ಧಾರವಾಡ: ನಗರದ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾಥಿರ್ನಿ ಅನು ಅಶೋಕ ಮುತ್ತಗಿ ಜಿಮ್ನಾಸ್ಟಿಕ್ಸ್ನಲ್ಲಿ ಉತ್ತ ಸಾಧನೆ ಮಾಡಿದ್ದಾಳೆ. ಕರ್ನಾಟಕ ಒಲಿಂಪಿಕ್ ಸಂಸ್ಥೆಯು ತುಮಕೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಕ್ರೀಡಾಕೂಟದ ರಿದಮಿಕ್ ಜಿಮ್ನಾಸ್ಟಿಕ್ಸ್ನಲ್ಲಿ ಅನು 5 ಕಂಚಿನ ಪದಕ ಪಡೆದಿದ್ದಾರೆ.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ ಮುತ್ತಗಿ ಅವರ ಪುತ್ರಿ ಅನು, ರಿದಮಿಕ್ ಜಿಮ್ನಾಸ್ಟಿಕ್ಸ್ ಕ್ಲಬ್, ರಿದಮಿಕ್ ಜಿಮ್ನಾಸ್ಟಿಕ್ಸ್ ಬಾಲ್, ರಿದಮಿಕ್ ಜಿಮ್ನಾಸ್ಟಿಕ್ಸ್ ರಿಬ್ಬನ್, ರಿದಮಿಕ್ ಜಿಮ್ನಾಸ್ಟಿಕ್ಸ್ ಹೂಪ್ ಹಾಗೂ ಅಲ್ರೌಂಡ್ ವೈಯಕ್ತಿಕ ಚಾಂಪಿಯನ್ ತೃತಿಯ ಸ್ಥಾನ ಪಡೆದಿರುವುದು ಹೆಗ್ಗಳಿಕೆ.
ಅನು ಮುತ್ತಗಿ ಜಿಮ್ನಾಸ್ಟಿಕ್ಸ್ನಲ್ಲಿ ಈವರೆಗೆ 10 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾಳೆ. ವಿದ್ಯಾಥಿರ್ನಿಯ ಸಾಧನೆಯನ್ನು ಪಾಲಕರು, ಕಾಲೇಜು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.