M-B-PATIL 
ರಾಜ್ಯ

ಬಿಡದಿಯಲ್ಲಿ ಅನಿತಾ ಕುಮಾರಸ್ವಾಮಿಯವರದ್ದೇ 100 ಎಕರೆ ಜಮೀನಿದೆ, ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯೆ

ಪ್ರಮುಖ ಮುಖ್ಯಾಂಶಗಳು

  • ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜಕೀಯ
  • ಯೋಜನೆ ಆರಂಭಿಸಿದ್ದೇ ಕುಮಾರಸ್ವಾಮಿ
  • ನೋಟಿಫಿಕೇಶನ್ ಹೊರಡಿಸಿದ್ದೇ ಜೆಡಿಎಸ್ ಸರ್ಕಾರ
ವಿಜಯಪುರ: ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಡೆಗೆ ಸಂಬಂಧಿಸಿದಂತೆ ಕಟುಟೀಕೆ ಮಾಡಿರುವ ಸಚಿವ ಎಂ.ಬಿ. ಪಾಟೀಲರು, ಬಿಡದಿಯಲ್ಲಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರದ್ದೇ 100 ಎಕರೆ ಜಮೀನಿದೆ ಎಂದು ಆರೋಪಿಸಿದ್ದಾರೆ.
ಬಿಡದಿ ಟೌನ್‌ಶಿಪ್ ಯೋಜನೆ ಆರಂಭವಾಗಿದ್ದೇ ಎಚ್.ಡಿ. ಕುಮಾರಸ್ವಾಮಿ ಅವರಿಂದ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಆ ಯೋಜನೆ ರೂಪಿಸಲಾಗಿದೆ. ನೋಟಿಫಿಕೇಶನ್ ಕೂಡ ಅವರೇ ಮಾಡಿದ್ದು. ಇದೀಗ ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದಾರೆಂದು ಮಂಗಳವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಡಿ.ಕೆ. ಶಿವಕುಮಾರ ಅವರು ಯೋಜನೆ ಕಾರ್ಯಗತಗೊಳಿಸುತ್ತಿದ್ದಾರೆಂಬ ಕಾರಣಕ್ಕೆ ಕುಮಾರಸ್ವಾಮಿ ವಿರೋಧಿಸುತ್ತಿದ್ದಾರೆ. ತಮ್ಮ ಸಮಾಜದಲ್ಲಿ ಯಾರೂ ಬೆಳೆಯಬಾರದು ಎಂಬ ಕಾರಣಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಅವರೇ ಸಿಎಂ ಆಗಿದ್ದಾಗ ಮಾಡಿದ ನೋಟಿಫಿಕೇಶನ್ ರದ್ದುಗೊಳಿಸಲಿಲ್ಲವೇಕೆ? ಆಗ ಇವರ ರೈತರ ಕಾಳಜಿ ಎಲ್ಲಿ ಹೋಗಿತ್ತು? ಈಗ ಬಂದು ಉಪದೇಶ ಹೇಳುವುದೇಕೆ? ಇದೆಲ್ಲ ನಾಟಕೀಯತೆ ಜನರಿಗೆ ಅರ್ಥವಾಗಲಿದೆ ಎಂದರು.
ಕುಮಾರಸ್ವಾಮಿ ಅವರು ನೈಜವಾಗಿ ಹೋರಾಟ ಮಾಡಲಿ. ರೈತರಿಗೆ ಅವರ ಹಕ್ಕಿದೆ. ಹೀಗಾಗಿ ರೈತರಿಗೆ ಇನ್ನಷ್ಟು ಹೆಚ್ಚಿಗೆ ಕೇಳಲಿ. ಅದನು ಬಿಟ್ಟು ಯೋಜನೆ ಬೇಡವೇ ಬೇಡ ಎಂಬುದು ಸರಿಯಲ್ಲ ಎಂದರು.