ಕಾರ್ಯಕ್ರಮದಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕಲಬುರಗಿ ಪೀಠ ಮತ್ತು ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಮತ್ತು ಸಹಾಯಕ ಆಡಳಿತಾಧಿಕಾರಿ ಕೆ. ಮನೋಹರ ಕುಮಾರ ಹಾಗೂ ಸಿಬ್ಬಂದಿ ವರ್ಗದವರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಫಿಕ ಲಾಡಜಿ, ಹಾಗೂ ಸಿಬ್ಬಂದಿ ವರ್ಗ, ಕಲಬುರಗಿ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯರು, ಹಾಗೂ ಕಲಬುರಗಿ ಶ್ರೀ ಬಸವೇಶ್ವರ, ರೂರಲ್ ಡೆವಲಪಮೆಂಟ್ ಟ್ರಸ್ಟ ಅಧ್ಯಕ್ಷ ಬಾಪುಗೌಡ ಪಾಟೀಲ ಹಾಗೂ ಗ್ರಾಹಕರು ಇನ್ನಿತರರು ಉಪಸ್ಥಿತರಿದ್ದರು.
ಕಲಬುರಗಿ: ಗ್ರಾಹಕರು ಕೇವಲ ವಸ್ತುಗಳನ್ನು ಖರೀದಿಸುವವರಾಗದೆ, ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಯಾವುದೇ ಅನ್ಯಾಯ ನಡೆದರೂ ಅದನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (ಪ್ರಭಾರಿ) ಅಧ್ಯಕ್ಷರಾದ ಮಾಲತಿ ರೇಶ್ಮಿ ಹೇಳಿದರು.
ಶುಕ್ರವಾರ ನಗರದ ಹೊಸ ಐವಾನ-ಎ-ಶಾಹಿ ಅತಿಥಿ ಗೃಹದ ಸಭಾಂಗಣದಲ್ಲಿ ಆಯೋಜಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕಲಬುರಗಿ ಪೀಠ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕಲಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ “ಸುರಕ್ಷಿತ ಉತ್ಪನ್ನಗಳು ಆತ್ಮ ವಿಶ್ವಾಸದ ಗ್ರಾಹಕರು” ಧ್ಯೇಯ ಒಳಗೊಂಡ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ 2026 ಕಾರ್ಯಕ್ರಮವನ್ನು ಜ್ಯೋತಿ ಬೇಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಗ್ರಾಹಕರು ತಾವು ಬಳಸುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಹಾಗೂ ಯೂರಿಯಾ ಮಿಶ್ರಿತ ಎಣ್ಣೆಯ ಬಳಕೆಯಿಂದ ಹೃದಯಾಘಾತದಂತಹ ಮಾರಕ ಕಾಯಿಲೆಗಳು ಹೆಚ್ಚುತ್ತಿವೆ. ಹೀಗಾಗಿ ಗ್ರಾಹಕರು ಅರಿವು ಬೆಳೆಸಿಕೊಂಡು ಶುದ್ಧ ಆಹಾರಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಆಹಾರದ ಸುರಕ್ಷತೆಯ ದೃಷ್ಟಿಯಿಂದ ಗ್ರಾಹಕರು ತಾವೇ ಸ್ವತಃ ಶುದ್ಧ ಎಣ್ಣೆಯನ್ನು ಮನೆಯಲ್ಲೇ ತಯಾರಿಸಿಕೊಳ್ಳಲು ಎಣ್ಣೆ ಉತ್ಪಾದನೆಗೆ ಸರ್ಕಾರದಿಂದ ಸಬ್ಸಿಡಿ ಸೌಲಭ್ಯ ದೋರೆಯುತ್ತಿದ್ದು, ಇಂತಹ ಅವಕಾಶಗಳನ್ನು ನೀಡುತ್ತಿದ್ದು, ಶೇಂಗಾ ಅಥವಾ ಕುಸುಬಿ ಬೀಜಗಳನ್ನು ಬಳಸಿ ಎಣ್ಣೆ ತೆಗೆಯುವ ಸಣ್ಣ ಘಟಕಗಳನ್ನು ಕೇವಲ 25 ರಿಂದ 30 ಸಾವಿರ ರೂಪಾಯಿಗಳ ಹೂಡಿಕೆಯಲ್ಲಿ (ಸರ್ಕಾರದ ಸಬ್ಸಿಡಿ ಕಳೆದು) ಸ್ಥಾಪಿಸಬಹುದು.
ಸರ್ಕಾರದ ನೆರವಿನಿಂದ ಎಪಿಎಂಸಿ ಮೂಲಕ ಇಂತಹ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಿಯಾಯಿತಿ ದೊರೆಯಲಿದ್ದು, ಸಣ್ಣ ಘಟಕಗಳ ಸ್ಥಾಪಪಿಸಿಕೊಂಡು ರೈತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. 1986ರ ಹಳೆಯ ಕಾಯ್ದೆಗೆ ಹೋಲಿಸಿದರೆ 2019ರ ಹೊಸ ಕಾಯ್ದೆಯು ಗ್ರಾಹಕರಿಗೆ ಹೆಚ್ಚಿನ ಶಕ್ತಿ ನೀಡಿದೆ.
ಸಂಧಾನ ನ್ಯಾಯಾಲಯದ ಹೊರಗಡೆ ಗ್ರಾಹಕರು ಮತ್ತು ಕಂಪನಿಗಳು ಮಾತುಕತೆಯ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದರಲ್ಲಿ ಅವಕಾಶವಿದೆ. ವಿಶೇಷವಾಗಿ ವಿಮೆ ಕಂಪನಿಗಳ ಜೊತೆಗಿನ ವಿವಾದಗಳು ಇಂದು ಸುಲಭವಾಗಿ ಬಗೆಹರಿಯುತ್ತಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರು ಸಹ ವೈದ್ಯಕೀಯ ನಿರ್ಲಕ್ಷ್ಯದ ವಿರುದ್ಧ ಗ್ರಾಹಕ ನ್ಯಾಯಾಲಯದ ಮೊರೆ ಹೋಗಬಹುದು ಸುಪ್ರೀಂ ಕೋರ್ಟ್ ತೀರ್ಪು ಸಹ ಬಂದಿದೆ. ಬಡವರಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತವಾಗಿ ವಕೀಲರ ನೆರವು ನೀಡಲಾಗುತ್ತದೆ. ಅನ್ಯಾಯಕ್ಕೊಳಗಾದವರು ಗೊಂದಲಕ್ಕೀಡಾಗದೆ ಪ್ರಾಧಿಕಾರವನ್ನು ಸಂಪರ್ಕಿಸಿ ನ್ಯಾಯ ಪಡೆಯಬಹುದು ಉಚಿತ ವಕೀಲರ ಸೌಲಭ್ಯ ಸಹ ದೊರೆಯಲಿದೆ ಎಂದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಮಹಾತ್ಮಗಾಂಧಿಜೀ ಗ್ರಾಹಕರ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿಗಳು, ವಕೀಲರು ಹಾಗೂ ಕಲಬುರಗಿ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯರಾದ ವೈಜನಾಥ ಝಳಕಿ "ಸುರಕ್ಷಿತ ಉತ್ಪನ್ನಗಳು, ಆತ್ಮವಿಶ್ವಾಸದ ಗ್ರಾಹಕರು" ಎಂಬ ಧ್ಯೇಯವಾಕ್ಯದಡಿ ಮಾತನಾಡಿ, ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವಿರಲಿ. ಸಣ್ಣ ಅನ್ಯಾಯಗಳನ್ನೂ ಸಹಿಸಬೇಡಿ ನಮ್ಮ ಹಕ್ಕನ್ನು ನಾವು ಹೆಮ್ಮೆಯಿಂದ ಚಲಾಯಿಸೋಣ. ಒಬ್ಬ ಜಾಗೃತ ಗ್ರಾಹಕ ಇಡುವ ಮೊದಲ ಹೆಜ್ಜೆ ಇಡೀ ಸಮಾಜಕ್ಕೆ ದಾರಿದೀಪವಾಗುತ್ತದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ಕೇಂದ್ರಸ್ಥಾನವಾಗಿರುವ ಕಲಬುರಗಿಯಲ್ಲಿ ಕೇವಲ ಒಂದು ಸರ್ಕಾರಿ ಆಹಾರ ಸುರಕ್ಷತಾ ಪ್ರಯೋಗಾಲಯ ಮಂಜೂರಾಗಿದೆ. ಆದರೆ, ಈ ಲ್ಯಾಬ್ ಪ್ರಸ್ತುತ ಬಸ್ ನಿಲ್ದಾಣದ ಬಳಿಯಿರುವ ಸಣ್ಣ ಪತ್ರಾಶೆಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಹಾರ ಸುರಕ್ಷತೆಯ ಸ್ಥಿತಿ ಶೋಚನೀಯವಾಗಿದೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗದಿದ್ದರೆ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಹಾಗೂ ಸರ್ಕಾರ ಕೂಡಲೇ ಕಲಬುರಗಿಯಲ್ಲಿ ಸುಸಜ್ಜಿತ ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಿ, ದಕ್ಷ ಅಧಿಕಾರಿಗಳನ್ನು ನೇಮಿಸಬೇಕೆಂದು ಸಮಸ್ತ ನಾಗರಿಕರ ಪರವಾಗಿ ಮನವಿ ಮಾಡಿದರು.
ಕಲಬುರಗಿಯ ಶೇ. 90 ರಷ್ಟು ಹಾಲಿನ ಬೇಡಿಕೆಯನ್ನು ಮಹಾರಾಷ್ಟ್ರದ ಹಾಲು ಪೂರೈಸುತ್ತಿದೆ. ಇವುಗಳಲ್ಲಿ ಯೂರಿಯಾ, ಸಲ್ಫೇಟ್ ಅಥವಾ ಸುಣ್ಣದಂತಹ ಹಾನಿಕಾರಕ ಪದಾರ್ಥಗಳಿವೆಯೇ ಎಂದು ಪರೀಕ್ಷಿಸಲು ವ್ಯವಸ್ಥಿತ ಲ್ಯಾಬ್ ಇಲ್ಲದಿರುವುದು ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿದೆ. ಎಂದು ಸಂಕ್ಷಿಪ್ತ ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಆರತಿ ರಾಠೋಡ ಮಾತನಾಡಿ, ಅಮೆರಿಕಾದ ಮಾಜಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಾನ್ ಎಫ್. ಕೆನಡಿ ಅವರು 1962 ರಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರು. ಉತ್ಪಾದಕರು ಮತ್ತು ಗ್ರಾಹಕರ ಮಧ್ಯೆ ಒಂದು ಅನ್ಯೋನ್ಯವಾದ ಸಂಬAಧವಿರಬೇಕು. ಉತ್ಪಾದಕರು ಕೇವಲ ಲಾಭಕ್ಕಾಗಿ ವಸ್ತುಗಳನ್ನು ಉತ್ಪಾದಿಸುವುದಷ್ಟೇ ಅಲ್ಲದೆ, ಆ ಉತ್ಪನ್ನಗಳು ಗ್ರಾಹಕರನ್ನು ಮೆಚ್ಚಿಸುವ ಮತ್ತು ಆಕರ್ಷಿಸುವ ಗುಣಮಟ್ಟವನ್ನು ಹೊಂದಿರಬೇಕು. ಎಂದು ಹೇಳಿದರು.
ಪ್ರತಿ ವರ್ಷ ಮಾರ್ಚ್ 15ರಂದು ಈ 'ವಿಶ್ವ ಗ್ರಾಹಕರ ದಿನಾಚರಣೆ'ಯನ್ನು ಆಚರಿಸಲಾಗುತ್ತದೆ. ಉತ್ಪಾದಕರು ಮತ್ತು ಗ್ರಾಹಕರ ಮಧ್ಯೆ ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ವೃದ್ಧಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಅತೀವ ಪೈಪೋಟಿ ಇರುವುದರಿಂದ ಉತ್ಪಾದಕರು ಮತ್ತು ಗ್ರಾಹಕರ ಮಧ್ಯೆ ಸಾಮರಸ್ಯದ ಕೊರತೆ ಕಂಡುಬರುತ್ತಿದೆ. ಇದರಿಂದಾಗಿ ಗ್ರಾಹಕ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮುನಾವರ ದೌಲಾ ಅವರು ಸ್ವಾಗತಿಸಿದರು.
ಕಾರ್ಯಕ್ರಮದಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕಲಬುರಗಿ ಪೀಠ ಮತ್ತು ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಮತ್ತು ಸಹಾಯಕ ಆಡಳಿತಾಧಿಕಾರಿ ಕೆ. ಮನೋಹರ ಕುಮಾರ ಹಾಗೂ ಸಿಬ್ಬಂದಿ ವರ್ಗದವರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಫಿಕ ಲಾಡಜಿ, ಹಾಗೂ ಸಿಬ್ಬಂದಿ ವರ್ಗ, ಕಲಬುರಗಿ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತಿನ ಸದಸ್ಯರು, ಹಾಗೂ ಕಲಬುರಗಿ ಶ್ರೀ ಬಸವೇಶ್ವರ, ರೂರಲ್ ಡೆವಲಪಮೆಂಟ್ ಟ್ರಸ್ಟ ಅಧ್ಯಕ್ಷ ಬಾಪುಗೌಡ ಪಾಟೀಲ ಹಾಗೂ ಗ್ರಾಹಕರು ಇನ್ನಿತರರು ಉಪಸ್ಥಿತರಿದ್ದರು.