ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಬಂಜಾರ ಸಭೆಯಲ್ಲಿ ತಾಲೂಕು ವರದಣೆ ಪಿಡುಗು ನಿರ್ಮೂಲನೆ ಸಮಿತಿ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಮೇರಾಜ್ ರಾಠೋಡ್, ಮೋತಿರಾಮ ನಾಯಕ, ರಾಮಶೆಟ್ಟಿ ಪವಾರ್, ಬಾಬುರಾವ, ಹೀರಾಸಿಂಗ್ ರಾಠೋಡ್ ಇತರರಿದ್ದರು.
- ರಾಮಶೆಟ್ಟಿ ಪವಾರ್ ಅಭಿಮತ
- ಚಿಂಚೋಳಿಯಲ್ಲಿ ಬಂಜಾರ ಸಮಾಜದ ಜಾಗೃತಿ ಸಭೆ
ಚಿಂಚೋಳಿ: ಬಂಜಾರ ಸಮಾಜದಲ್ಲಿ ವರದಣೆ ಪಿಡುಗು ನಿಮೂರ್ಲನೆಗಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಈ ಕೆಟ್ಟ ಪದ್ಧತಿ ವಿರುದ್ಧ ಸಂಘಟಿತ ಹೋರಾಟ ಅವಶ್ಯಕವಾಗಿದೆ ಎಂದು ತಾಲೂಕು ಬಂಜಾರ ಸಮಾಜ ಅಧ್ಯಕ್ಷ ರಾಮಶೆಟ್ಟಿ ಪವಾರ್ ಹೇಳಿದರು.
ಪಟ್ಟಣದ ಬಂಜಾರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವರದಣೆ ಪಿಡುಗು ನಿರ್ಮುಲನೆ, ಬಂಜಾರ ಸಂಸ್ಕೃತಿ ಉಳಿಸುವ ಜಾಗೃತಿ ಸಭೆಯಲ್ಲಿ ಮಾತನಾಡಿ, ಗಡಿ ತಾಲೂಕಿನಲ್ಲಿ ಬಂಜಾರ ಸಮಾಜ ಬಹುಸಂಖ್ಯೆಯಲ್ಲಿದೆ. ಕಡು ಬಡತನದಲ್ಲಿ ಜೀವಿಸುತ್ತಿರುವ ಬಡವರು ಮಕ್ಕಳ ಮದುವೆ ಮಾಡಲು ಆಸ್ತಿ ಮಾರಾಟ, ಅಡವಿಡುವ ಹಾಗೂ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಪ್ರಸ್ತುತ ವರದಣೆ ಪಿಡುಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶ್ರೀಮಂತ, ಬಡವ ಎನ್ನದೆ ಎಲ್ಲರೂ ಒಗ್ಗೂಡಿ ವರದಣೆ ವಿರೋಧಿಸಬೇಕು ಎಂದು ಕರೆ ನೀಡಿದರು.
ಪ್ರಮುಖರಾದ ನಾರಾಯಣ ರಾಠೋಡ್, ಮೋಹನ ಪೋಲಕಪಳ್ಳಿ, ಮೋಹನ ಪವಾರ್, ಕಿಶನ್ ಕುಸರಂಪಳ್ಳಿ, ಯಮರಾಜ, ಮೋಹನ್ ಮಾಸ್ಟರ್, ದಿಲೀಪಕುಮಾರ, ಗೋವಿಂದ ನಾಯಕ್, ರಮೇಶ ಚಿಕ್ಕನಿಂಗದಳ್ಳಿ, ನೀಲಕಂಠ, ಬನ್ಸಿಲಾಲ್, ಓಮನಾಥ ಜಾಧವ್, ದೇಸು ಪವಾರ್, ಜಗನ್ನಾಥ ಅಗಸಲಣಿ ಇತರರಿದ್ದರು.
ಬಲಭೀಮ ಅಧ್ಯಕ್ಷ, ತುಕಾರಾಮ ಕಾರ್ಯದರ್ಶಿ
ಬಂಜಾರ ಸಮಾಜದಲ್ಲಿ ವರದಣೆ ಪಿಡುಗು ನಿರ್ಮೂಲನೆ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ವರದಣೆ ಪಿಡುಗು ನಿರ್ಮೂಲನೆ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. ಬಲಭೀಮ ನಾಯಕ (ಅಧ್ಯಕ್ಷ ), ರವಿ ರಾಠೋಡ್, ಗುರುನಾಥ ಮಾಸ್ಟರ್ (ಉಪಾಧ್ಯ), ತುಕಾರಾಮ ಟಿ.ಪಿ.ಎಸ್(ಕಾರ್ಯದರ್ಶಿ), ಗೋಪಾಲದೇವ ಜಾಧವ್ (ಖಜಾಂಚಿ), ರಾಮಶೆಟ್ಟಿ ಮಾಸ್ಟರ್ (ಗೌರವಾಧ್ಯಕ್ಷ ), ಮೇರಾಜ ರಾಠೋಡ್, ಮೋತಿರಾಮ ನಾಯಕ, ರಾಮಶೆಟ್ಟಿ ಪವಾರ್, ಬಾಬುರಾವ ಸಿಆರ್ಪಿ, ಹೀರಾಸಿಂಗ್ ರಾಠೋಡ್, ಅಶೋಕ ಚವ್ಹಾಣ್, ಪ್ರೇಮಸಿಂಗ್ ಜಾಧವ್, ರಾಜು ಪವಾರ್, ದಶರಥ ರಾಠೋಡ್, ವಿಠಲ್ ಕಾರಬಾರಿ, ಡಾ. ತುಕರಾಮ ಪವಾರ್, ಚಂದರ ಕಾರಬಾರಿ, ಚಂದು ದಳಪತಿ, ಪ್ರಭು ನಾಯಕ, ಭೀಮಶೆಟ್ಟಿ ಚವ್ಹಾಣ್ (ಮಾರ್ಗದರ್ಶನ ಮಂಡಲದ ಸದಸ್ಯರು).