ಬೆಂಗಳೂರು ವಿಶ್ವವಿದ್ಯಾಲಯ 
ರಾಜ್ಯ

ಎಎನ್‌ಆರ್‌ಎಫ್ ಸಂಶೋಧನಾ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ವಿಶ್ವವಿದ್ಯಾಲಯದ ಎಎನ್‌ಆರ್‌ಎಫ್ ಪೇರ್ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು ವಿಶ್ವವಿದ್ಯಾಲಯದ ಎಎನ್‌ಆರ್‌ಎಫ್ ಪೇರ್ (ANRF PAIR) ಯೋಜನೆಯಡಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು (5 ವರ್ಷಗಳ ಅವಧಿಗೆ ತಾತ್ಕಾಲಿಕವಾಗಿ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ರಸಾಯನಶಾಸ, ಭೌತಶಾಸ ಮತ್ತು ಜೈವಿಕ ತಂತ್ರಜ್ಞಾನ, ಸೂಕ್ಷ್ಮ ಜೀವವಿಜ್ಞಾನ, ಆಹಾರ ತಂತ್ರಜ್ಞಾನದಲ್ಲಿ ಪಿಎಚ್.ಡಿ. ಮಾಡುತ್ತಿರುವ/ ಪೂರ್ಣಗೊಂಡಿರುವ, ನೆಟ್/ಸ್ಲೆಟ್ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು ಎಂಟು ಹುದ್ದೆಗಳಿವೆ. ಕನಿಷ್ಠ 27 ಸಾವಿರ ರೂ.ಗಳಿಂದ ಗರಿಷ್ಠ 58 ಸಾವಿರ ರೂ.ಗಳವರೆಗೆ ವೇತನ ನೀಡಲಾಗುತ್ತದೆ.
ಯೋಜನೆಯ ವಿವರಗಳು, ಅರ್ಹತಾ ಮಾನದಂಡಗಳು, ಸಂಬಂಧಿಸಿದ ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್‌ಗಳ ಮಾಹಿತಿ ಹಾಗೂ ಇತರೆ ವಿವರಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪಡೆಯಬಹುದು (https://bangaloreuniversity.karnataka.gov.in/uploads/media‰to‰upload1765535810.pdf)
ಹೆಚ್ಚಿನ ಮಾಹಿತಿಗಾಗಿ ಡಾ. ಬಸವರಾಜ ಅಂಗಡಿ, brangadibub.ernet.in
ಸಂಪರ್ಕಿಸಬಹುದು.