ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ತಹಸೀಲ್ದಾರ್ ಕರೆಪ್ಪ ಬೆಳ್ಳಿ ಎಸ್‌ಐಆರ್ ಪ್ರಗತಿ ಪರಿಶೀಲನೆ ನಡೆಸಿದರು. ಎಸ್.ಐ. ಮೋರೆ, ನಿಂಗನಗೌಡ, ಸಿದ್ಧಲಿಂಗಪ್ಪ ಪೊದ್ದಾರ ಮತ್ತಿತರರಿದ್ದರು. 
ರಾಜ್ಯ

ಅರ್ಹ ಮತ ಹಕ್ಕು ನೀಡಲು ಎಸ್‌ಐಆರ್ ಅತ್ಯಗತ್ಯ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿಕೆ
  • ಪ್ರಗತಿ ಪರಿಶೀಲನೆ
ಸಿಂದಗಿ : ಅರ್ಹ ಮತದಾರರ ವಿವರಗಳನ್ನು ಮನೆ-ಮನೆಗೆ ಭೇಟಿ ನೀಡಿ, ವಿಶೇಷ ಸಮಗ್ರ ಪರಿಶೀಲನೆ ಮಾಡುವ ಮೂಲಕ ಅವರನ್ನು ಮತಪಟ್ಟಿಯಲ್ಲಿ ಉಳಿಸುವುದೇ ಎಸ್‌ಐಆರ್ ಎಂದು ತಹಸೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದಲ್ಲಿ ಮಂಗಳವಾರ ಎಸ್‌ಐಆರ್ ಪ್ರಕ್ರಿಯೆ ಹಾಗೂ ಪ್ರಗತಿಯನ್ನು ಪರಿಶೀಲಿಸಿದ ಅವರು, ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಅನರ್ಹರನ್ನು ಮತಪಟ್ಟಿಯಿಂದ ಹೊರಗುಳಿಸುವ ಉದ್ದೇಶದಿಂದ ಮನೆ-ಮನೆಗೆ ಸಿಬ್ಬಂದಿಗಳನ್ನು ಕಳುಹಿಸಿ, ಅರ್ಹ ನಾಗರಿಕರನ್ನು ಗುರುತಿಸಿ, ಪರಿಶೀಲನೆ ನಡೆಸಿ ಅವರ ಹಕ್ಕನ್ನು ವಿಶೇಷವಾಗಿ ಗುರುತಿಸುವ ಮತ್ತು ನಕಲಿ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲು ನಡೆಸುತ್ತಿರುವ ಎಸ್‌ಐಆರ್ ಅಭಿಯಾನವನ್ನು ಹಮ್ಮಿ ಕೊಂಡಿದೆ ಎಂದರು.
ಬಿಎಲ್‌ಒಗಳು ಮತಕ್ಷೇತ್ರದ ಪ್ರತಿ ಮನೆಗೆ ಭೇಟಿ ನೀಡಿ, ಕುಟುಂಬದ ಮತದಾರರ ವಿವರಗಳನ್ನು ಅಗತ್ಯ ದಾಖಲೆಗಳೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯ ನಾಗರಿಕರು, ಸಿಬ್ಬಂದಿಗಳು ಕೇಳುವ ಆಧಾರ್, ಾಸ್‌ಪೋರ್ಟ್ ಇತರ ದಾಖಲೆಗಳನ್ನು ಒದಗಿಸುವ ಮೂಲಕ ತಮ್ಮ ಮತ ಹಕ್ಕನ್ನು ಸಾಬೀತು ಪಡಿಸಬೇಕು ಎಂದು ಹೇಳಿದರು.
ಗ್ರಾಮ ಆಡಳಿತ ಅಧಿಕಾರಿ ಎಸ್.ಐ. ಮೋರೆ, ಬಿಎಲ್‌ಒ ನಿಂಗನಗೌಡ ಪಾಟೀಲ, ಸಿದ್ದಲಿಂಗಪ್ಪ ಪೊದ್ದಾರ, ಬಸವರಾಜ ಅಗಸರ ಮತ್ತಿತರರಿದ್ದರು.