ಭಾಲ್ಕಿಯ ತಾಲೂಕು ಸರ್ಕಾರಿ ನೌಕರರ ಸಂಘದ ಕಚೇರಿ ಆವರಣದಲ್ಲಿ ಖ್ಯಾತ ಗಾಯಕಿ ಎಸ್.ಜಾನಕಿ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಸಲ್ಲಿಸಿ ನುಡಿನಮನ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ರಾಜಪ್ಪ ಪಾಟೀಲ್ ಇತರರಿದ್ದರು.
- ಭಾಲ್ಕಿಯಲ್ಲಿ ಖ್ಯಾತ ಗಾಯಕಿ ಎಸ್.ಜಾನಕಿಗೆ ನುಡಿನಮನ
ಭಾಲ್ಕಿ: ಗಾನ ಕೋಗಿಲೆ ಎಸ್.ಜಾನಕಿ ನಿಧನ ಸಂಗೀತ ಮತ್ತು ಸಂಸ್ಕೃತಿ ಲೋಕಕ್ಕೆ ತುಂಬಲಾರದ ನಷ್ಟ. ಹಲವು ಭಾಷೆಗಳಲ್ಲಿ ಅವರು ಹಾಡಿದ ಗೀತೆಗಳು ತಲೆಮಾರುಗಳ ಮನಸ್ಸು ಗೆದ್ದಿವೆ ಎಂದು ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಹೇಳಿದರು.
ನಗರದ ತಾಲೂಕು ಸರ್ಕಾರಿ ನೌಕರರ ಸಂಘದ ಕಚೇರಿ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಎಸ್.ಜಾನಕಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್.ಜಾನಕಿ ಅವರು ಆಂಧ್ರಪ್ರದೇಶದವರಾದರೂ ಕರ್ಮಭೂಮಿ ಕರ್ನಾಟಕವಾಗಿತ್ತು. ಮಾತೃ ಭಾಷೆಯಲ್ಲಿ ಕಡಿಮೆ ಗೀತೆ ಹಾಡಿದ್ದರೂ ಕನ್ನಡ ಚಲನಚಿತ್ರದಲ್ಲಿ ದಾಖಲೆ ಹಾಡುಗಳನ್ನು ಹಾಡಿದ್ದಾರೆ. ಕನ್ನಡ ಚಿತ್ರ ಪ್ರೇಮಿಗಳಿಗೆ ಮಧುರ ಧ್ವನಿಯ ಮೂಲಕ ಸಂಗೀತದ ರಸದೌತಣ ನೀಡಿದ್ದರು. ಅಪ್ರತಿಮ ಗಾಯಕರಾಗಿ ಕನ್ನಡ ನಾಡು ನುಡಿಗೆ ವಿಶ್ವ ಮಟ್ಟದಲ್ಲಿ ಗೌರವ ತರುವಲ್ಲಿ ಪ್ರಮುಖರಾಗಿದ್ದರು ಎಂದು ಸ್ಮರಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ಮಾತಾನಾಡಿಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ ಭಾರತದ ಸುಮಾರು 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿರುವ ಜಾನಕಿ ಅಮ್ಮ, ಸಂಗೀತ ಲೋಕದ ಧ್ರುವತಾರೆಯಾಗಿದ್ದರು ಎಂದು ಬಣ್ಣಿಸಿದರು.
ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ತಾಲೂಕು ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಶಿವಕುಮಾರ ಫುಲಾರೆ, ಪ್ರಧಾನ ಕಾರ್ಯದರ್ಶಿ ರಾಜಪ್ಪ ಪಾಟೀಲ್ ಮಾತನಾಡಿದರು.
ದೈಹಿಕ ಶಿಕ್ಷಣ ಅಧಿಕಾರಿ ರೋಹಿದಾಸ ರಾಠೋಡ್, ಶಿಕ್ಷಣ ಸಂಯೋಜಕ ಅರ್ಜುನ ಕಾಂಬಳೆ, ವೆಂಕಟೇಶ, ಅಶೋಕ ಕುಂಬಾರ, ದೇವಿದಾಸ ಮೇತ್ರೆ, ಶರಣಪ್ಪ, ಸಂಜುಕುಮಾರ, ಬಸನಗೌಡ ಪಾಟೀಲ, ಚನ್ನಪ್ಪ ತಳವಾಡೆ ಇತರರಿದ್ದರು. ದೀಪಕ ಠಮಕೆ ನಿರೂಪಣೆ ಮಾಡಿದರು. ಚಂದ್ರಕಾಂತ ತಳವಾಡೆ ವಂದಿಸಿದರು.