ನಗರದಲ್ಲಿ ಮತ್ತೊಂದು ಇಂದಿರಾ ಕ್ಯಾಂಟಿನ್​ Indira Canteen 
ರಾಜ್ಯ

ನಗರದಲ್ಲಿ ಮತ್ತೊಂದು ಇಂದಿರಾ ಕ್ಯಾಂಟಿನ್​ Indira Canteen

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ಪೌರಾಯುಕ್ತ ಜಿ.ಎನ್​.ಚಲಪತಿ ಭರವಸೆ
ಚಿಂತಾಮಣಿ: ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್​ ಸೂಚನೆಯಂತೆ ನಗರ ಭಾಗದಲ್ಲಿ ಮತ್ತೊಂದು ಇಂದಿರಾ ಕ್ಯಾಂಟೀನ್​ ಪ್ರಾರಂಭ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಜಿ.ಎನ್​.ಚಲಪತಿ ತಿಳಿಸಿದರು. Indira Canteen
ನಗರದ ವಿವಿಧ ಭಾಗಗಳಲ್ಲಿನ ಒಳಚರಂಡಿ ಕಾಮಗಾರಿ, ಸ್ವಚ್ಛತಾ ಕಾರ್ಯ, ಬೀದಿ ದೀಪ ಮತ್ತು ಇತರ ಸಮಸ್ಯೆಗಳ ವೀಕ್ಷಣೆಗೆ ತೆರಳಿದ್ದ ವೇಳೆ ನಗರದ ಚೇಳೂರು ರಸ್ತೆಯ ಟೊಮ್ಯಾಟೋ ಮಾರುಕಟ್ಟೆಯಲ್ಲಿನ ಇಂದಿರಾ ಕ್ಯಾಂಟಿನ್​ಗೆ ದಿಢೀರ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಿ ಮಾತನಾಡಿದರು.
ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟಿನ್​ನಲ್ಲಿ ತಿಂಡಿ ಮಾರಾಟ ಮಾಡಲಾಗುತ್ತದೆ. ತಿಂಡಿಯ ಗುಣಮಟ್ಟ ಪರಿಶೀಲಿಸಲು ನಾನು ಇಲ್ಲಿ ತಯಾರಿಸಿದ್ದ ಇಡ್ಲಿ ಮತ್ತು ಚಿತ್ರಾನ್ನ ಸೇವಿಸಿದಾಗ. ಆಹಾರದ ಗುಣಮಟ್ಟ ಚೆನ್ನಾಗಿದೆ ಎಂದರು.
ನಗರ ಭಾಗದ ಬಡ ಜನತೆ ತಿಂಡಿ ಮತ್ತು ಊಟಕ್ಕಾಗಿ ಇಷ್ಟು ದೂರ ಬರುವುದಕ್ಕೆ ಕಷ್ಟ ಆಗುವುದರಿಂದ ಮತ್ತೊಂದು ಇಂದಿರಾ ಕ್ಯಾಂಟಿನ್​ ತೆರೆಯಲು ಸಚಿವ ಡಾ.ಎಂ.ಸುಧಾಕರ್​ ಸೂಚಿಸಿದ್ದು, ನಗರ ಭಾಗದ ಸೂಕ್ತ ಜಾಗದಲ್ಲಿ ಕ್ಯಾಂಟಿನ್​ ಪ್ರಾರಂಭ ಮಾಡಲಾಗುವುದು ಎಂದರು.
ನಗರಸಭೆ ಇಂಜಿನಿಯರ್​ ಪ್ರಸಾದ್​, ಆರೋಗ್ಯ ಇಲಾಖೆ ಸಿ.ಕೆ.ಬಾಬು ಇತರರು ಇದ್ದರು.