ಕಲಬುರಗಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನ ಕಾರ್ಯಕ್ರಮವನ್ನು ಆಯೋಗದ ಅಧ್ಯಕ್ಷೆ ಮಾಲತಿ ರೇಶ್ಮಿ ಉದ್ಘಾಟಿಸಿದರು. ವೈಜನಾಥ ಝಳಕಿ, ಆರತಿ ರಾಠೋಡ, ಮುನಾವರ್ ದೌಲಾ, ಕೆ.ಮನೋಹರ ಕುಮಾರ, ರಫಿಕ್ ಲಾಡ್ಜಿ, ಬಾಪುಗೌಡ ಪಾಟೀಲ್ ಇತರರಿದ್ದರು.
- ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಅಧ್ಯಕ್ಷೆ ಮಾಲತಿ ಹೇಳಿಕೆ
- ಕಲಬುರಗಿಯಲ್ಲಿ ಹಕ್ಕುಗಳ ದಿನಾಚರಣೆ
ಕಲಬುರಗಿ: ಗ್ರಾಹಕರು ವಸ್ತುಗಳ ಖರೀದಿ ಜತೆ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಯಾವುದೇ ಅನ್ಯಾಯ ನಡೆದರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (ಪ್ರಭಾರಿ) ಅಧ್ಯಕ್ಷೆ ಮಾಲತಿ ರೇಶ್ಮಿ ಹೇಳಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕಲಬುರಗಿ ಪೀಠ, ಜಿಲ್ಲಾ ಆಯೋಗದ ಸಹಯೋಗದಡಿ ಹೊಸ ಐವಾನ್&ಇ&ಶಾಹಿ ಅತಿಥಿಗೃಹ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸುರತ ಉತ್ಪನ್ನಗಳು ಆತ್ಮವಿಶ್ವಾಸದ ಗ್ರಾಹಕರು ಧ್ಯೇಯ ಒಳಗೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಗ್ರಾಹಕರು ತಾವು ಬಳಸುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಮತ್ತು ಯೂರಿಯಾಮಿಶ್ರಿತ ಎಣ್ಣೆ ಬಳಕೆಯಿಂದ ಹೃದಯಾಘಾತದಂತಹ ಮಾರಕ ಕಾಯಿಲೆಗಳು ಹೆಚ್ಚುತ್ತಿವೆ. ಹೀಗಾಗಿ ಗ್ರಾಹಕರು ಅರಿವು ಬೆಳೆಸಿಕೊಂಡು ಶುದ್ಧ ಆಹಾರಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಆಹಾರ ಸುರತೆ ದೃಷ್ಟಿಯಿಂದ ಗ್ರಾಹಕರು ತಾವೇ ಸ್ವತ@ ಶುದ್ಧ ಎಣ್ಣೆ ಮನೆಯಲ್ಲೆ ತಯಾರಿಸಿಕೊಳ್ಳಲು ಸರ್ಕಾರದಿಂದ ಸಬ್ಸಿಡಿ ಸೌಲಭ್ಯ ದೊರೆಯುತ್ತಿದ್ದು, ಶೇಂಗಾ ಅಥವಾ ಕುಸುಬಿ ಬೀಜ ಬಳಸಿ ಎಣ್ಣೆ ತೆಗೆಯುವ ಸಣ್ಣ ಟಕಗಳನ್ನು 25&30 ಸಾವಿರ ರೂ. ಹೂಡಿಕೆಯಲ್ಲಿ (ಸರ್ಕಾರದ ಸಬ್ಸಿಡಿ ಕಳೆದು) ಸ್ಥಾಪಿಸಬಹುದು ಎಂದು ಸಲಹೆ ನೀಡಿದರು.
ಸರ್ಕಾರದ ನೆರವಿನಿಂದ ಎಪಿಎಂಸಿ ಮೂಲಕ ಇಂತಹ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಿಯಾಯಿತಿ ದೊರೆಯಲಿದ್ದು, ಸಣ್ಣ ಟಕ ಸ್ಥಾಪಿಸಿ ರೈತರು ಮತ್ತು ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದರು.
ಜಿಲ್ಲಾ ಗ್ರಾಹಕರ ರಣಾ ಪರಿಷತ್ ಸದಸ್ಯ ವೈಜನಾಥ ಝಳಕಿ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವಿರಲಿ. ಸಣ್ಣ ಅನ್ಯಾಯವನ್ನೂ ಸಹಿಸಬೇಡಿ. ನಮ್ಮ ಹಕ್ಕು ಹೆಮ್ಮೆಯಿಂದ ಚಲಾಯಿಸೋಣ. ಒಬ್ಬ ಜಾಗೃತ ಗ್ರಾಹಕ ಇಡುವ ಮೊದಲ ಹೆಜ್ಜೆ ಇಡೀ ಸಮಾಜಕ್ಕೆ ದಾರಿದೀಪವಾಗುತ್ತದೆ ಎಂದು ಹೇಳಿದರು.
ಕಲಬುರಗಿಯ ಶೇ.90 ಹಾಲಿನ ಬೇಡಿಕೆ ಮಹಾರಾಷ್ಟ್ರ ಪೂರೈಸುತ್ತಿದೆ. ಇವುಗಳಲ್ಲಿ ಯೂರಿಯಾ, ಸಲ್ಫೇಟ್ ಅಥವಾ ಸುಣ್ಣದಂತಹ ಹಾನಿಕಾರಕ ಪದಾರ್ಥಗಳಿವೆಯೇ ಎಂದು ಪರೀಸಲು ವ್ಯವಸ್ಥಿತ ಲ್ಯಾಬ್ ಇಲ್ಲದಿರುವುದು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿದೆ ಎಂದು ಸಂಪ್ತ ಮಾಹಿತಿ ನೀಡಿದರು.
ಜಿಲ್ಲಾ ವಕೀಲರ ಸಂದ ಉಪಾಧ್ಯಕ್ಷೆ ಆರತಿ ರಾಠೋಡ ಮಾತನಾಡಿ, ಅಮೆರಿಕ ಮಾಜಿ ಅಧ್ಯ ಜಾನ್ ಕೆನಡಿ 1962ರಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ಉತ್ಪಾದಕರು ಮತ್ತು ಗ್ರಾಹಕರ ಮಧ್ಯೆ ಅನ್ಯೋನ್ಯ ಸಂಬಂಧವಿರಬೇಕು. ಉತ್ಪಾದಕರು ಕೇವಲ ಲಾಭಕ್ಕಾಗಿ ವಸ್ತುಗಳನ್ನು ಉತ್ಪಾದಿಸುವುದಷ್ಟೇ ಅಲ್ಲದೆ ಅವು ಗ್ರಾಹಕರನ್ನು ಮೆಚ್ಚಿಸುವ ಮತ್ತು ಆಕರ್ಷಿಸುವ ಗುಣಮಟ್ಟ ಹೊಂದಿರಬೇಕು ಎಂದು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ಕೆ.ಮನೋಹರ ಕುಮಾರ, ಕಾನೂನು ಮಾಪನಶಾಸ ಇಲಾಖೆ ಸಹಾಯಕ ನಿಯಂತ್ರಕ ರಫಿಕ್ ಲಾಡ್ಜಿ, ಜಿಲ್ಲಾ ಗ್ರಾಹಕರ ರಣಾ ಪರಿಷತ್ ಸದಸ್ಯ ಬಾಪುಗೌಡ ಪಾಟೀಲ್ ಇತರರಿದ್ದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮುನಾವರ್ ದೌಲಾ ಸ್ವಾಗತಿಸಿದರು.
ಸಂಧಾನ ನ್ಯಾಯಾಲಯದ ಹೊರಗಡೆ ಗ್ರಾಹಕರು ಮತ್ತು ಕಂಪನಿಗಳು ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ವಿಶೇಷವಾಗಿ ವಿಮೆ ಕಂಪನಿಗಳ ಜತೆಗಿನ ವಿವಾದಗಳು ಇಂದು ಸುಲಭವಾಗಿ ಬಗೆಹರಿಯುತ್ತಿವೆ.