ಜೇವರ್ಗಿಯಲ್ಲಿ ಬಂಜಾರ ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸತ್ಕರಿಸಲಾಯಿತು. ಬಹದ್ದೂರ್​ ರಾಠೋಡ್​, ತಿಪ್ಪಣ್ಣ ರಾಠೋಡ್​, ಲಕ್ಷ$್ಮಣ ಪವಾರ್​, ಕೃಷ್ಣ ರಾಠೋಡ್​ ಇತರರಿದ್ದರು.  
ರಾಜ್ಯ

ಸಮಾಜದ ಏಳಿಗೆಗೆ ಸಂಘಟಿತ ಹೋರಾಟ ಅಗತ್ಯ

ಜೇವರ್ಗಿ: ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಬೇಕಾದರೆ ಸಂಘಟಿತ ಹೋರಾಟ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಮಾಜದ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಬಂಜಾರ ಸಮಾಜದ ನೂತನ ತಾಲೂಕು ಅಧ್ಯಕ್ಷ ಬಹದ್ದೂರ್​ ರಾಠೋಡ್​ ಹೇಳಿದರು. ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಂಜಾರ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತನಾಡಿ, ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು. ತಿಪ್ಪಣ್ಣ ರಾಠೋಡ್​ (ಗೌರವ ಅಧ್ಯಕ್ಷ), ಲಕ್ಷ$್ಮಣ ಪವಾರ್​ (ಪ್ರಧಾನ ಕಾರ್ಯದರ್ಶಿ), ಕೃಷ್ಣ ರಾಠೋಡ್​ (ಯುವ ಘಟಕದ ಅಧ್ಯಕ್ಷ) ಅವರನ್ನು ಆಯ್ಕೆ ಮಾಡಲಾಯಿತು. ಪ್ರಮುಖರಾದ ಪ್ರಭು ಜಾಧವ್​, ಮನ್ನು ನಾಯಕ, ಗೋಪಾಲ ರಾಠೋಡ್​, ಧಮುರ್ ಚಿನ್ನ ರಾಠೋಡ್​, ಕಿಶನ್​ ಚವ್ಹಾಣ್​, ತುಳಜಾರಾಮ ರಾಠೋಡ್​, ಮಹಾಂತೇಶ ಪವಾರ್​, ಸುರೇಶ ರಾಠೋಡ್​, ಸಂಜಯ ಪವಾರ್​, ಪಂಡಿತ ಪವಾರ್​, ಅಂಜನಾ ರಾಠೋಡ್​, ಪುಲಸಿಂಗ್​ ಬದನಿಹಾಳ, ಉಮಾಜಿ ರಾಠೋಡ್​, ರಮೇಶ ರಾಠೋಡ್​, ತುಕಾರಾಂ ಜಾಧವ್​, ಧಮುರ್ ಪವಾರ್​, ಅಪ್ಪು ಪವಾರ್​, ಗೋವಿಂದ ಚವ್ಹಾಣ್​ ಇತರರಿದ್ದರು.