ದೊಡ್ಡಬಳ್ಳಾಪುರದ ವಡ್ಡರಹಳ್ಳಿಯಲ್ಲಿ ಫಲಾನುಭವಿಗಳಿಗೆ ಶಾಸಕ ಧೀರಜ್​ ಮುನಿರಾಜು ಸವಲತ್ತು ವಿತರಿಸಲಾಯಿತು. ತಹಸೀಲ್ದಾರ್​ ಮಲ್ಲಪ್ಪ ಕೆ ಯರಗೋಳ, ಮುಖಂಡರಾದ ರಾಜಗೋಪಾಲ, ಜಯಚಂದ್ರ, ಪಿಡಿಒ ವೀಣಾ ಇತರರು ಇದ್ದರು. 
ರಾಜ್ಯ

ಸ್ಥಳಿಯರ ಸಮಸ್ಯೆ ಬಗೆಹರಿಸಲು ಯತ್ನ / DODABALLAPUR

ದೊಡ್ಡಬಳ್ಳಾಪುರ : ತಾಲೂಕಿನ ಪ್ರತಿ ಗ್ರಾಮದ ಮನೆಗಳಿಗೆ ತೆರಳುವ ಮೂಲಕ ಸ್ಥಳಿಯ ಸಮಸ್ಯೆ ಆಲಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ಗ್ರಾಮ ಪರಿವರ್ತನೆ ಯಾತ್ರೆ ಆರಂಭಿಸಲಾಗಿದೆ ಎಂದು ಶಾಸಕ ಧೀರಜ್​ ಮುನಿರಾಜು ತಿಳಿಸಿದರು.
ತಾಲೂಕಿನ ವಡ್ಡರಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪರಿವರ್ತನೆ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಥಳಿಯ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಾಗಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಈ ಮೂಲಕ ಜನತೆಯ ಸಮಸ್ಯೆ ಆಲಿಸಿ, ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಅಧಿಕಾರಿಗಳು ರ್ನಿಲಕ್ಷ$್ಯ ತೋರಿದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕಾರ್ಯಕ್ರಮ ಸಹಕಾರಿಯಾಗಿದೆ. ಬೂತ್​ ವಡ್ಡರಹಳ್ಳಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ವಾರಕ್ಕೆ ಗರಿಷ್ಠ 3 ದಿನ ಕನಿಷ್ಠ 2 ಈ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿದ್ದೇನೆ. ತಾಲೂಕಿನ ಎಲ್ಲ ಹಳ್ಳಿಗಳಿಗೂ ಭೇಟಿಬೀಡಿ ಜನರೊಂದಿಗೆ ಬೆರೆತು ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಬೇಕು. ಯಾತ್ರೆ ಮೂಲಕ ಗ್ರಾಮದಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸಲಿದ್ದೇವೆ ಎಂದರು.
ವಡ್ಡರಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನದಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒಂದು ಕೋಟಿ ರೂ. ಅನುದಾನ ನೀಡಿದ್ದು, ಸರ್ಕಾರದ ಇತರೆ ಸಾಮಾನ್ಯ ಅನುದಾನದಡಿ ಒಂದು ಕೋಟಿ ನೀಡುವ ಮೂಲಕ ಗ್ರಾಮಕ್ಕೆ ಉತ್ತಮ ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮಕ್ಕೆ ಸ್ವಾಗತ ಕಮಾನು ನಿಮಾರ್ಣ ಹಾಗೂ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈಗಾಗಲೇ ಮುಜರಾಯಿ ಇಲಾಖೆಗೆ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವಂತೆ ಪತ್ರ ರವಾನೆ ಮಾಡಿದ್ದೇನೆ ಎಂದರು. ಫಲಾನುಭವಿಗಳಿಗೆ ಇ&-ಖಾತೆ, ಆಯುಷ್ಮಾನ್​ ಕಾರ್ಡ್​ ವಿತರಿಸಿ, ನೀರಿನ ಘಟಕ ಉದ್ಘಾಟಿಸಲಾಯಿತು.