ಬೆಂಗಳೂರು: ಪ್ರಾಣಿಗಳಿಗೆ ಕೂಡ ಘನತೆಯಿಂದ ಬದುಕುವ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಒಂಬತ್ತು ನಾಯಿಗಳನ್ನು ಅವುಗಳ ಮೇಲೆ ದೌರ್ಜನ್ಯ ನಡೆಸಿದ ಮಾಲೀಕನಿಗೆ ನೀಡಲು ಆದೇಶಿಸಿದ್ದ ಮ್ಯಾಜಿಸ್ಟ್ರೆಟ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಆರ್ ಗೋಲ್ಡನ್ ರಿಟ್ರೀವರ್ಸ್ ಮತ್ತು ಶಿಹ್ ತ್ಸು ತಳಿಯ ನಾಯಿಗಳನ್ನು ಮಾಲೀಕನಿಗೆ ಮರಳಿಸಲು ಆದೇಶಿಸಿದ್ದ ಮ್ಯಾಜಿಸ್ಟ್ರೆಟ್ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಹಿಂಸೆಯಿಂದ ರಕ್ಷಣೆ ಪಡೆಯುವ ಹಕ್ಕು ಪ್ರಾಣಿಗಳಿಗೂ ಇದೆ. ಮಾತು ಬರದೆ ಇದ್ದರೂ, ನೋವಿನ ಸಂವೇದನೆಗಳು ಅವುಗಳಿಗೂ ಆಗುತ್ತದೆ. ಪ್ರಾಣಿಗಳು ಕೇವಲ ಮಾನವನ ಉಪಯೊಗಕ್ಕೆ ಇರುವ ವಸ್ತುಗಳು ಎಂಬ ದೃಷ್ಟಿಕೋನವನ್ನು ಬಹಳ ಹಿಂದೆಯೇ ಕಾನೂನಿನಲ್ಲಿ ತ್ಯಜಿಸಲಾಗಿದೆ. ಪ್ರಾಣಿಗಳು ಕ್ರೌರ್ಯದಿಂದ ರಕ್ಷಣೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋದಲ್ಲಿ ನಾಯಿಗಳಿಗೆ ಕ್ರೂರವಾಗಿ ಹೊಡೆಯುವ ದೃಶ್ಯಗಳಿವೆ. ಅದನ್ನು ನೋಡಿಯೂ ಅವುಗಳನ್ನು ಮಾಲೀಕನಿಗೆ ಹಿಂತಿರುಗಿಸಲು ಹೊರಡಿಸಿರುವ ಆದೇಶ ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪ್ರಾಣಿಗಳ ಮೇಲಿನ ಹಿಂಸೆ ಮಾನವನ ಆತ್ಮಸಾಗೆ ಕಳಂಕವಾಗಿದೆ. ಪ್ರಾಣಿಗಳ ರಕ್ಷಣೆ ಕೇವಲ ಕರುಣೆಗೆ ಸಂಬಂಧಿಸಿಲ್ಲ. ಅದು ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯುವುದು ಆಗಿದೆ. ಯಾರಿಗೆ ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವಿಲ್ಲವೋ ಅವರನ್ನು ನ್ಯಾಯಾಲಯ ರಸುತ್ತದೆ ಎಂದು ಹೇಳಿದೆ.
ಪ್ರಕರಣದ ಹಿನ್ನಲೆ:
ನಾಗಸಂದ್ರದ ಕೆ.ಇ. ರಮೇಶ್ ಎಂಬಾತ ತಾನು ಸಾಕಿದ್ದ ನಾಯಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆರೋಪಿಸಿದ್ದ ಸ್ಥಳಿಯರು ವಿಡಿಯೋಸಮೇತ ಪೇಟಾ ಸಂಸ್ಥೆಗೆ ದೂರು ನೀಡಿದ್ದರು. ಆತನಿಂದ 9 ನಾಯಿಗಳನ್ನು ರಸಿದ್ದ ಪೇಟಾ, ಅವುಗಳನ್ನು ತನ್ನ ಬಳಿ ಇರಿಸಿಕೊಂಡಿತ್ತು. ಅಲ್ಲದೆ, ಆತನ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ನಾಯಿಗಳಿಗೆ ವೈಯರ್, ಪೈಪ್ಗಳಿಂದ ಹಲ್ಲೆ ಮಾಡಿದ, ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪಗಳು ಆತನ ಮೇಲಿವೆ.