ಗುರುಮಠಕಲ್‌ನ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಯುವ ಸಾಹಿತಿ ಡಾ.ಮರಿಯಪ್ಪ ನಾಟೇಕಾರ ಉದ್ಘಾಟಿಸಿದರು. ಮಲ್ಲಿಕಾರ್ಜುನ ಹೊಸಮನಿ, ಭೀಮಾಶಂಕರ ಕಲ್ಲೂರ, ಮೊಗುಲಪ್ಪ ನಾಯ್ಕಿನ್, ಜ್ಯೋತಿಲತಾ ತಡಬಿಡಿಮಠ, ಶಂಕರ ಗೂಳಿ ಇತರರಿದ್ದರು. 
ರಾಜ್ಯ

ಅಂಬೇಡ್ಕರ್ ವಿಚಾರಧಾರೆ ಸಾರ್ವಕಾಲಿಕ ಶ್ರೇಷ್ಠ

ಪ್ರಮುಖ ಮುಖ್ಯಾಂಶಗಳು

  • ಯುವ ಸಾಹಿತಿ ಡಾ.ಮರಿಯಪ್ಪ ನಾಟೇಕಾರ ಅನಿಸಿಕೆ
  • ಗುರುಮಠಕಲ್‌ನಲ್ಲಿ ಓದು ಕರ‍್ಯಕ್ರಮ
ಗುರುಮಠಕಲ್ :

ಮೇರು ವ್ಯಕ್ತಿತ್ವದ ಮೇಧಾವಿ, ತತ್ವಜÁ್ಞನಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರ ಧಾರೆಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ ಎಂದು ಯುವ ಸಾಹಿತಿ ಡಾ.ಮರಿಯಪ್ಪ ನಾಟೇಕಾರ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂದಿನ ಯುವಕರು ಅಂಬೇಡ್ಕರ್ ಜೀವನ ಚರಿತ್ರೆ ಓದಿ, ಅದನ್ನು ಅರ್ಥೈಸಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ, ಸಭೆ, ಸಮಾರಂಭಗಳಲ್ಲಿ ಮತ್ತು ವೇದಿಕೆಯ ಮೇಲೆ ಭಾಷಣ ಮಾಡುವಾಗ ಮಾತ್ರ ಜಾತಿ ತಾರತಮ್ಯ ಹೋಗಲಾಡಿಸಿದ್ದೇವೆ ಹೊರತು ಮನಸ್ಸಿನಿಂದ ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಜಾತಿ ವ್ಯವಸ್ಥೆ ಕಿತ್ತೆಸೆದು ಸಾಮಾಜಿಕ ಹೋರಾಟದ ಮೂಲಕ ದಲಿತರಿಗೆ, ದೀನ ದುರ್ಬಲರಿಗೆ ಮತ್ತು ಶೋಷಿತರಿಗೆ ನ್ಯಾಯ ದೊರಕಿಸಿಕೊಟ್ಟ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಅನುರಾಧ ಪ್ರಥಮ, ರಜನಿಕಾಂತ ದ್ವಿತೀಯ, ಪವನ್ ತೃತೀಯ ಸ್ಥಾನ ಪಡೆದರು. ವೀರೇಶ್ ಮತ್ತು ವಿಕೇಶ ಇಬ್ಬರಿಗೆ ಸಮಾಧಾನಕರ ಬಹುಮಾನ ನೀಡಿ ಅವರನ್ನು ಪುಸ್ತಕ ನೀಡಿ ಗೌರವಿಸಲಾಯಿತು. ಬಸ್ ಘಟಕದ ವ್ಯವಸ್ಥಾಪಕ ಭೀಮಾಶಂಕರ ಕಲ್ಲೂರ, ಮೊಗುಲಪ್ಪ ನಾಯ್ಕಿನ್, ಜ್ಯೋತಿಲತಾ ತಡಬಿಡಿಮಠ, ಶಂಕರ ಗೂಳಿ ಇತರರಿದ್ದರು.