ಚಿಂಚೋಳಿ ತಾಲೂಕಿನ ಕುಂಚಾವರಂ ಭಾಗದ ವನ್ಯಜೀವಿ ಅರಣ್ಯದಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಮೊಲ ಹಾಗಿ ಪಕ್ಷಿಗಳನ್ನು ಬೇಟೆಯಾಡಿದ ಆರೋಪಿಗಳನ್ನು ಬಂಧಿಸಿರುವುದು. 
ರಾಜ್ಯ

ಕುಂಚಾವರಂ ವನ್ಯಜೀವಿ ಅರಣ್ಯದಲ್ಲಿ ಪ್ರಾಣಿ ಬೇಟೆ ಆರೋಪಿಗಳ ಬಂಧನ

ಚಿಂಚೋಳಿ: ತಾಲೂಕಿನ ಕುಂಚಾವರಂ ಭಾಗದ ಕಾಯ್ದಿಟ್ಟ ಅರಣ್ಯ ಪ್ರದೇಶದ ಸಂಗಾಪೂರ ಗ್ರಾಮದ ಸರ್ವೆ ನಂ. 3 ರಲ್ಲಿ ಅರಣ್ಯ ಪ್ರದೇಶ ಪ್ರವೇಶಿಸಿದಲ್ಲದೇ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಸುಮಾರು 2 ಕಿ.ಮೀ ವರೆಗೆ ಬೆಂಡಿಂಗ್ ವಾಯಿರ್ ಹಾಕಿ ಅದರಲ್ಲಿ ವಿದ್ಯುತ್ ಹಾಯಿಸಿ ಒಂದು ಮೊಲ ಹಾಗೂ ಎರೆಡು ಟಿಟ್ಟಿಬ ಪಕ್ಷಿಗಳನ್ನು ಬೇಟೆಯಾಡಿದ ಪ್ರಕರಣವು ಗುರುವಾರ ಮಧ್ಯರಾತ್ರಿ 12.30 ಸುಮಾರಿಗೆ ಘಟನೆ ಜರುಗಿದೆ.
ಘಟನೆಯ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಅಧಿಕಾರಿಗಳು ಹಾಗೂ ಜೆಸ್ಕಾಂ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳಾದ ಮಾಣಿಕ ತಂದೆ ಹರಿಶ್ಚಂದ್ರ ಪವಾರ ( 40) ಸಾ. ಸಂಗಾಪೂರ, ಸುನೀಲ ತಂದೆ ಧರ್ಮು ರಾಠೋಡ ( 30 ) ಸಾ. ಸಂಗಾಪೂರ ಇವರನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಮೊಲ ಹಾಗೂ ಪಕ್ಷಿಗಳು, ಬೇಟೆಗೆ ಬಳಸಿದ ಬೆಂಡಿಂಗ್ ವಾಯಿರ್ ಇತ್ಯಾದಿ ಸಾಮಗ್ರಿಗಳು ವಶಕ್ಕೆ ಪಡೆದು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಡಿಸಿಎಫ್ ಸುಮೀತಕುಮಾರ ಪಾಟೀಲ್, ಎಸಿಎಫ್ ಸುನೀಲ ಚವ್ಹಾಣ, ಸೇಡಂ ಉಪವಲಯ ಕಾರ್ಯಪಾಲಕ ಅಭಿಯಂತರ ಪರಮೇಶ್ವರ ಬಿರಾದಾರ, ತಾಲೂಕು ವನ್ಯಜೀವಿ ಸಂರಕ್ಷಣಾ ಅಧಿಕಾರಿ ಸಂಜುಕುಮಾರ ಚವ್ಹಾಣ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಸಿದ್ದರೂಢ ಹೊಕ್ಕುಂಡಿ, ಮಾಳಪ್ಪ ಪೂಜಾರಿ, ಸಂಗನ ಬಸವಡಗಿ, ದೇವರಾಜ ಕಟ್ಟಿ, ಚನ್ನಬಸವ, ಮನ್ನು ರಾಠೋಡ, ಲಿಂಬಾಜಿ ರಾಠೋಡ, ಪ್ರಭು, ತುಕರಾಮ, ಜೇಸ್ಕಾ ಸಿಬ್ಬಂದಿ ಆನಂದ ಇತರರು