾಧ್ಯಕ್ಷ ಕುಮಾರ್ ನಾಯಕ, ನಿರ್ದೆಶಕರಾದ ಎಸ್.ಸಿ.ಶರತ್‌ಶೇಖರ್, ಪರಮೇಶ್, ಮಹಾಂತಪ್ಪ, ದೀಪಕ್, ಬಿ.ಎಸ್.ಮಂಜುನಾಥ್, ದೇವಾಂಬಿಕ ಮಹೇಶ್, ಎಸ್.ಜಿ.ರವಿಕುಮಾರ್, ಎಸ್.ಎಸ್.ಸಾಗರ್, ರಾಮಯ್ಯ, ಶಶಿಕಲಾ ನಾಗರಾಜ್, ಜಿ.ಬಿ.ಸಂದೀಪ್ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ.ಶಿವರಾಜ್, ಸಿಬ್ಬಂದಿ ಇತರರಿದ್ದರು.