Anti-farmer policies are the downfall of the government 
ರಾಜ್ಯ

ರೈತ ವಿರೋಧಿ ನೀತಿಗಳೇ ಸರ್ಕಾರಕ್ಕೆ ಮುಳುವು

ಚಿಕ್ಕಬಳ್ಳಾಪುರ: ಫಲವತ್ತಾದ ಕೃಷಿ ಜಮೀನಿನ ಸ್ವಾಧಿನ ಸೇರಿ ರೈತ ವಿರೋಧಿ ನೀತಿಗಳೇ ಸರ್ಕಾರಕ್ಕೆ ಮುಳುವಾಗಲಿದೆ ಎಂದು ಕರ್ನಾಟಕ ರೈತ ಸಂ, ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ತಿಳಿಸಿದರು.
ಕೈಗಾರಿಕಾಭಿವೃದ್ಧಿ ಪ್ರದೇಶಕ್ಕೆ ಶಿಡ್ಲಟ್ಟ ತಾಲೂಕಿನ ಜಂಗಮಕೋಟೆ ವ್ಯಾಪ್ತಿಯ ಕೃಷಿ ಜಮೀನು ಸ್ವಾಧಿನ ವಿರೋಧಿಸಿ ಜಿಲ್ಲಾಡಳಿತದ ಎದುರು ನಡೆಯುತ್ತಿರುವ ಅರ್ನಿದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.
ಅಧಿಕಾರಕ್ಕೆ ಬರುವ ಮೊದಲು ರೈತಪರ ನಾಟಕ, ಆಡಳಿತ ಚುಕ್ಕಾಣಿ ಹಿಡಿದಾಗ ಉದ್ದಿಮೆಗಳ ಹಿತವನ್ನು ಕಾಪಾಡುವಂತಹವರಿಗೆ ಜನರು ಸರಿಯಾಗಿ ಪಾಠ ಕಲಿಸಿರುವುದನ್ನು ನಾಯಕರು ಸ್ಮರಿಸಿಕೊಳ್ಳಬೇಕು. ಈಗಲಾದರೂ ಧೋರಣೆಗಳನ್ನು ಬದಲಾಯಿಸಿಕೊಂಡು ಬಡ, ಮಧ್ಯಮ ವರ್ಗದ ಪರ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್​ ಸರ್ಕಾರವು ಹಣಕ್ಕಾಗಿ ರೈತರ ಜೀವನದ ಚೆಲ್ಲಾಟವಾಡುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ದಿವಾಳಿಯಾಗಿಸಿದ್ದು, ಲಾಂತರ ಕೋಟಿ ಸಾಲದ ಬಜೆಟ್​ ಮಂಡನೆಯೇ ಒಂದು ನಿದರ್ಶನ ಎಂದು ವ್ಯಂಗ್ಯವಾಡಿದರು.
ಸರ್ಕಾರವು ಆಡಳಿತ ನಡೆಸುವ ಯೋಗ್ಯತೆ, ಅದರಲ್ಲೂ ಸಿದ್ದರಾಮಯ್ಯ ನೈತಿಕತೆ ಕಳೆದುಕೊಂಡಿದ್ದು ಸಿಎಂ ಗಾದಿಗೆ ಗ್ಯಾರಂಟಿ ಇಲ್ಲ ಎಂಬ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಚಿಕ್ಕನಾಯಕನಹಳ್ಳಿಯ ಚಿಪ್ಪು ಸಿಗಲಿದೆ ಎಂದರು.
"

ಭೂಸ್ವಾಧಿನಕ್ಕೆ ಗ್ರೇಡ್​ ನಿಗದಿ

ಭೂಮಿಯನ್ನು ವರ್ಗೀಕರಿಸಿ ಪ್ರಸ್ತುತ ಜನಸಂಖ್ಯೆಯು ದಿನ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೈಗಾರಿಕೆಗಳಿಗೆ ಆದ್ಯತೆ ನೀಡಿ ಏರುಪೇರಾದರೆ ಮಣ್ಣು ತಿನ್ನಲು ಸಾಧ್ಯವೇ? ಎಂದು ಕೋಡಿಹಳ್ಳಿ ಚಂದ್ರಶೇಖರ್​ ಪ್ರಶ್ನಿಸಿದ್ದಾರೆ. ಮುಂಬರುವ ತಲೆಮಾರಿಗೆ ಕೃಷಿ ಭೂಮಿಯನ್ನು ಜೋಪಾನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಭೂಮಿಯನ್ನು ವರ್ಗಿಕರಿಸುವುದು ಸೂಕ್ತ. ಕೃಷಿಗೆ ಯೋಗ್ಯವಾದ ಭೂಮಿಯನ್ನು ಎ ಗ್ರೇಡ್​ ಮೀಸಲಿಟ್ಟು ಅದಕ್ಕೆ ಯಾರೂ ಕೈಹಾಕದಂತೆ ಕಾಯ್ದೆ ರೂಪಿಸಬೇಕು. ಬಿ ಗ್ರೇಡ್​ ಜಾಗವನ್ನು ಕೃಷಿ ಹಾಗೂ ಅರಣ್ಯಕ್ಕೆ ಮೀಸಲಿಡಬೇಕಿದೆ. ಸಿ ಆ್ಯಂಡ್​ ಡಿ ಗ್ರೇಡ್​ ಪ್ರದೇಶಗಳನ್ನು ಮಾತ್ರ ಕೈಗಾರಿಕಾ ಉದ್ದೇಶಗಳಿಗೆ ಬಳಕೆ ಉಪಯೋಗಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಮುಂದಿನ ಚುನಾವಣೆಯಲ್ಲಿ 50 ಸೀಟ್​ ಗೆಲ್ಲಲು ಸಾಧ್ಯವಿಲ್ಲ. ರೈತರ ಪರ ನಿಲ್ಲದ ಜಿಲ್ಲೆಯ ಕಾಂಗ್ರೆಸ್​ ಎಂಎಲ್​ಎಗಳು, ಸಚಿವರು ಖಾಲಿ ಮಾಡಲಿದ್ದಾರೆ. ಕಷ್ಟಕ್ಕೆ ನೆರವಾಗದೆ ಬದುಕಿಗೆ ಆತಂಕ ತಂದಿರುವ ಕಾನೂನು ಧಿಮಾಕನ್ನು ಸಹಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ರೈತ ಮುಖಂಡರ ಸಭೆ ನಡೆಸಿದ್ದು, ಶಿಡ್ಲಟ್ಟ ಭಾಗದಲ್ಲಿ ಭೂಮಿ ಕಸಿದುಕೊಳ್ಳಲು ಒಂದು ಹೆಜ್ಜೆ ಬಲತ್ಕಾರ ಇಟ್ಟರೆ ರಾಜ್ಯದ ಮೂಲೆ ಮೂಲೆಗಳಿಂದ ರೈತರು ಬರಲಿದ್ದಾರೆ. ರೈತರು ಭಯಪಡುವ ಅಗತ್ಯವಿಲ್ಲ. ಅವರ ತಾಕತ್ತು ನೋಡಲಾಗುತ್ತದೆ ಎಂದರು.
"

ಮುಂದುವರಿದ ಹೋರಾಟ

16 ದಿನಗಳಿಂದಲೂ ಅರ್ನಿದಿಷ್ಟಾವಧಿ ಹೋರಾಟ ನಡೆಯುತ್ತಿದ್ದು ರೈತರು ಅಹೋರಾತ್ರಿ ಧರಣಿಯಲ್ಲೂ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಫಲವತ್ತಾದ ಕೃಷಿ ಜಮೀನಿನ ಸ್ವಾಧಿನ ಕೈ ಬಿಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಭೂ ಸುಧಾರಣಾ ಕಾಯ್ದೆ, ಭೂಸ್ವಾಧಿನ ಕಾಯ್ದೆ ಸೇರಿ ರೈತ ವಿರೋಧಿ ಕಾಯ್ದೆಗಳು ರದ್ದಾಗಬೇಕು. ರಾಜ್ಯದಲ್ಲಿನ ರೈತರ ಏಳಿಗೆಗಾಗಿ 10 ಸಾವಿರ ಕೋಟಿ ನಿಧಿ ಮೀಸಲಿರಿಸಬೇಕು. ಫಲವತ್ತಾದ ಭೂಮಿ ವಶಕ್ಕೆ ಪಡೆಯುವುದನ್ನು ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಯಾವತ್ತೂ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಾರದಿರಲು ಅಹಿಂಸಾ ಚಳವಳಿ ನಡೆಸಲಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ರಾಜಣ್ಣ, ರೈತ ಸಂದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಾನವ ಹಕ್ಕುಗಳ ಕಮಿಟಿ ಅಧ್ಯಕ್ಷ ಸಿ.ಎಂ.ಬೈರೇಗೌಡ, ರೈತ ಸಂದ ಜಿಲ್ಲಾಧ್ಯಕ್ಷ ರಾಮನಾಥ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ, ಜಿಲ್ಲಾ ಕಾರ್ಯದರ್ಶಿ ಗೋಪಾಲ್​, ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ ಇದ್ದರು.