ಕಲಬುರಗಿ ರಾಮಮಂದಿರದ ಹಿಂಭಾಗದಲ್ಲಿನ ಬಿಸಿಲು ಆರ್ಟ್​ ಗ್ಯಾಲರಿಯಲ್ಲಿ ಯಾದಗಿರಿ ಯುವ ಚಿತ್ರಕಲಾವಿದ ತಿಪ್ಪಣ್ಣ ಜಾಧವ್​ ಬುಧವಾರ ಆಯೋಜಿಸಿದ್ದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶವನ್ನು ಡಾ.ಪರಶುರಾಮ ವೀಕ್ಷಿಸಿದರು. ಶಾಂತಮಲ್ಲ ಶಿವಭೋ, ಶೈಲಜಾ ಬಿರಾದಾರ್​, ತಿಪ್ಪಣ್ಣ ಜಾಧವ್​ ಇತರರಿದ್ದರು. 
ರಾಜ್ಯ

ಕಲಾ ಗ್ಯಾಲರಿ ಸಂಸ್ಕೃತಿ ಅರಿವು ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಅಧ್ಯಾಪಕ ಡಾ.ಪರಶುರಾಮ ಪಿ. ಅನಿಸಿಕೆ
  • ಕಲಬುರಗಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಕಲಬುರಗಿ: ಕಲಾವಿದರು ಸೃಜನಶೀಲ ಚಿತ್ರ ಕಲಾಕೃತಿ ರಚಿಸುವುದರ ಜತೆಗೆ ಕಲಾ ಗ್ಯಾಲರಿ ಸಂಸ್ಕೃತಿ ಅರಿತಿರಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಪರಶುರಾಮ ಪಿ. ಅಭಿಪ್ರಾಯಪಟ್ಟರು.
ಬಿಸಿಲು ಆರ್ಟ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ಯಾದಗಿರಿ ಯುವ ಚಿತ್ರಕಲಾವಿದ ತಿಪ್ಪಣ್ಣ ಜಾಧವ್​ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಲಾ ಮಾರುಕಟ್ಟೆಯ ಪರಿಚಯ, ವೀಕ್ಷಕರ ಅಭಿರುಚಿ ಮತ್ತು ಆಸಕ್ತಿ, ಕಲಾ ವಿಮರ್ಶಕನ ಗುಣ, ಕಲಾ ಸಂಗ್ರಾಹಕ, ಕ್ಯೂರೇಟರ್​, ಗ್ರಾಹಕರ ಮನೋಭಾವ ಸೇರಿ ರಾಜ್ಯ, ರಾಷ್ಟ್ರ ಮತ್ತು ವಿದೇಶಗಳಲ್ಲಿ ನಡೆಯುವ ಕಲಾ ಪ್ರದರ್ಶನಗಳ ಅರಿವು ಕಲಾವಿದನಿಗೆ ಇರಬೇಕು. ಪ್ರತಿಯೊಬ್ಬ ಚಿತ್ರಕಲಾವಿದರು ಕಲಾಕೃತಿಗಳ ಪ್ರದರ್ಶನ ಏರ್ಪಡಿಸುವ ಸಂದರ್ಭದಲ್ಲಿ ಕಲಾ ಗ್ಯಾಲರಿ ಅಳತೆ, ಆಕಾರಗಳನ್ನು ಅವಲಂಬಿಸಿ ಸರಿ ಹೊಂದುವಷ್ಟು ಕಲಾಕೃತಿಗಳನ್ನು ಮಾತ್ರ ಯೋಗ್ಯ ವಾತಾವರಣದಲ್ಲಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಚಿತ್ರಕಲಾವಿದ ತಿಪ್ಪಣ್ಣ ಜಾಧವ್​ ಮಾತನಾಡಿದರು.
ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಾಂತಮಲ್ಲ ಶಿವಬೋ ಪ್ರದರ್ಶನಕ್ಕೆ ಚಾಲನೆ ನೀಡಿದರು. ವ್ಹಿ.ಬಿ.ಬಿರಾದಾರ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಶೈಲಜಾ ಬಿರಾದಾರ್​ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದರಾದ ಶಿವಾನಂದ ಬಂಟನೂರ, ಶಿವಾನಂದ ಕೊಪ್ಪದ, ದೌಲತರಾಯ ದೇಸಾಯಿ, ಕುಪೇಂದ್ರ, ಗಿರೀಶ ಕುಲಕರ್ಣಿ, ದಾನಯ್ಯ ಚೌಕಿಮಠ, ಮಲ್ಲಿಕಾರ್ಜುನ ಕೊರಳ್ಳಿ, ಶಶಿಕಾಂತ ಪಾಟೀಲ್​, ವಿಜಯ ಅವರಾದ, ಕಾವ್ಯಾ ಗಡ್ಡಿ, ಸಿದ್ದರಾಮಯ್ಯ, ಅಭಿಜಿತ ಎಸ್​.ಕೆ. ಇತರರಿದ್ದರು. ಕಲಾವಿದ ಸೂರ್ಯಕಾಂತ ನಂದೂರ ನಿರೂಪಣೆ ಮಾಡಿ ವಂದಿಸಿದರು.
"

ಚಿತ್ರಕಲೆ ಕೇವಲ ಬಣ್ಣಗಳ ಸಮ್ಮಿಶ್ರವಲ್ಲ. ಯಾವುದೇ ಭಾಷೆಯ ಹಂಗಿಲ್ಲದೆ, ನೇರವಾಗಿ ನೋಡುಗನ ಹೃದಯ ತಲುಪುತ್ತದೆ. ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಭಾವನೆಗಳ ಜೀವಂತ ದಾಖಲೆ.

— > ಶೈಲಜಾ ಬಿರಾದಾರ್​, ಕಾರ್ಯದರ್ಶಿ, ವಿ.ಬಿ.ಬಿರಾದಾರ ಕಲಾ ಪ್ರತಿಷ್ಠಾನ