ಬೆಳಗಾವಿ ಶಿವಬಸವ ನಗರದ ಲಿಂಗಾಯತ ಸಭಾಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಪ್ರಿಯಾ ಸವದಿ, ಮಧುಮತಿ ಹಿರೇಮಠ, ಸರೋಜಾ ನಿಶಾನ್ದಾರ್​, ಶಾರದಾ ಭೋಜ ಇತರರಿದ್ದರು. 
ರಾಜ್ಯ

ಮಹಿಳೆಯರಲ್ಲಿ ಸಕಾರಾತ್ಮಕ ಚಿಂತನೆ ಮೂಡಲಿ

ಬೆಳಗಾವಿ: ಇಲ್ಲಿನ ಶಿವಬಸವ ನಗರದ ಲಿಂಗಾಯತ ಸಭಾಭವನದಲ್ಲಿ ಬುಧವಾರ ಲಿಂಗಾಯತ ಮಹಿಳಾ ಸಮಾಜ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಸಾಧಕರು, ಪ್ರಶಸ್ತಿ ಪುರಸ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ವಿಷಯಗಳ ಮೇಲೆ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕಲಾವಿದೆ ಪ್ರಿಯಾ ಸವದಿ ಮಾತನಾಡಿ, ಮಹಿಳೆಯರಿಗೆ ಇಂತಹ ವಿಚಾರಾತ್ಮಕ ಸಾಂಸತಿಕ ಕಾರ್ಯಕ್ರಮಗಳಿಂದ ಸಕಾರಾತ್ಮಕ ಚಿಂತನೆ ಮಾಡಲು ಪೂರಕವಾಗುತ್ತದೆ. ಹೀಗಾಗಿ ನಗರ, ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದರು. ಸಮಾಜದ ಅಧ್ಯೆ ಮಧುಮತಿ ಹಿರೇಮಠ ಸ್ವಾಗತಿಸಿದರು. ಕಾರ್ಯದರ್ಶಿ ರಾ ನಿರೂಪಿಸಿದರು. ಸರೋಜಾ ನಿಶಾನ್ದಾರ್​, ಶಾರದಾ ಭೋಜ, ವಿದ್ಯಾ ಗೌಡರ ಇತರರಿದ್ದರು.