ಆನೇಕಲ್ :
ಬನ್ನೇರುಟ್ಟ ಜೈವಿಕ ಉದ್ಯಾನವನದಲ್ಲಿ 17 ವರ್ಷದ ನೀರಾನೆ ದಶ್ಯ ಇತ್ತೀಚೆಗೆ ಮರಿಗೆ ಜನ್ಮನಿಡಿದ್ದು, ಆರೋಗ್ಯವಾಗಿದೆ.
ಪ್ರಸವದ ನಂತರ ತಾಯಿ ಮತ್ತು ಮರಿಯ ಆರೋಗ್ಯದ ಮೇಲೆ ಉದ್ಯಾನವನದ ಪಶುವೈದ್ಯರು ಹಾಗೂ ಆರೈಕೆ ಸಿಬ್ಬಂದಿ ನಿರಂತರ ನಿಗಾ ವಹಿಸಿದ್ದರು. ಆರಂಭಿಕ ದಿನಗಳಲ್ಲೇ ತಾಯಿ&ಮರಿಗೆ ಯಾವುದೇ ಅಡಚಣೆ ಉಂಟಾಗದಂತೆ ಶಾಂತಿಯುತ ವಾತಾವರಣ ಕಲ್ಪಿಸಲಾಗಿತ್ತು. ತಾಯಿಗೆ ಒತ್ತಡವಾಗದಂತೆ ವಿಶೇಷ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ಮರಿಯ ಸಹಜ ಬೆಳವಣಿಗೆಗೆ ಅನುಕೂಲಕರ ಪರಿಸರ ಸೃಷ್ಟಿಸಲಾಗಿತ್ತು ಎಂದು ಉದ್ಯಾನವನ ಆಡಳಿತ ತಿಳಿಸಿದೆ.
ಪ್ರಾಥಮಿಕ ಆರೋಗ್ಯ ತಪಾಸಣೆ ಮತ್ತು ವೀಣೆಗಳ ಪ್ರಕಾರ ಮರಿಯು ಸಂಪೂರ್ಣ ಆರೋಗ್ಯದಿಂದಿದ್ದು, ಸಹಜ ಚಟುವಟಿಕೆಗಳನ್ನು ಪ್ರದರ್ಶಿಸುತ್ತಿದೆ. ತಾಯಿ ದಶ್ಯ ಸಹ ತನ್ನ ಮರಿಯ ಬಗ್ಗೆ ಉತ್ತಮ ತಾಯ್ತನದ ಆರೈಕೆ ಮತ್ತು ರಣಾತ್ಮಕ ವರ್ತನೆಯನ್ನು ತೋರಿಸುತ್ತಿದ್ದು, ಸಿಬ್ಬಂದಿಯ ನಿರಂತರ ಮೇಲ್ವಿಚಾರಣೆಯಲ್ಲಿ ಎರಡೂ ಆರೋಗ್ಯವಾಗಿವೆ.
ಹೊಸ ಮರಿಯ ಸೇರ್ಪಡೆಯೊಂದಿಗೆ ಬನ್ನೇರುಟ್ಟ ಜೈವಿಕ ಉದ್ಯಾನವನದಲ್ಲಿರುವ ನೀರಾನೆಗಳ ಒಟ್ಟು ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇದು ಉದ್ಯಾನವನದ ಸಂರಣಾ ಮತ್ತು ಸಂತಾನೋತ್ಪತ್ತಿ ಕಾರ್ಯಕ್ರಮಕ್ಕೆ ಮತ್ತೊಂದು ಮಹತ್ವದ ಯಶಸ್ಸಾಗಿದೆ. ಅಪರೂಪದ ಸಂತಸದ ಣಕ್ಕೆ ಸಾಯಾಗಲು ಹಾಗೂ ಸಂರಣಾ ಸಾಧನೆಯನ್ನು ಕಣ್ತುಂಬಿಕೊಳ್ಳಲು ಬನ್ನೇರುಟ್ಟ ಜೈವಿಕ ಉದ್ಯಾನವನವು ಸಾರ್ವಜನಿಕರು ಮತ್ತು ಪ್ರವಾಸಿಗರನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದು, ಮರಿ ಇನ್ನು ಮುಂದೆ ಪ್ರವಾಸಿಗರ ವೀಣೆಗೆ ಸಿಗಲಿದೆ ಎಂದು ಬನ್ನೇರುಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.